ಆ್ಯಪ್ನಗರ

ಸ್ನಾತಕೋತ್ತರ ಶುಲ್ಕ ಏರಿಕೆ ಪ್ರಸ್ತಾಪ ಕೈಬಿಡಿ

ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಸ್ನಾತಕೋತ್ತರ ಶುಲ್ಕ ಹೆಚ್ಚಳ ಕ್ರಮ ಖಂಡಿಸಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ನಿಂದ ಶುಕ್ರವಾರ ನಗರದ ಗೋಪಿವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

Vijaya Karnataka 12 Jan 2019, 5:00 am
ಶಿವಮೊಗ್ಗ : ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ಸ್ನಾತಕೋತ್ತರ ಶುಲ್ಕ ಹೆಚ್ಚಳ ಕ್ರಮ ಖಂಡಿಸಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ನಿಂದ ಶುಕ್ರವಾರ ನಗರದ ಗೋಪಿವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
Vijaya Karnataka Web SMR-11ganesh2


ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ (ಅನಿವಾಸಿ ಭಾರತೀಯರ ಕೋಟಾ)ಜಾರಿಗೆ ತರುವ ಪ್ರಸ್ತಾಪ ಮಾಡಲಾಗಿದೆ. ಸರಕಾರದ ಈ ನಿಲುವು ವೈದ್ಯರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಜನಸಾಮಾನ್ಯರಲ್ಲಿ ಅಘಾತ ಮೂಡಿಸಿದೆ. ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ.10 ಎನ್‌ಆರ್‌ಐ ಕೋಟಾ ಜಾರಿಯಿಂದ ವೈದ್ಯಕೀಯ ಶಿಕ್ಷ ಣ ಇನ್ನಷ್ಟು ವ್ಯಾಪಾರೀಕರಣಗೊಳ್ಳುತ್ತದೆ ಎಂದು ಆರೋಪಿಸಿದರು.

ಈಗಾಗಲೇ ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಶಿಕ್ಷ ಣ ಕೈಗೆಟುಕದಷ್ಟು ದುಬಾರಿಯಾಗಿದೆ. ಬಡ ವಿದ್ಯಾರ್ಥಿಗಳಿಗೆ ಸರಕಾರಿ ವೈದ್ಯಕೀಯ ಕಾಲೇಜುಗಳು ಆಸರೆಯಾಗಿವೆ. ಎನ್‌ಆರ್‌ಐ ಕೋಟಾ ಜಾರಿಯಾದರೆ ಸೀಟು ಕಡಿಮೆಯಾಗಿ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷ ಣದಿಂದ ವಂಚಿತರಾಗುತ್ತಾರೆ ಎಂದು ದೂರಿದರು.

ಎನ್‌ಆರ್‌ಐ ಕೋಟಾ ಜಾರಿಯಾದಲ್ಲಿ ವೈದ್ಯಕೀಯ ಶಿಕ್ಷಣ ಹೆಚ್ಚು ಹಣ ನೀಡುವವರ ಪಾಲಾಗುತ್ತದೆ. ಅಲ್ಲದೆ ಆರೋಗ್ಯ ಕ್ಷೇತ್ರ ದುಬಾರಿ ಹಣ ತೆತ್ತ ವಿದ್ಯಾರ್ಥಿಗಳಿಗೆ ಹೂಡಿದ ಬಂಡವಾಳವನ್ನು ವಾಪಸ್‌ ಗಳಿಸುವ ಉದ್ಯಮವಾಗುತ್ತದೆ ಎಂದರು.

ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು ಶೇ.300ರಿಂದ 600ರಷ್ಟು ಹೆಚ್ಚಿಸುವ ಕುರಿತು ರಾಜ್ಯ ಸರಕಾರ ಪ್ರಸ್ತಾಪಿಸಿದೆ. ಪದವಿ ಕೋರ್ಸ್‌ಗಳ ಶುಲ್ಕ 17 ಸಾವಿರ ರೂ.ನಿಂದ 50 ಸಾವಿರ ರೂ.ಗೆ ಈಗಾಗಲೇ ಏರಿಕೆ ಮಾಡಲಾಗಿದೆ. ಸ್ನಾತಕೋತ್ತರ ಕೋರ್ಸ್‌ಗಳ ಶುಲ್ಕವನ್ನು 40 ಸಾವಿರ ರೂ.ನಿಂದ 3.5 ಲಕ್ಷ ಕ್ಕೆ ಏರಿಸುವ ಪ್ರಸ್ತಾಪವಿದೆ. ಈ ಮೂಲಕ ರಾಜ್ಯ ಸರಕಾರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಆಘಾತ ನೀಡಿದೆ ಎಂದು ದೂರಿದರು.

ಬೆಲೆ ಏರಿಕೆ, ಬರ ಮೊದಲಾದ ಸಮಸ್ಯೆಗಳಿಂದ ಜನ ತತ್ತರಿಸುತ್ತಿದ್ದಾರೆ. ಇಂತ ಸಂದರ್ಭ ಸರಕಾರ ಶುಲ್ಕ ಕಡಿಮೆ ಮಾಡುವ ಬದಲು ಐದಾರು ಪಟ್ಟು ಹೆಚ್ಚಿಸಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಶುಲ್ಕವನ್ನು ಆದಾಯದ ಮೂಲವೆಂದು ಪರಿಗಣಿಸುವುದೇ ಪ್ರಜಾತಾಂತ್ರಿಕ ಶಿಕ್ಷ ಣದ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದರು.

ಎನ್‌ಆರ್‌ಐ ಕೋಟಾ, ವೈದ್ಯಕೀಯ ಸ್ನಾತಕೋತ್ತರ ಶುಲ್ಕ ಏರಿಕೆ ಪ್ರಸ್ತಾಪವನ್ನು ಕೈಬಿಡಬೇಕು. ಹೆಚ್ಚಿಸಿರುವ ವೈದ್ಯಕೀಯ ಪದವಿ ಶುಲ್ಕ ಹಿಂಪಡೆಯ ಬೇಕು ಎಂದು ಒತ್ತಾಯಿಸಿದರು. ಬಳಿಕ ಗೋಪಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆ ಪ್ರಮುಖರಾದ ರಾಜೇಶ್‌ ಭಟ್‌, ಡಾ.ವಸುದೇಂದ್ರ, ಡಾ.ಇಶ, ಡಾ.ಅಮೀರ್‌, ಡಾ.ಹಮೀದ್‌ ಸೇರಿದಂತೆ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ