ಆ್ಯಪ್ನಗರ

ಹಾಲು ಉತ್ಪನ್ನ ಸೇವನೆಯಿಂದ ಆರೋಗ್ಯ

ಹಾಲು ಉತ್ಪನ್ನಗಳ ಮಿತ ಸೇವನೆಯಿಂದ ಬಿಪಿ, ಸಕ್ಕರೆ ಕಾಯಿಲೆ ಹೀಗೆ ಇತರ ರೋಗ ಬರದು ಎಂದು ತಾಲೂಕು ಪಂಚಾಯಿತಿ ಕಾರ‍್ಯನಿರ್ವಾಹಕಾಧಿಕಾರಿ ಡಾ.ರಾಮಚಂದ್ರಭಟ್‌ ಹೇಳಿದರು.

Vijaya Karnataka 25 May 2019, 5:00 am
ರಿಪ್ಪನ್‌ಪೇಟೆ: ಹಾಲು ಉತ್ಪನ್ನಗಳ ಮಿತ ಸೇವನೆಯಿಂದ ಬಿಪಿ, ಸಕ್ಕರೆ ಕಾಯಿಲೆ ಹೀಗೆ ಇತರ ರೋಗ ಬರದು ಎಂದು ತಾಲೂಕು ಪಂಚಾಯಿತಿ ಕಾರ‍್ಯನಿರ್ವಾಹಕಾಧಿಕಾರಿ ಡಾ.ರಾಮಚಂದ್ರಭಟ್‌ ಹೇಳಿದರು.
Vijaya Karnataka Web SMR-22RPT1


ಪಟ್ಟಣದ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಹಾಗೂ ಕೊಡಚಾದ್ರಿ ಸ್ತ್ರೀಶಕ್ತಿ ಒಕ್ಕೂಟ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ಸ್ತ್ರೀಶಕ್ತಿ ಗೊಂಚಲು ಗುಂಪುಗಳಿಗೆ ಬಲವರ್ಧನ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಕನಿಷ್ಟ ಪಕ್ಷ 180 ಮೀ.ಲೀ.ಹಾಲು ನಿತ್ಯ ಕೊಡಬೇಕು ಹಾಗೂ ಬ್ಲಾಕ್‌ ಟೀ ಮತ್ತು ಲೇಮೆನ್‌ ಟೀ ಸೇವನೆಯಿಂದ ಅಸಿಡಿಟಿ ಬರಲಿದೆ. ನಿತ್ಯ ಹಾಲು ಉತ್ಪನ್ನಗಳ ಮಿತ ಸೇವನೆಯಿಂದಾಗಿ ಉತ್ತಮ ಆರೋಗ್ಯ ದೊರಕಲಿದೆ. ರೈತ ಸಮುದಾಯ ಹೈನುಗಾರಿಕೆಯಿಂದ ಸ್ವ ಉದ್ಯೋಗದೊಂದಿಗೆ ಆರ್ಥಿಕ ಸ್ವಾವಲಂಬನೆ ಹೊಂದಲಿದೆ ಎಂದರು.

ರೋಗ ನಿರೋಧಕ ಶಕ್ತಿ ಇರುವ ಕಾರಣ ಕನಿಷ್ಟ ನಿತ್ಯ 180 ಮೀ.ಲೀ ಹಾಲು ಕುಡಿಯಬೇಕು. ಮೇಕೆ ಮತ್ತು ಕತ್ತೆ ಹಾಲು ಸಹ ಕುಡಿಯುವುದು ಮುಖ್ಯ ಎಂದರು.

ಸ್ತ್ರೀಶಕ್ತಿ ಒಕ್ಕೂಟದ ಉಪಾಧ್ಯಕ್ಷೆ ಕಲಾವತಿ ಅಧ್ಯಕ್ಷತೆ ವಹಿಸಿದ್ದರು. ಹೊಸನಗರ ಕೆನರಾ ಬ್ಯಾಂಕ್‌ ವ್ಯವಸ್ಥಾಪಕ ಶ್ರೀಕಾಂತ್‌, ಶಿಶು ಅಭಿವೃದ್ಧಿ ಯೋಜನಾಧಿಕಾರಿ ನೂತನ ಆಶೋಕ್‌ ನಾಯ್ಕ್‌, ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ದೇವೇಂದ್ರಪ್ಪ ಹುರುಕಡ್ಲಿ ಅವರು ಸರಕಾರದ ಸೌಲಭ್ಯ ಕುರಿತು ಮಾಹಿತಿ ನೀಡಿದರು.

ಮಹಿಳಾ ಮೇಲ್ವಿಚಾರಕಿ ಎಚ್‌.ಎ.ವನಮಾಲ ಸ್ವಾಗತಿಸಿ, ಪ್ರಥಮದರ್ಜೆ ಸಹಾಯಕ ರಾಜು ಬರುವೆ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ