ಆ್ಯಪ್ನಗರ

ಪಿಇಎಸ್‌ ಕಾಲೇಜಿನಲ್ಲಿ ಹಬ್ಬದೋತ್ಸವ

ಭಾರತದ ವಿಭಿನ್ನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಧರ್ಮಗಳ ಹಬ್ಬಗಳನ್ನು ಆಚರಿಸುವ ಮೂಲಕ ನಗರದ ಪಿಇಎಸ್‌ ಐಎಎಂಎಸ್‌ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಕಾಲೇಜಿನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದ್ದರು.

Vijaya Karnataka 15 Jan 2019, 5:00 am
ಶಿವಮೊಗ್ಗ : ಭಾರತದ ವಿಭಿನ್ನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಧರ್ಮಗಳ ಹಬ್ಬಗಳನ್ನು ಆಚರಿಸುವ ಮೂಲಕ ನಗರದ ಪಿಇಎಸ್‌ ಐಎಎಂಎಸ್‌ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಕಾಲೇಜಿನಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಸಿದ್ದರು.
Vijaya Karnataka Web SMR-14GANESH2


ದೀಪಾವಳಿ, ಕರ್ನಾಟಕದ ನವರಾತ್ರಿ, ಕ್ರಿಸ್‌ಮಸ್‌, ಕೇರಳದ ಓಣಂ, ಪಂಜಾಬಿನ ಲೋರಿ, ತಮಿಳು ನಾಡಿನ ಪೊಂಗಲ್‌, ಮಹಾರಾಷ್ಟ್ರದ ರಾಮನವಮಿ, ಉತ್ತರ ಭಾರತದ ಹೋಲಿ, ಕೃಷ್ಣ ಜನ್ಮಾಷ್ಟಮಿ, ಅಸ್ಸಾಂನ ಬಿಹೂ, ಸಂಕ್ರಾಂತಿ, ಗೌರಿ ಗಣೇಶ ಚರ್ತುರ್ಥಿ, ವರಮಹಾಲಕ್ಷ್ಮಿ ಹಬ್ಬ ಸೇರಿದಂತೆ ನಾನಾ ಹಬ್ಬಗಳ ವಾತಾವರಣ ನಿರ್ಮಿಸಿದ್ದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ತೊಟ್ಟು, ಪ್ರತಿಯೊಂದು ಕೊಠಡಿ ಆ ಹಬ್ಬದ ಸಾಂಪ್ರದಾಯಿಕ ಶೈಲಿಯಲ್ಲಿ ಸಿಂಗರಿಸಿ ಆ ಹಬ್ಬದಲ್ಲಿ ಮಾಡುವ ಸಾಂಪ್ರದಾಯಿಕ ಆಹಾರ ಪದಾರ್ಥ ತಯಾರಿಸಿದ್ದರು.

ಈ ಹಬ್ಬದೋತ್ಸವದಲ್ಲಿ ಪಿಇಎಸ್‌ ಟ್ರಸ್ಟ್‌ನ ಎಸ್‌.ವೈ.ಅರುಣಾದೇವಿ, ಮುಖ್ಯ ಆಡಳಿತ ಸಂಯೋಜನಾಧಿಕಾರಿ ಡಾ.ಆರ್‌.ನಾಗರಾಜ, ಪಿಇಎಸ್‌ಐಟಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಚೈತನ್ಯ ಕುಮಾರ್‌, ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಾಯಿಲತ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ