ಆ್ಯಪ್ನಗರ

ಆಹಾರದಲ್ಲಿ ದೋಷ, 14 ಮಕ್ಕಳು ಅಸ್ವಸ್ಥ

ಹಿರೇಮನೆಯ ಮಹಾತ್ಮಾಗಾಂಧಿ ಗಿರಿಜನ ಆಶ್ರಮ ಶಾಲೆಯ ಹಾಸ್ಟೆಲ್‌ಲ್ಲಿ ಬೆಳಗ್ಗೆ ಆಹಾರ ಸೇವಿಸಿದವರಲ್ಲಿ 14 ಮಕ್ಕಳು ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ದಾರೆ.

Vijaya Karnataka 22 Mar 2019, 5:00 am
ತಾಳಗುಪ್ಪ(ಶಿವಮೊಗ್ಗ) : ಹಿರೇಮನೆಯ ಮಹಾತ್ಮಾಗಾಂಧಿ ಗಿರಿಜನ ಆಶ್ರಮ ಶಾಲೆಯ ಹಾಸ್ಟೆಲ್‌ಲ್ಲಿ ಬೆಳಗ್ಗೆ ಆಹಾರ ಸೇವಿಸಿದವರಲ್ಲಿ 14 ಮಕ್ಕಳು ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ದಾರೆ.
Vijaya Karnataka Web food poison 14 children unconscious
ಆಹಾರದಲ್ಲಿ ದೋಷ, 14 ಮಕ್ಕಳು ಅಸ್ವಸ್ಥ


ಆಹಾರ ಸೇವಿಸಿ ಶಾಲೆಗೆ ತೆರಳಿದ ಮಕ್ಕಳು ತಲೆ ಸುತ್ತು, ವಾಕರಿಕೆ, ವಾಂತಿಯಿಂದ ಅಸ್ವಸ್ಥರಾದರು. ಹಿರೇಮನೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾತ್ಮಗಾಂಧಿ ಗಿರಿಜನ ಆಶ್ರಮ ಶಾಲೆ ಹಾಗೂ ಹಾಸ್ಟೆಲ್‌ ಇದೆ. ಇತ್ತೀಚೆಗೆ ಮೊರಾರ್ಜಿ ವಸತಿ ಶಾಲೆ ಮಕ್ಕಳು ಈ ಹಾಸ್ಟೆಲ್‌ನಲ್ಲಿ ಆಶ್ರಯ ಪಡೆದಿದ್ದಾರೆ. ಹಾಗಾಗಿ ಆಶ್ರಮ ಶಾಲೆಯ 18 ಹಾಗೂ ಮೊರಾರ್ಜಿ ಶಾಲೆಯ 100 ಮಕ್ಕಳು ಒಂದೇ ಕಟ್ಟಡದಲ್ಲಿದ್ದು ಎರಡೂ ಇಲಾಖೆಯವರು ಒಟ್ಟಿಗೆ 118 ಮಕ್ಕಳಿಗೆ ಊಟೋಪಚಾರ ವ್ಯವಸ್ಥೆಗೊಳಿಸುತ್ತಾರೆ.

ಮಕ್ಕಳು ಬೆಳಗ್ಗೆ 8 ಗಂಟೆಯ ಹೊತ್ತಿಗೆ ಪುಳಿಯೋಗರೆ ಸೇವಿಸಿದ್ದು, ಶಾಲೆಗೆ ತೆರಳಿದ ನಂತರ ನಾಲ್ಕೈದು ಮಕ್ಕಳು ವಾಂತಿ ಮಾಡಿಕೊಂಡರು. ಕಾಲೊನಿ ನಿವಾಸಿಗಳು ಇದನ್ನು ಗಮನಿಸಿ, ಅಡುಗೆಯವರನ್ನು ತರಾಟೆಗೆ ತೆಗೆದುಕೊಂಡರು. ಸ್ಥಳಕ್ಕೆ ಆಗಮಿಸಿದ ವಾರ್ಡನ್‌ ಚಂದ್ರಶೇಖರ್‌ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರು. ತಾಳಗುಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ.ಸರಸ್ವತಿ ಹೆಗಡೆ ಮಕ್ಕಳಿಗೆ ಚಿಕಿತ್ಸೆ ನೀಡಿದರು.

ಕಲುತ ಆಹಾರ, ಕಲುತ ನೀರು ಸೇವನೆಯಿಂದ ಮಕ್ಕಳು ಬಳಲಿದಂತಿದ್ದು, ಚಿಕಿತ್ಸೆ ನಂತರ ಗುಣಮುಖರಾಗಿ ಹಾಸ್ಟೆಲ್‌ಗೆ ತೆರಳಿದ್ದಾರೆ. ಹಾಸ್ಟೆಲ್‌ನಲ್ಲಿ ಬಳಸುವ ನೀರಿನ ಗುಣಮಟ್ಟದ ಪರೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರ ಗಾಳಿಪುರ ಆಸ್ಪತ್ರೆಗೆ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿದರು. ದೂರದೂರಿನಿಂದ ಅಪ್ಪ ಅಮ್ಮನ್ನು ತೊರೆದು ಬಂದಿರುವ ಮಕ್ಕಳ ಊಟೋಪಚಾರದ ಬಗ್ಗೆ ನಿರ್ಲಕ್ಷ್ಯ ತೋರಬಾರದೆಂದು ವಾರ್ಡನ್‌ ಹಾಗೂ ಅಡುಗೆಯವರಿಗೆ ಸೂಚಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ