ಆ್ಯಪ್ನಗರ

ಬಂದ್‌ಗೆ ಒಕ್ಕೂಟದಿಂದ ಅಂತಿಮ ಸಿದ್ಧತೆ

ಜಿಲ್ಲಾ ಬಂದ್‌ ಹಿನ್ನೆಲೆಯಲ್ಲಿ ಹೋರಾಟದ ಅಂತಿಮ ಸಿದ್ಧತೆಗಳ ಪೂರ್ವಭಾವಿ ಸಭೆ ಮಂಗಳವಾರ ಬ್ರಾಸಂ ಸಭಾಭವನದಲ್ಲಿ ನಡೆಯಿತು.

Vijaya Karnataka 10 Jul 2019, 5:00 am
ಸಾಗರ: ಜಿಲ್ಲಾ ಬಂದ್‌ ಹಿನ್ನೆಲೆಯಲ್ಲಿ ಹೋರಾಟದ ಅಂತಿಮ ಸಿದ್ಧತೆಗಳ ಪೂರ್ವಭಾವಿ ಸಭೆ ಮಂಗಳವಾರ ಬ್ರಾಸಂ ಸಭಾಭವನದಲ್ಲಿ ನಡೆಯಿತು.
Vijaya Karnataka Web final preparation by the union for the band
ಬಂದ್‌ಗೆ ಒಕ್ಕೂಟದಿಂದ ಅಂತಿಮ ಸಿದ್ಧತೆ


ಪ್ರತಿಭಟನಾ ಮೆರವಣಿಗೆಗೆ ಮುನ್ನ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಪ್ರವಾಸಿಗರಿಗೆ ಬಂದ್‌ ಮಾಹಿತಿ, ಪಟ್ಟಣದಲ್ಲಿ ದ್ವಿಚಕ್ರ ವಾಹನ ರಾರ‍ಯಲಿ ನಡೆಸಬೇಕು. ವಿದ್ಯಾರ್ಥಿಗಳಿಗೆ ಸಿಇಟಿ ಹಣ ಪಾವತಿಸಲು ಬ್ಯಾಂಕ್‌ ವ್ಯವಹಾರಕ್ಕೆ ಅಡಚಣೆಯಾಗದಂತೆ ಎಚ್ಚರ ವಹಿಸಲು ಸೂಚಿಸಲಾಯಿತು.

ಬೆದರಿಕೆಯೊಡ್ಡಿ ಬಂದ್‌ ಮಾಡಿಸಬಾರದು. 11ಗಂಟೆಗೆ ಗಾಂಧಿ ಮೈದಾನದಿಂದ ಹೊರಡಲಿರುವ ಪ್ರತಿಭಟನಾ ಮೆರವಣಿಗೆ ಸಾಗರ್‌ ಹೋಟೆಲ್‌ ವೃತ್ತ, ಐತಪ್ಪ ವೃತ್ತ, ಮಾರ್ಕೆಟ್‌ ರಸ್ತೆ, ಬಿ.ಎಚ್‌.ರಸ್ತೆ, ಅಶೋಕ್‌ ರಸ್ತೆ, ಸಾಗರ್‌ ಹೋಟೆಲ್‌ ವೃತ್ತ, ಪೊಲೀಸ್‌ ಸ್ಟೇಷನ್‌ ಸರ್ಕಲ್‌, ಮುಖ್ಯ ಬಸ್‌ ನಿಲ್ದಾಣ, ಕೋರ್ಟ್‌ ರಸ್ತೆ ಮಾರ್ಗವಾಗಿ ಬಹಿರಂಗ ಸಭೆ ನಡೆಯಲಿರುವ ಗಾಂಧಿ ಮೈದಾನಕ್ಕೆ ಬಂದು ತಲುಪಲಿದೆ. ಬಹಿರಂಗ ಸಭೆ ನಂತರ ನಿರ್ಣಯ ತೆಗೆದುಕೊಳ್ಳಲಾಗುವುದು. ಸ್ಟಿಕರ್‌ ಮಾರಾಟ ಹಾಗೂ ದೇಣಿಗೆಯಿಂದ 50,600 ರೂ. ಸಂಗ್ರಹವಾಗಿದೆ ಎಂದು ಸಂಚಾಲಕ ಎಚ್‌.ಬಿ.ರಾಘವೇಂದ್ರ ಹೇಳಿದರು.

ಗೌರವಾಧ್ಯಕ್ಷ ಡಾ.ನಾ.ಡಿಸೋಜ, ಅಖಿಲೇಶ ಚಿಪ್ಪಳಿ, ಲೋಕೇಶ ಹುನಾಲುಮಡಿಕೆ, ಬಿ.ವಿ.ರವೀಂದ್ರನಾಥ್‌, ನಂದಾಗೊಜನೂರು, ದಿನೇಶ್‌, ಪ್ರವೀಣ್‌ಕುಮಾರ್‌, ಜಯರಾಮ್‌, ಪರಮೇಶ್ವರ್‌ ಕರೂರು, ಚೂಡಾಮಣಿ ರಾಮಚಂದ್ರ ಮತ್ತಿತರರು ಹಾಜರಿದ್ದರು.

ತೋಟಗಾರ್ಸ್‌ ಬೆಂಬಲ : ಬಂದ್‌ನ್ನು ಬೆಂಬಲಿಸಲು ಸಾಗರದ ದಿ ತೋಟಗಾರ್ಸ್‌ ಕ್ರೆಡಿಟ್‌ ಕೋ ಅಪರೇಟೀವ್‌ ಸೊಸೈಟಿ ಅಧ್ಯಕ್ಷ ರು ಹಾಗೂ ಆಡಳಿತ ಮಂಡಳಿ ಹಾಗೂ ಮ್ಯಾನೇಜರ್‌ ಮತ್ತು ಸಿಬ್ಬಂದಿ ತೀರ್ಮಾನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ