ಆ್ಯಪ್ನಗರ

ಚಿಪ್ಪಳಿ ರಸ್ತೆ ಮುಚ್ಚಲು ಅರಣ್ಯ ಇಲಾಖೆ ಒಪ್ಪಿಗೆ

ಹೊಸೂರು ಗ್ರಾ.ಪಂ. ವ್ಯಾಪ್ತಿಯ ಚಿಪ್ಪಳಿ ಗ್ರಾಮಸ್ಥರು ಶ್ರಮದಾನ ಆರಂಭಿಸಿದಾಗ ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಅಡ್ಡಿಪಡಿಸಿದ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೆಸರಿನ ರಸ್ತೆ ಪರಿಶೀಲಿಸಿದರು.

Vijaya Karnataka 18 Jul 2019, 5:00 am
ಆನಂದಪುರಂ: ಹೊಸೂರು ಗ್ರಾ.ಪಂ. ವ್ಯಾಪ್ತಿಯ ಚಿಪ್ಪಳಿ ಗ್ರಾಮಸ್ಥರು ಶ್ರಮದಾನ ಆರಂಭಿಸಿದಾಗ ಭಾನುವಾರ ಅರಣ್ಯ ಇಲಾಖೆ ಸಿಬ್ಬಂದಿ ಅಡ್ಡಿಪಡಿಸಿದ ಘಟನೆ ವಿವಾದಕ್ಕೆ ಕಾರಣವಾಗಿತ್ತು. ಸೋಮವಾರ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ಕೆಸರಿನ ರಸ್ತೆ ಪರಿಶೀಲಿಸಿದರು.
Vijaya Karnataka Web SMR-16ANPP2

ಗ್ರಾಮದ ವ್ಯಕ್ತಿಯೊಬ್ಬರು ದೂರವಾಣಿ ಮೂಲಕ ದೂರು ನೀಡಿದ ಕಾರಣ ಗ್ರಾಮಸ್ಥರ ಶ್ರಮದಾನ ತಡೆಯಬೇಕಾಯಿತು ಎಂದು ಗ್ರಾಮಸ್ಥರಿಗೆ ಸಮಾಧಾನ ಹೇಳಿ ಮಂಗಳವಾರ ಕೆಸರಿನ ರಸ್ತೆ ಸರಿ ಪಡಿಸುವ ಶ್ರಮದಾನ ನಡೆಸಲು ಅನುಮತಿ ನೀಡಿದರು.

ಸ್ಥಳೀಯ ಗ್ರಾ.ಪಂ.ಸದಸ್ಯ ಉಮಾಪತಿ ತಮ್ಮ ವಾರ್ಡಿನ ಅಭಿವೃದ್ಧಿ ಅನುದಾನದಲ್ಲಿ ಕೆಸರಿನ ರಸ್ತೆಗೆ ಮಣ್ಣು ಹಾಕಿಸುವ ಕಾಮಗಾರಿ ನಡೆಸಲು ನಿರ್ಧರಿಸಿ ಅಗತ್ಯವಾದ ಕಾಡಿನ ಕಲ್ಲು ಮತ್ತು ಗೊಚ್ಚು ಮಣ್ಣು ತಂದು ಹಾಕಲು, ಒಂದು ಜೆಸಿಬಿ ಮತ್ತು ಎರಡು ಟ್ರ್ಯಾಕ್ಟರ್‌ನ್ನು ಬಾಡಿಗೆ ಮೇಲೆ ಕಳುಹಿಸಿದರು. ಗ್ರಾಮಸ್ಥರು ಮನೆಗೆ ಒಬ್ಬರಂತೆ 20 ಕ್ಕೂ ಅಧಿಕ ಜನರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ರಸ್ತೆಗೆ ಕಲ್ಲು, ಮಣ್ಣು ಹಾಕಿ ಸಮತಟ್ಟು ಮಾಡುವ ಶ್ರಮದಾನ ನಡೆಸಿದರು. ಗ್ರಾಮಸ್ಥರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅರಣ್ಯ ಇಲಾಖೆಯನ್ನು ಗ್ರಾಮಸ್ಥರು ಅಭಿನಂದಿಸಿದರು. ಗ್ರಾಮ ಸಂಪರ್ಕ ರಸ್ತೆ ಸಮಸ್ಯೆ ಪರಿಶೀಲಿಸಲು ಆನಂದಪುರಂ ಕ್ಷೇತ್ರದ ಜಿ.ಪಂ.ಸದಸ್ಯೆ ಅನಿತಾಕುಮಾರಿ ಭೇಟಿ ನೀಡಿದರು. ಸಂಪೂರ್ಣ ರಸ್ತೆಗೆ ಗ್ರಾವೆಲ್ಸ್‌ ಹಾಕಿಸಲು 3ಲಕ್ಷ ರೂ.ಅನುದಾನ ಮಂಜೂರು ಮಾಡುವ ಭರವಸೆ ನೀಡಿದರು. ಅರಣ್ಯಾಧಿಕಾರಿ ರಾಘವೇಂದ್ರ ತಗ್ಗಿನ ಮತ್ತು ಸಿಬ್ಬಂದಿ, ಗ್ರಾಮದ ಹಿರಿಯರು ಇದ್ದರು.

-------------
ಗ್ರಾಮಸ್ಥರು ಭಾನುವಾರ ಶ್ರಮದಾನ ಆರಂಭಿಸಿದಾಗ ಇಲಾಖಾ ಮೇಲಧಿಕಾರಿಗಳಿಗೆ ದೂರು ಬಂದಿತ್ತು. ಸಂಪೂರ್ಣ ಪರಿಶೀಲನೆ ನಡೆಸಿದಾಗ ಸತ್ಯ ತಿಳಿಯಿತು. ಇಂತಹ ಸಕಾರಾತ್ಮಕ ಕಾರ್ಯಕ್ಕೆ ಇಲಾಖೆ ಅಡ್ಡಿಪಡಿಸುವುದಿಲ್ಲ.

- ರಾಘವೇಂದ್ರ ತಗ್ಗಿನ, ಅರಣ್ಯಾಧಿಕಾರಿಗಳು

------------
ಚಿಪ್ಪಳಿ ಗ್ರಾಮ ಹಲವು ಮೂಲ ಸೌಕರ‍್ಯಗಳಿಂದ ವಂಚಿತವಾಗಿದೆ. ರಸ್ತೆ, ಬೀದಿ ದೀಪ, ಕಾಲು ಸಂಕ ದುರಸ್ತಿ, ಚರಂಡಿ ದುರಸ್ತಿ ಇತ್ಯಾದಿ ಕಾಮಗಾರಿ ಬಗ್ಗೆ ಹಂತ ಹಂತವಾಗಿ ಅನುದಾನ ನೀಡಲಾಗುವುದು.

-ಅನಿತಾಕುಮಾರಿ ,ಜಿ.ಪಂ. ಸದಸ್ಯೆ ಆನಂದಪುರಂ ಕ್ಷೇತ್ರ

-------------
ರಸ್ತೆ ಸಮಸ್ಯೆಗೆ ಬಗ್ಗೆ ಶೀಘ್ರ ಸ್ಪಂದನೆ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಜಿ.ಪಂ. ಸದಸ್ಯರು ಮತ್ತು ಹೊಸೂರು ಗ್ರಾ.ಪಂ.ಆಡಳಿತಕ್ಕೆ ಗ್ರಾಮಸ್ಥರು ಧನ್ಯವಾದ ಸಲ್ಲಿಸುತ್ತಿದ್ದೇವೆ.

-ವೀರೇಂದ್ರ, ಚಿಪ್ಪಳಿ ಗ್ರಾಮಸ್ಥ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ