ಆ್ಯಪ್ನಗರ

ಗ್ರಾಮೀಣರು ದುಶ್ಚಟಬಿಟ್ಟರೆ ಆರೋಗ್ಯ

ಗ್ರಾಮೀಣರು ದುಶ್ಚಟಗಳಿಗೆ ಮಾರುಹೋಗುತ್ತಿದ್ದು, ಕುಟುಂಬದ ಸ್ವಾಸ್ಥ್ಯ ಹದಗೆಡುತ್ತಿದೆ. ಇದರಿಂದಾಗಿ ಎಷ್ಟೋ ಕುಟುಂಬಗಳು ಬೀದಿಪಾಲಾಗಿವೆ. ದುಶ್ಚಟಗಳಲ್ಲಿ ಮದ್ಯಪಾನವು ಪ್ರಮುಖ ಪಾತ್ರವಹಿಸುತ್ತಿದೆ. ಇದರಿಂದ ದೂರವಿದ್ದರೆ ನೆಮ್ಮದಿ ಬದುಕು ಸಾಧ್ಯ ಎಂದು ಕೋಡೂರು ಗ್ರಾ.ಪಂ. ಅಧ್ಯಕ್ಷ ವೈ. ಜಯಂತ್‌ ಹೇಳಿದರು

Vijaya Karnataka 27 Jun 2019, 5:00 am
ರಿಪ್ಪನ್‌ಪೇಟೆ: ಗ್ರಾಮೀಣರು ದುಶ್ಚಟಗಳಿಗೆ ಮಾರುಹೋಗುತ್ತಿದ್ದು, ಕುಟುಂಬದ ಸ್ವಾಸ್ಥ್ಯ ಹದಗೆಡುತ್ತಿದೆ. ಇದರಿಂದಾಗಿ ಎಷ್ಟೋ ಕುಟುಂಬಗಳು ಬೀದಿಪಾಲಾಗಿವೆ. ದುಶ್ಚಟಗಳಲ್ಲಿ ಮದ್ಯಪಾನವು ಪ್ರಮುಖ ಪಾತ್ರವಹಿಸುತ್ತಿದೆ. ಇದರಿಂದ ದೂರವಿದ್ದರೆ ನೆಮ್ಮದಿ ಬದುಕು ಸಾಧ್ಯ ಎಂದು ಕೋಡೂರು ಗ್ರಾ.ಪಂ. ಅಧ್ಯಕ್ಷ ವೈ. ಜಯಂತ್‌ ಹೇಳಿದರು
Vijaya Karnataka Web health of the villagers
ಗ್ರಾಮೀಣರು ದುಶ್ಚಟಬಿಟ್ಟರೆ ಆರೋಗ್ಯ


ಶ್ರೀಕ್ಷೇತ್ರ ಧಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೊಸನಗರ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಹಾಗೂ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ, ನವಜೀವನ ಸಮಿತಿ ಕೋಡೂರು, ಚಿಕ್ಕಜೇನಿ, ಹರತಾಳು, ಬಾಳೂರು ಗ್ರಾ.ಪಂ., ಹಾಲುಉತ್ಪಾದಕರ ಸಹಕಾರ ಸಂಘ ಹಾಗೂ ವಿವಿಧ ಸಂಸ್ಥೆ ಸಹಯೋಗದಲ್ಲಿ ಭಾನುವಾರ ಕೋಡೂರಿನ ಶಂಕರೇಶÜ್ವರ ದೇವಸ್ಥಾನ ಸಭಾಭವನದಲ್ಲಿ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಹಾಗೂ ಕುಟುಂಬ ನೆಮ್ಮದಿಗೆ ಮಾರಕವಾಗತ್ತಿರುವ ಮದ್ಯವ್ಯಸನಿಗಳನ್ನು ಕಲೆಹಾಕಿ ಮದ್ಯವರ್ಜನಗೊಳಿಸುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ಕಾರ‍್ಯ ಶ್ಲಾಘನೀಯ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಇಂತಹ ಶಿಬಿರ ಪೂರಕ ಎಂದರು. ಜಯಪ್ರಕಾಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿರ್ದೇಶಕಿ ಗೀತಾ, ನಾರಾಯಣಕಾಮತ್‌, ತಾ.ಪಂ. ಸದಸ್ಯೆ ಶಕುಂತಳ ರಾಮಚಂದ್ರ, ಉಪಾಧ್ಯಕ್ಷ ಸುಧಾಕರ, ರಿಪ್ಪನ್‌ಪೇಟೆ ಗ್ರಾ.ಪಂ. ಮಾಜಿ ಅಧ್ಯಕ್ಷೆ ಲಕ್ಷ ್ಮಮ್ಮ, ತಾ.ಪಂ. ಮಾಜಿ ಅಧ್ಯಕ್ಷ ನಾಗರತ್ನ ದೇವರಾಜ, ಕೆ.ಸಂತೋಷ್‌, ಗುರುರಾಜಭಟ್‌, ಕಿರಣ್‌ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ