ಆ್ಯಪ್ನಗರ

ಮತ್ತೆ ಇಬ್ಬರು ಮಣಿಪಾಲಕ್ಕೆ, ಐದು ಮಂಗ ಸಾವು

ತಾಲೂಕಿನಲ್ಲಿ ಎರಡು ತಿಂಗಳಿನಿಂದ ಆತಂಕ ಸೃಷ್ಟಿಸಿರುವ ಮಂಗನ ಕಾಯಿಲೆ ಜ್ವರ ಬಾಧೆ ಮುಂದುವರಿದಿದ್ದು, ಅರಳಗೋಡಿನಿಂದ ಭಾನುವಾರ ಇಬ್ಬರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Vijaya Karnataka 4 Feb 2019, 5:00 am
ಸಾಗರ (ಶಿವಮೊಗ್ಗ) : ತಾಲೂಕಿನಲ್ಲಿ ಎರಡು ತಿಂಗಳಿನಿಂದ ಆತಂಕ ಸೃಷ್ಟಿಸಿರುವ ಮಂಗನ ಕಾಯಿಲೆ ಜ್ವರ ಬಾಧೆ ಮುಂದುವರಿದಿದ್ದು, ಅರಳಗೋಡಿನಿಂದ ಭಾನುವಾರ ಇಬ್ಬರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Vijaya Karnataka Web five monkey death again two at manipal
ಮತ್ತೆ ಇಬ್ಬರು ಮಣಿಪಾಲಕ್ಕೆ, ಐದು ಮಂಗ ಸಾವು


ದಿವಾಕರ ನೆಲಮಕ್ಕಿ ಹಾಗೂ ಶ್ರೀಮತಿ ಭಾನ್ಕುಳಿ ಎಂಬುವವರು ಜ್ವರದಿಂದ ಬಳಲುತ್ತಿದ್ದು ಮಣಿಪಾಲಗೆ ಹೆಚ್ಚಿನ ಚಿಕಿತ್ಸೆಗೆ ತೆರಳಿದ್ದಾರೆ. ಅರಳಗೋಡು ಭಾಗದಿಂದ ಶನಿವಾರ ಸಹ ಇಬ್ಬರನ್ನು ಮಣಿಪಾಲಕ್ಕೆ ಕಳಿಸಲಾಗಿತ್ತು. ಈ ನಡುವೆ ಕೆಎಂಸಿಯಲ್ಲಿರುವ ಸುರೇಶ್‌ ಅವರ ಆರೋಗ್ಯ ಹದಗೆಟ್ಟಿದ್ದು, ನಂತರ ಸುಧಾರಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಮಣಿಪಾಲದ ತುರ್ತುನಿಗಾ ಘಟಕದಲ್ಲಿ ಐದು ಜನರು ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಭಾನುವಾರ 3 ರೋಗಿಗಳಲ್ಲಿ ಚೇತರಿಕೆ ಕಾಣಿಸಿದೆ. ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ.

ಮಂಗಗಳ ಸಾವು:

ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಭಾನುವಾರ ಐದು ಮಂಗಗಳು ಮೃತಪಟ್ಟಿದ್ದು, ಕೆಎಫ್‌ಡಿ ಆತಂಕದ ತೂಗುಕತ್ತಿ ತಾಲೂಕಿನಲ್ಲಿ ಕಡಿಮೆಯಾಗಿಲ್ಲ.

ಕರ್ಕಿಕೊಪ್ಪದಲ್ಲಿ ಭಾನುವಾರ ಅಸ್ವಸ್ಥ ಮಂಗಗಳೆರಡು ಕಾಣಿಸಿಕೊಂಡಿದ್ದು , ಅವುಗಳ ಬಳಿ ಜನರು ತೆರಳಿದಾಗ ಉಳಿದ ಮಂಗಗಳು ದಾಳಿ ಮಾಡಲು ಮುಂದಾದ ಘಟನೆ ನಡೆದಿದೆ. ಕೆಲಕಾಲದ ನಂತರ ಅಲ್ಲಿಂದ ಎಲ್ಲ ಮಂಗಗಳು ತೆರಳಿದವು ಎಂದು ಪ್ರತ್ಯಕ್ಷ ದರ್ಶಿಗಳು ಪತ್ರಿಕೆಗೆ ತಿಳಿಸಿದ್ದಾರೆ. ತಾಲೂಕಿನ ವಿವಿಧ ಭಾಗಗಳಲ್ಲಿ ಮಂಗಗಳು ಅಸ್ವಸ್ಥ ಸ್ಥಿತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪ್ರತಿದಿನ ಒಂದಲ್ಲ ಒಂದು ಕಡೆ ಮಂಗ ಮೃತಪಟ್ಟ ಮಾಹಿತಿ ಹರಿದಾಡುವುದರಿಂದ ಜನರು ಭೀತಿಯಿಂದ ಹೊರಬರದಂತಾಗಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ