ಆ್ಯಪ್ನಗರ

ಆರೋಗ್ಯ ಇಲಾಖೆ ನಿರ್ಲಕ್ಷ್ಯ: ಆರೋಪ

ಮಂಗನ ಕಾಯಿಲೆ ವಿಷಯದಲ್ಲಿ ಹೊಸನಗರ ತಾಲೂಕನ್ನು ಜಿಲ್ಲಾಡಳಿತ ಕಡೆಗಣಿಸಿದೆ ಎಂದು ತಾಪಂ ಸದಸ್ಯ ಆಲುವಳ್ಳಿ ವೀರೇಶ್‌ ಆಪಾದಿಸಿದರು.

Vijaya Karnataka 13 Jan 2019, 5:00 am
ಹೊಸನಗರ: ಮಂಗನ ಕಾಯಿಲೆ ವಿಷಯದಲ್ಲಿ ಹೊಸನಗರ ತಾಲೂಕನ್ನು ಜಿಲ್ಲಾಡಳಿತ ಕಡೆಗಣಿಸಿದೆ ಎಂದು ತಾಪಂ ಸದಸ್ಯ ಆಲುವಳ್ಳಿ ವೀರೇಶ್‌ ಆಪಾದಿಸಿದರು.
Vijaya Karnataka Web health department negligence allegation
ಆರೋಗ್ಯ ಇಲಾಖೆ ನಿರ್ಲಕ್ಷ್ಯ: ಆರೋಪ


ಅವರು ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಈಗಾಗಲೇ ತಾಲೂಕಲ್ಲಿ ಒಟ್ಟು 18 ಮಂಗಗಳು ಸತ್ತಿರುವುದು ವರದಿಯಾಗಿದೆ. ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದರೂ, ಇದುವರೆಗೂ ವರದಿ ಬಂದಿಲ್ಲ. ನೆರೆಯ ಸಾಗರ ತಾಲೂಕಲ್ಲಿ ಈಗಾಗಲೇ ಸೋಂಕಿನಿಂದ ಹಲವರು ಮೃತಪಟ್ಟಿದ್ದಾರೆ. ಆದರೆ ತಾಲೂಕಲ್ಲಿ ಆರೋಗ್ಯ ಇಲಾಖೆ ಸೂಕ್ತ ಮುಂಜಾಗ್ರತೆ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಉಣ್ಣೆ ತಡೆಯಲು ಅಗತ್ಯವಿರುವ ಡಿಎಂಪಿ ಎಣ್ಣೆ ಎಲ್ಲ ಕಡೆ ಲಭ್ಯವಿಲ್ಲ. ಹಲವು ಬಾರಿ ಮನವಿ ಮಾಡಿದ ನಂತರ ಪ್ರತಿ ಆರೋಗ್ಯ ಕೇಂದ್ರಕ್ಕೆ ತಲಾ 200 ಮಿ.ಲೀ. 5 ಬಾಟಲಿಗಳನ್ನು ನೀಡಲಾಗಿದೆ. ಇಷ್ಟು ಕಡಿಮೆ ಪ್ರಮಾಣದ ಔಷಧಿ ಬಳಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು, ಸತ್ತ ಮಂಗಗಳನ್ನು ಮರಣೋತ್ತರ ಪರೀಕ್ಷೆ ನಡೆಸುವ ಪಶುವೈದ್ಯ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಇನ್ನೂ ಕೆಎಫ್‌ಡಿ ಲಸಿಕೆ ನೀಡಿಲ್ಲ. ಇನ್ನು ಜನಸಾಮಾನ್ಯರ ಕಥೆ ಏನು? ತಾಲೂಕಿಗೆ ಸಂಬಂಧಿಸಿದಂತೆ ಜಿಲ್ಲಾ ವೈದ್ಯಾಧಿಕಾರಿಗಳ ತೀವ್ರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿದರು.

ತಾಪಂ ಇಓ ಡಾ.ರಾಮಚಂದ್ರಭಟ್‌ ಮಾತನಾಡಿ, ಈವರೆಗೆ ತಾಲೂಕಲ್ಲಿ ಮೃತ ಪಟ್ಟ ಮಂಗಗಳು, ತಾಲೂಕು ಆಡಳಿತ ಕೈಗೊಂಡ ಮುಂಜಾಗ್ರತಾ ಕ್ರಮ ಕುರಿತು ಮಾಹಿತಿ ನೀಡಿದರು. ಗೋಷ್ಠಿಯಲ್ಲಿ ರಾಜೇಶ್‌ ಜೈನ್‌, ರಾಜೇಂದ್ರ ಗಂಟೆ ಮತ್ತಿತರರು ಇದ್ದರು.

--------------
ವಿದ್ಯುತ್‌ ಸಮಸ್ಯೆ ನೀಗಿಸಲು ಮನವಿ
ತಾಲೂಕಲ್ಲಿ ಹಲವು ವರ್ಷಗಳಿಂದ ಇರುವ ವಿದ್ಯುತ್‌ ಸಮಸ್ಯೆ ಬಗೆಹರಿಸಲು ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥಗೌಡ ನೇತೃತ್ವದಲ್ಲಿ ಸಿಎಂ ಸಂಪರ್ಕಿಸಲಾಗಿದೆ. ತಾಲೂಕು ಕೇಂದ್ರದಲ್ಲಿ 110 ಕೆ.ವಿ, ಹರಿದ್ರಾವತಿಯಲ್ಲಿ 33ಕೆವಿ, ರಿಪ್ಪನ್‌ಪೇಟೆಗೆ ಹೆಚ್ಚುವರಿಯಾಗಿ 10 ಮೆ.ವ್ಯಾ.ವಿದ್ಯುತ್‌ ಘಟಕ ಸ್ಥಾಪನೆಗೆ ಶೀಘ್ರ ಟೆಂಡರ್‌ ಕರೆಯುವಂತೆ ಮನವಿ ಮಾಡಲಾಗಿದ್ದು, ಪೂರಕ ಸ್ಪಂದನೆ ದೊರೆತಿದೆ. ಇನ್ನೊಂದೆರಡು ತಿಂಗಳ ಒಳಗಾಗಿ ಕಾಮಗಾರಿಗೆ ಟೆಂಡರ್‌ ಆಗುವ ನಿರೀಕ್ಷೆಯಿದೆ .

-ಆಲುವಳ್ಳಿ ವೀರೇಶ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ