ಆ್ಯಪ್ನಗರ

ಭೂಪರಿವರ್ತನೆ ಅಡ್ಡಿಗೆ ರೈತರ ವಿರೋಧ

ಇಲ್ಲಿನ ಗಣಪತಿ ಕೆರೆ ದಡದಲ್ಲಿನ ಚಂದ್ರಮಾವಿನಕೊಪ್ಪಲು ಜಮೀನಿನ ರೈತರು ಬುಧವಾರ ಜಮೀನುಗಳ ಭೂ ಪರಿವರ್ತನೆ ಮಾಡಲು ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

Vijaya Karnataka 27 Dec 2018, 5:00 am
ಸಾಗರ: ಇಲ್ಲಿನ ಗಣಪತಿ ಕೆರೆ ದಡದಲ್ಲಿನ ಚಂದ್ರಮಾವಿನಕೊಪ್ಪಲು ಜಮೀನಿನ ರೈತರು ಬುಧವಾರ ಜಮೀನುಗಳ ಭೂ ಪರಿವರ್ತನೆ ಮಾಡಲು ಅಡ್ಡಿಪಡಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
Vijaya Karnataka Web SMR-26sgr7


ಜಮೀನಿನ ರೈತ ರವಿ ಮಾತನಾಡಿ, ಚಂದ್ರಮಾವಿನಕೊಪ್ಪಲು ಗ್ರಾಮದ ಸರ್ವೇ ನಂ. 7ರಿಂದ 13ರವರೆಗೆ ನಾವುಗಳು ಐವತ್ತು ವರ್ಷಗಳಿಂದ ಜಮೀನು ಹೊಂದಿದ್ದೇವೆ. ಜಮೀನಿಗೆ ಸಂಬಂಧಪಟ್ಟಂತೆ ದಾಖಲೆ ಸಹ ನಮ್ಮ ಹೆಸರಿನಲ್ಲಿದೆ. ಜಮೀನಿಗೆ ಸಂಬಂಧಪಟ್ಟಂತೆ ಪರಭಾರೆ ಅವಧಿ ಸಹ ಮುಗಿದಿದೆ. ನಮ್ಮಲ್ಲಿ ಕೆಲವರಿಗೆ ಈ ಜಮೀನು ಹೊರತುಪಡಿಸಿ ಸ್ವಂತ ಮನೆ ಸಹ ಇಲ್ಲ. ನಮ್ಮ ಹಕ್ಕುದಾರಿ ಮಾಲೀಕತ್ವದ ಜಮೀನನ್ನು ಭೂಪರಿವರ್ತನೆ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದೇವೆ. ಆದರೆ ಕೆಲವರು ಜಮೀನು ಭೂಪರಿವರ್ತನೆಗೆ ಇಲ್ಲಸಲ್ಲದ ಅಡ್ಡಿ ಆತಂಕವನ್ನು ತಂದೊಡ್ಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಜಮೀನಿನಲ್ಲಿ ಮನೆ ಇತರೆ ಚಟುವಟಿಕೆ ನಡೆದರೆ ಗಣಪತಿ ಕೆರೆಗೆ ಯಾವುದೇ ಸಮಸ್ಯೆ ಸಹ ಆಗುವುದಿಲ್ಲ. ನಮ್ಮ ಹಕ್ಕುದಾರಿಕೆಯ ಜಮೀನನ್ನು ಸರಕಾರಕ್ಕೆ ಕೊಡುವುದಿಲ್ಲ. ಒಂದೊಮ್ಮೆ ನಮ್ಮ ಜಮೀನು ಕಿತ್ತುಕೊಳ್ಳಲು ಬಂದರೆ ಸಾಮೂಹಿಕವಾಗಿ ವಿಷ ಸೇವಿಸುವುದಾಗಿ ಬೆದರಿಕೆ ಹಾಕಿದರು.

ಇನ್ನೊಬ್ಬ ರೈತ ಅನಂತಪ್ಪ ಮಾತನಾಡಿ, ಚುನಾಯಿತ ಪ್ರತಿನಿಧಿಗಳು ನಮಗೆ ಅನಗತ್ಯ ತೊಂದರೆ ಕೊಡುತ್ತಿದ್ದಾರೆ. ನಗರಸಭೆ ಸಾಮಾನ್ಯಸಭೆಯಲ್ಲಿ ಸದರಿ ಜಮೀನಿಗೆ ಸಂಬಂಧಪಟ್ಟಂತೆ ಚರ್ಚೆ ನಡೆದು, ಭೂ ಬದಲಾವಣೆಯಾಗಿದೆ. ಅಭಿವೃದ್ಧಿ ಶುಲ್ಕ ಸಹ ಪಾವತಿಸಲಾಗಿದೆ. ಆದರೆ ನಗರಸಭೆಯಿಂದ ತಾಂತ್ರಿಕ ಅಭಿಪ್ರಾಯ ಮತ್ತು ಸಂಬಂಧಿಸಿದ ಕಡತವನ್ನು ಶಿವಮೊಗ್ಗ ಯೋಜನಾ ಪ್ರಾಧಿಕಾರಕ್ಕೆ ಕಳಿಸಿಲ್ಲ. ಇದರಿಂದ ಭೂಪರಿವರ್ತನೆ ಪ್ರಕ್ರಿಯೆ ವಿಳಂಬವಾಗುತ್ತಿದೆ . ಭೂಪರಿವರ್ತನಾ ಪ್ರಕ್ರಿಯೆಗೆ ತೊಂದರೆ ಕೊಡುತ್ತಿರುವವರ ವಿರುದ್ಧ ಎಸಿ ಸೂಕ್ತ ಕಾನೂನುಕ್ರಮ ಜರುಗಿಸಿ, ನಮ್ಮ ಹಕ್ಕುದಾರಿ ಮಾಲೀಕತ್ವದ ಜಮೀನಿಗೆ ಭೂಪರಿವರ್ತನೆ ಮಾಡಿಕೊಡಬೇಕೆಂದು ಒತ್ತಾಯಿಸಿದರು. ನಾಗರಾಜಸ್ವಾಮಿ, ಅಶೋಕ ಬೇಳೂರು, ಕನ್ನಪ್ಪ ಮುಳಕೇರಿ, ರತ್ನಮ್ಮ, ಸಾವಿತ್ರಮ್ಮ, ಮಾಲತಿ, ಜಯಮ್ಮ, ಯೋಗರಾಜ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ