ಆ್ಯಪ್ನಗರ

ಹೊಳೆಹೊನ್ನೂರು ಸುತ್ತಮುತ್ತ ಆರೋಗ್ಯ ಅರಿವು

ತಾಲೂಕಲ್ಲಿ ವಾಂತಿಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಮುಂಜ್ರಾಗತ ಕ್ರಮವಾಗಿ ಬುಧವಾರ ಹೊಳೆಹೊನ್ನೂರು ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಔಷಧ ಮತ್ತು ಮಾತ್ರೆ ವಿತರಿಸಿ ಅರಿವು ಮೂಡಿಸಿತು.

Vijaya Karnataka 23 Aug 2019, 5:00 am
ಭದ್ರಾವತಿ: ತಾಲೂಕಲ್ಲಿ ವಾಂತಿಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಮುಂಜ್ರಾಗತ ಕ್ರಮವಾಗಿ ಬುಧವಾರ ಹೊಳೆಹೊನ್ನೂರು ಸೇರಿದಂತೆ ಸುತ್ತ ಮುತ್ತಲ ಗ್ರಾಮಗಳಲ್ಲಿ ಔಷಧ ಮತ್ತು ಮಾತ್ರೆ ವಿತರಿಸಿ ಅರಿವು ಮೂಡಿಸಿತು. ಈ ಸಂದರ್ಭ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ.ಗಾಯಿತ್ರಿ, ಗ್ರಾಮಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದರಿಂದ ರೋಗ ನಿಯಂತ್ರಣ ಸಾಧ್ಯ. ರೋಗ ಬರುವ ಮುನ್ನ ಚಿಕಿತ್ಸೆ ಪಡೆಯುವುದರಿಂದ ಅನಾಹುತ ತಪ್ಪಿಸಲು ಸಮೀಪದ ಸರಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಉಚಿತ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
Vijaya Karnataka Web SMR-22BDVT1


ಆರೋಗ್ಯ ನಿರೀಕ್ಷ ಕ ನಿಲೇಶ್‌ರಾಜ್‌ ಮಾತನಾಡಿ, ಈ ಹಿಂದೆ ಮೈದೊಳಲು ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣದಿಂದ ಹೆಚ್ಚಿನ ಅನಾಹುತ ಉಂಟಾಗಿತ್ತು. ಮತ್ತೆ ಮರುಕಳಿಸದಂತೆ ಆರೋಗ್ಯ ಇಲಾಖೆಯು ಮುಂಜಾಗ್ರತೆ ಕ್ರಮವಾಗಿ ಗ್ರಾಮಸ್ಥರಿಗೆ ಔಷಧಿ, ಮಾತ್ರೆ ನೀಡುತ್ತಿದೆ ಎಂದರು. ಗ್ರಾಪಂ ಅಧ್ಯಕ್ಷೆ ಮಮತಾ, ಸದಸ್ಯರು, ಡಾ.ದೇವಾನಂದ್‌, ಕಾರ‍್ಯದರ್ಶಿ ರಾಜು, ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಆರೋಗ್ಯದ ಅರಿವು ಮೂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ