ಆ್ಯಪ್ನಗರ

ಉತ್ತಮ ಸಮಾಜಕ್ಕಾಗಿ ಸ್ವಾತಂತ್ರ್ಯ

ಲಕ್ಷಾಂತರ ಜನರ ಬಲಿದಾನದ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ಅರಿತು, ಅವರನ್ನು ಸ್ಮರಿಸಿದಲ್ಲಿ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಜೆಎಂಎಫ್‌ಸಿ ವ್ಯವಹಾರ ನ್ಯಾಯಾಧೀಶ ಟಿ.ಎಲ್‌. ಸಂದೀಶ್‌ ಹೇಳಿದರು.

Vijaya Karnataka 11 Aug 2019, 5:00 am
ಶಿಕಾರಿಪುರ: ಲಕ್ಷಾಂತರ ಜನರ ಬಲಿದಾನದ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ, ಸ್ವಾತಂತ್ರ್ಯ ಹೋರಾಟಗಾರರ ಇತಿಹಾಸ ಅರಿತು, ಅವರನ್ನು ಸ್ಮರಿಸಿದಲ್ಲಿ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಜೆಎಂಎಫ್‌ಸಿ ವ್ಯವಹಾರ ನ್ಯಾಯಾಧೀಶ ಟಿ.ಎಲ್‌. ಸಂದೀಶ್‌ ಹೇಳಿದರು.
Vijaya Karnataka Web SMR-9SKP2


ಪಟ್ಟಣದಲ್ಲಿ ಶುಕ್ರವಾರ ಪತ್ರಕರ್ತರ ಸಂಘ ಆಯೋಜಿಸಿದ್ದ ಕ್ವಿಟ್‌ ಇಂಡಿಯಾ ಒಂದು ನೆನಪು ಕಾರ‍್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ಸಿಕ್ಕಿರುವುದು ಉತ್ತಮ ಸಮಾಜ ನಿರ್ಮಿಸುವುದಕ್ಕೆ ಎನ್ನುವ ಅರಿವು ಪ್ರತಿಯೊಬ್ಬರಲ್ಲಿ ಇರಬೇಕು. ಬ್ರಿಟೀಷರೆ ಭಾರತ ಬಿಟ್ಟು ತೊಲಗಿ ಎನ್ನುವ ಮಹಾತ್ಮಗಾಂಧಿ ಅವರ ಘೋಷಣೆಗೆ ಇಡೀ ದೇಶದಲ್ಲಿ ತಾಲೂಕಿನ ಈಸೂರು ಮೊದಲು ಓಗೊಟ್ಟು ತನ್ನ ಹಳ್ಳಿಯನ್ನು ಸ್ವತಂತ್ರ ಎಂದು ಘೋಷಣೆ ಮಾಡಿಕೊಂಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಅಂದಿನ ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ನಮಗೆಲ್ಲರಿಗೂ ಆದರ್ಶವಾಗಬೇಕೆಂದರು.

ತಹಸೀಲ್ದಾರ್‌ ಕವಿರಾಜ್‌ ಮಾತನಾಡಿ, ಸ್ವಾತಂತ್ರ್ಯ ಹೋರಾಟಕ್ಕೆ ಸ್ಪಂದಿಸಿದ ಮೊದಲ ಗ್ರಾಮ ಈಸೂರು. ಅದೇ ರೀತಿ ಕಲ್ಯಾಣ ಕ್ರಾಂತಿಯಲ್ಲಿ ಪಾಲ್ಗೊಂಡ ಹೆಚ್ಚಿನ ಶರಣರು ಇದೇ ತಾಲೂಕಿನವರು ಎನ್ನುವುದು ಹೆಮ್ಮೆ. ಪ್ರತಿಯೊಬ್ಬ ಯುವಕ ನಮ್ಮಲ್ಲಿ ಲಭ್ಯವಿರುವ ಮೂಲ ಗ್ರಂಥ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ತನ್ಮೂಲಕ ದೇಶಕ್ಕೊಂದು ಉಜ್ವಲ ಭವಿಷ್ಯ ರೂಪಿಸಬೇಕಿದೆ ಎಂದರು. ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಘವೇಂದ್ರ ಅಧ್ಯಕ್ಷ ತೆ ವಹಿಸಿದ್ದರು. ಹಿರಿಯರಾದ ಎಸ್‌.ಬಿ.ಮಠದ, ಬಿ.ಸಿ.ವೇಣುಗೋಪಾಲ್‌, ವಕೀಲರ ಸಂಘದ ಅಧ್ಯಕ್ಷ ಕೋಡೆಪ್ಪ, ಪುರಸಭೆ ಮುಖ್ಯಾಧಿಕಾರಿ ಸುರೇಶ್‌, ಸಬ್‌ಇನ್‌ಸ್ಪೆಕ್ಟರ್‌ ರವಿಕುಮಾರ್‌, ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಬೋಗಿ ರಾಜು, ಬಾಲಕೃಷ್ಣ ಜೋಯಿಸ್‌, ಜಿಲ್ಲಾ ಕಾರ‍್ಯದರ್ಶಿ ಕೆ.ಎಸ್‌.ಹುಚ್ರಾಯಪ್ಪ, ನಿರ್ದೇಶಕ ಅರುಣ್‌, ಪದವಿ ಕಾಲೇಜು ಎನ್‌ಸಿಸಿ ಕೆಡೆಟ್ಸ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ