ಆ್ಯಪ್ನಗರ

ಸ್ಥಳ ನೀಡಿದರೆ 100 ಅಡಿ ರಸ್ತೆ ಸಂಪರ್ಕ

ನಗರದ 100 ಅಡಿ ರಸ್ತೆಯನ್ನು ರೈಲ್ವೆ ನಿಲ್ದಾಣದ ಹತ್ತಿರದ ಸರ್ವಜ್ಞ ವೃತ್ತಕ್ಕೆ ಸಂಪರ್ಕ ಕಲ್ಪಿಸಬೇಕಾದರೆ ಹೆಚ್ಚುವರಿ ಜಾಗದ ಅವಶ್ಯಕತೆ ಇದೆ. ಒಂದುವೇಳೆ, ಸ್ಥಳ ನೀಡಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್‌ಎಂ ಅಪರ್ಣ ಗರ್ಗ್‌ ಸ್ಪಷ್ಟ ಪಡಿಸಿದ್ದಾರೆ.

Vijaya Karnataka 6 Aug 2019, 6:31 pm
ಶಿವಮೊಗ್ಗ: ನಗರದ 100 ಅಡಿ ರಸ್ತೆಯನ್ನು ರೈಲ್ವೆ ನಿಲ್ದಾಣದ ಹತ್ತಿರದ ಸರ್ವಜ್ಞ ವೃತ್ತಕ್ಕೆ ಸಂಪರ್ಕ ಕಲ್ಪಿಸಬೇಕಾದರೆ ಹೆಚ್ಚುವರಿ ಜಾಗದ ಅವಶ್ಯಕತೆ ಇದೆ. ಒಂದುವೇಳೆ, ಸ್ಥಳ ನೀಡಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಡಿಆರ್‌ಎಂ ಅಪರ್ಣ ಗರ್ಗ್‌ ಸ್ಪಷ್ಟ ಪಡಿಸಿದ್ದಾರೆ.
Vijaya Karnataka Web SMG-0508-2-15-5SMG2


ಗರ್ಗ್‌ ಅವರು ಸೋಮವಾರ ಶಿವಮೊಗ್ಗಕ್ಕೆ ಭೇಟಿ ನೀಡಿದಾಗ ಶಿವಮೊಗ್ಗ ನಾಗರಿಕ ಹಿತರಕ್ಷ ಣಾ ವೇದಿಕೆಗಳ ಒಕ್ಕೂಟವು ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಬಾಕಿ ಉಳಿದಿರುವ ವಿವಿಧ ರೈಲ್ವೆ ಕಾಮಗಾರಿಗಳ ಬಗ್ಗೆ ಮನವಿ ಪತ್ರ ಸಲ್ಲಿಸಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಅವರು, 100 ಅಡಿ ರಸ್ತೆಯನ್ನು ರೈಲ್ವೆ ನಿಲ್ಧಾಣದ ಸಮೀಪದ ವೃತ್ತಕ್ಕೆ ಸಂಪರ್ಕಿಸಬೇಕಾದರೆ ರೈಲ್ವೆ ಭೂಮಿಯನ್ನು 2.02 ಎಕರೆಗೆ ವಿಸ್ತರಿಸಬೇಕಾಗುತ್ತದೆ. ಈ ಕಾಮಗಾರಿಯಲ್ಲಿ 49 ರೈಲ್ವೆ ಕ್ವಾಟರ್ಸ್‌ ಕೂಡ ಡೆಮಾಲಿಶ್‌ ಮಾಡಬೇಕಾಗುತ್ತದೆ. ಈ ಕುರಿತು ಜಿಲ್ಲಾಡಳಿತದ ಗಮನಕ್ಕೆ ತರಲಾಗಿದ್ದು, ಜಾಗ ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ವಿದ್ಯಾನಗರ ಹೊಳೆಹೊನ್ನೂರು ರಸ್ತೆಯಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ರಸ್ತೆ ಸಮೀಕ್ಷೆ ಕಾರ್ಯವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾಡುತ್ತಿದೆ. ಅನುಮೋದನೆಗೋಸ್ಕರ ಆನ್‌ಲೈನ್‌ ಮೂಲಕ ನೈರುತ್ಯ ರೈಲ್ವೆಗೆ ಬಂದ ತಕ್ಷಣ ತ್ವರಿತಗತಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ