ಆ್ಯಪ್ನಗರ

ಸಾಲ ಬಾಧೆ: ರೈತ ಮಹಿಳೆ ಆತ್ಮಹತ್ಯೆ

ರೈತ ಮಹಿಳೆಯೊಬ್ಬಳು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Vijaya Karnataka 1 Aug 2019, 5:00 am
ಆನವಟ್ಟಿ: ರೈತ ಮಹಿಳೆಯೊಬ್ಬಳು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
Vijaya Karnataka Web farmer lady suicide for loan trouble
ಸಾಲ ಬಾಧೆ: ರೈತ ಮಹಿಳೆ ಆತ್ಮಹತ್ಯೆ


ಜಡೆ ಹೋಬಳಿಯ ಸೂರಣಗಿ ಗ್ರಾಮದ ಸುಧಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕೃಷಿಗಾಗಿ ಜಡೆ ಕೆನರಾ ಬ್ಯಾಂಕ್‌ನಲ್ಲಿ 30 ಸಾವಿರ ಬೆಳೆಸಾಲ ಹಾಗೂ ಕೈಗಡವಾಗಿ ಹಲವರ ಬಳಿ ಹಣ ಪಡೆದಿದ್ದು, ಬಿತ್ತನೆ ಮಾಡಿದ ಬೆಳೆ ಸರಿಯಾಗಿ ಬರದ ಕಾರಣ ಸಾಲ ತೀರಿಸುವ ಬಗ್ಗೆ ಹೆದರಿ ತಮ್ಮ ಜಮೀನಿನಲ್ಲಿ ವಿಷ ಸೇವಿಸಿದ್ದಾರೆ ಎನ್ನಲಾಗಿದೆ. ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ದಾಖಲು ಮಾಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಪುತ್ರ ವೀರೇಂದ್ರ ಆನವಟ್ಟಿ ಠಾಣೆಗೆ ದೂರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ