ಆ್ಯಪ್ನಗರ

ದಾಖಲೆಯಿಲ್ಲದ ನಾಲ್ಕು ಸಾವಿರ ಕ್ವಿಂಟಾಲ್‌ ಅಕ್ಕಿ ಪತ್ತೆ

ಸಮೀಪದ ದಾಸಕೊಪ್ಪದ ಅಂಗನವಾಡಿಗಳಿಗೆ ಆಹಾರ ಸರಬರಾಜು ಮಾಡುವ ಪೌಷ್ಟಿಕ ಆಹಾರ ತಯಾರಿಕಾ ಘಟಕ(ಎಂಎನ್‌ಪಿಸಿ)ದಲ್ಲಿ ದಾಖಲೆ ಇಲ್ಲದ ಸುಮಾರು 4ಸಾವಿರ ಕ್ವಿಂಟಾಲ್‌ ಅಕ್ಕಿ ದಾಸ್ತಾನಾಗಿರುವುದು ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಚ್‌.ಪಿ.ನರಸಿಂಗ ಮಂಗಳವಾರ ದಿಢೀರ್‌ ಭೇಟಿ ನೀಡಿದ ಸಂದರ್ಭ ಬೆಳಕಿಗೆ ಬಂದಿದೆ.

Vijaya Karnataka 7 Feb 2019, 5:00 am
ಆನಂದಪುರ : ಸಮೀಪದ ದಾಸಕೊಪ್ಪದ ಅಂಗನವಾಡಿಗಳಿಗೆ ಆಹಾರ ಸರಬರಾಜು ಮಾಡುವ ಪೌಷ್ಟಿಕ ಆಹಾರ ತಯಾರಿಕಾ ಘಟಕ(ಎಂಎನ್‌ಪಿಸಿ)ದಲ್ಲಿ ದಾಖಲೆ ಇಲ್ಲದ ಸುಮಾರು 4ಸಾವಿರ ಕ್ವಿಂಟಾಲ್‌ ಅಕ್ಕಿ ದಾಸ್ತಾನಾಗಿರುವುದು ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಚ್‌.ಪಿ.ನರಸಿಂಗ ಮಂಗಳವಾರ ದಿಢೀರ್‌ ಭೇಟಿ ನೀಡಿದ ಸಂದರ್ಭ ಬೆಳಕಿಗೆ ಬಂದಿದೆ.
Vijaya Karnataka Web SMR-6ANPP1


ಸಾಗರ ಮತ್ತು ಸೊರಬ ತಾಲೂಕಿನ 770 ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ತಯಾರಾಗಿ ವಿತರಣೆಯಾಗುವ ಘಟಕ ಇದಾಗಿದೆ.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಶೇಖರಿಸಿರುವ ಅಕ್ಕಿ ಮೂಟೆಗಳಿಂದ ವಾಸನೆ ಬರುತ್ತಿದ್ದು, ಈ ಕುರಿತು ಜಿ.ಪಂ. ಸಭೆಯಲ್ಲಿ ಪ್ರಸ್ತಾಪಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗುಣಮಟ್ಟದ ಪೌಷ್ಟಿಕ ಆಹಾರ ತಯಾರಿಕಾ ಮತ್ತು ವಿತರಣಾ ಘಟಕದಲ್ಲಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಅಕ್ಕಿ ಮೂಟೆಗಳ ದಾಸ್ತಾನು ಹೇಗಿದೆ. ತಯಾರಿಸಿದ ಆಹಾರ ಸರಿಯಾಗಿ ವಿತರಣೆ ಆಗುತ್ತಿದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ ಎಂದರು.

ಜಿ.ಪಂ.ಸದಸ್ಯೆ ಅನಿತಾಕುಮಾರಿ ಪ್ರತಿಕ್ರಿಯಿಸಿ, ಅಧಿಕಾರಿಗಳ ನಿರ್ಲಕ್ಷ ್ಯತನ ಹಾಗೂ ಅವರ ಕೈವಾಡದಿಂದ ಇಂತಹ ಅವ್ಯವಸ್ಥೆ ಉಂಟಾಗಿದೆ. ಈಗಾಗಲೇ ತಯಾರಿಸಿರುವ ಪೌಷ್ಟಿಕ ಆಹಾರದಲ್ಲಿ ಹುಳುಗಳು ಕಾಣುತ್ತಿವೆ. ಈ ಆಹಾರವನ್ನು ಯಾವುದೇ ಕಾರಣಕ್ಕೂ ವಿತರಣೆ ಮಾಡಲು ಬಿಡುವುದಿಲ್ಲ ಎಂದರು. ಜಿ.ಪಂ. ಸದಸ್ಯೆ ಸೌಮ್ಯ, ಸಿಡಿಪಿಒ ರಾಜಪ್ಪ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ