ಆ್ಯಪ್ನಗರ

‘ಶಿವಮೊಗ್ಗ ಒನ್‌’ನಲ್ಲಿ ಆರೋಗ್ಯ ಕಾರ್ಡ್‌ ಲಭ್ಯ

ಬಡವರಿಗೆ ಆರೋಗ್ಯ ಸೇವೆ ನೀಡುವ ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಯೋಜನೆ ಸೂಕ್ತ ಮಾಹಿತಿ ರಾಜ್ಯದ ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸಬೇಕು. ಅಗತ್ಯವಿರುವ ಎಲ್ಲರಿಗೂ ಕಾರ್ಡ್‌ ನೀಡುವುದು ಎಲ್ಲ ವಿಎಲ್‌ಇಗಳ ಗುರುತರ ಜವಾಬ್ದಾರಿಯಾಗಿದೆ ಎಂದು ಯೋಜನೆ ಜಿಲ್ಲಾ ಮುಖ್ಯಸ್ಥ ಪ್ರಕಾಶ್‌ ಹೇಳಿದರು.

Vijaya Karnataka 27 Mar 2019, 5:00 am
ಶಿವಮೊಗ್ಗ : ಬಡವರಿಗೆ ಆರೋಗ್ಯ ಸೇವೆ ನೀಡುವ ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಯೋಜನೆ ಸೂಕ್ತ ಮಾಹಿತಿ ರಾಜ್ಯದ ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸಬೇಕು. ಅಗತ್ಯವಿರುವ ಎಲ್ಲರಿಗೂ ಕಾರ್ಡ್‌ ನೀಡುವುದು ಎಲ್ಲ ವಿಎಲ್‌ಇಗಳ ಗುರುತರ ಜವಾಬ್ದಾರಿಯಾಗಿದೆ ಎಂದು ಯೋಜನೆ ಜಿಲ್ಲಾ ಮುಖ್ಯಸ್ಥ ಪ್ರಕಾಶ್‌ ಹೇಳಿದರು.
Vijaya Karnataka Web SMR-26skp3


ಶಿವಮೊಗ್ಗ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾಹಿತಿ ಕಾರಾರ‍ಯಗಾರದಲ್ಲಿ ಅವರು ಮಾತನಾಡಿ, ಜಿಲ್ಲಾ ಮಟ್ಟದ ಸರಕಾರಿ ಆಸ್ಪತ್ರೆಯಲ್ಲಿ ಮಾತ್ರ ಸಿಗುತ್ತಿದ್ದ ಆಯುಷ್ಮಾನ್‌ ಭಾರತ್‌, ಆರೋಗ್ಯ ಕರ್ನಾಟಕ ಕಾರ್ಡ್‌ಗಳು ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲೆಡೆಯ ಕಾಮನ್‌ ಸರ್ವಿಸ್‌ ಸೆಂಟರ್‌, ಶಿವಮೊಗ್ಗ ಒನ್‌ ಕೇಂದ್ರಗಳಲ್ಲೂ ನೀಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲೂ ಕಾರ್ಡ್‌ ಸಿಗುವುದಕ್ಕೆ ವ್ಯವಸ್ಥೆ ಕಲ್ಪಿಸಿದ್ದು ಅದರ ಪ್ರಯೋಜನ ಜನರು ಪಡೆದುಕೊಳ್ಳಬೇಕು ಎಂದರು.

ಈ ಹಿಂದಿನ ಯಶಸ್ವಿನಿ ಯೋಜನೆಯಲ್ಲಿ ಕುಟುಂಬದ ಮುಖ್ಯಸ್ಥರಿಗೆ ಮಾತ್ರ ಕಾರ್ಡ್‌ ನೀಡಲಾಗುತ್ತಿತ್ತು. ಹೊಸ ಯೋಜನೆಯಲ್ಲಿ ಪ್ರತಿಯೊಬ್ಬ ಕುಟುಂಬ ಸದಸ್ಯರೂ ಕಾರ್ಡ್‌ ಪಡೆಯಬೇಕು. ಜಿಲ್ಲಾ ಮಟ್ಟದ ಆಸ್ಪತ್ರೆಯಲ್ಲಿ ಸಿಗುವ ಆರೋಗ್ಯ ಸೌಲಭ್ಯ ಹೊರತುಪಡಿಸಿ ಇನ್ನುಳಿದ ಮೂರನೆ ಹಂತದ ಕ್ಲಿಷ್ಟಕರ ಖಾಯಿಲೆಗಳಾದ ನರರೋಗ, ಹೃದ್ರೋಗ, ಸುಟ್ಟಗಾಯ, ಕ್ಯಾನ್ಸರ್‌ನಂತ ರೋಗಕ್ಕೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ತುರ್ತು ಚಿಕಿತ್ಸೆ ಹೊರತುಪಡಿಸಿ ಇನ್ನುಳಿದ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆ ಮುಖ್ಯಸ್ಥರಿಂದ ಪತ್ರ ಪಡೆಯುವುದು ಅನಿವಾರ‍್ಯ ಎಂದರು.

ಬಿಪಿಎಲ್‌ ಕಾರ್ಡ್‌ ಹೊಂದಿಲ್ಲದ ಎಪಿಎಲ್‌ ಕಾರ್ಡ್‌ ಹೊಂದಿದವರಿಗೆ ಸರಕಾರ ನಿಗದಿಪಡಿಸಿರುವ ಚಿಕಿತ್ಸಾ ವೆಚ್ಚದ ಶೇ.30ರಷ್ಟು ಹಣ ನೀಡಲಾಗುವುದು. ಯಶಸ್ವಿನಿ, ವಾಜಪೇಯಿ ಆರೋಗ್ಯಶ್ರೀ ಯೋಜನೆ ಸ್ಥಗಿತಗೊಂಡ ನಂತರ ಆರಂಭಗೊಂಡಿರುವ ಈ ಯೋಜನೆ ಹೆಚ್ಚು ಉಪಯುಕ್ತವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಪ್ರತಿ ಸರಕಾರಿ ಆಸ್ಪತ್ರೆ, ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯ ಮಿತ್ರರಿದ್ದು ಅವರಲ್ಲಿ ಪಡೆಯಬಹುದು ಎಂದು ಹೇಳಿದರು.

ಹೊಸ ಕಾರ್ಡ್‌ ದಾಖಲಿಸುವ ತಾಂತ್ರಿಕ ಮಾಹಿತಿ ಸಿಮ್ಸ್‌ನ ಹರೀಶ್‌, ಅಭಿಲಾಷ್‌ ನೀಡಿದರು. ಜಿಲ್ಲಾಧಿಕಾರಿ ಕಚೇರಿ ಸೇವಾಸಿಂಧು ಯೋಜನೆಯ ದರ್ಶನ್‌, ದಿಶಾ ಯೋಜನೆಯ ಶ್ರೀನಿವಾಸ್‌, ಸಿಎಸ್‌ಸಿ ಜಿಲ್ಲಾ ಮುಖ್ಯಸ್ಥರಾದ ಕಿರಣ್‌, ಆರೀಫ್‌, ಜಿಲ್ಲೆಯ ಎಲ್ಲ ತಾಲೂಕು, ಗ್ರಾಮೀಣ ಪ್ರದೇಶದಲ್ಲಿನ ಸಿಎಸ್‌ಸಿ ವಿಎಲ್‌ಇಗಳು ಸಭೆಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ