ಆ್ಯಪ್ನಗರ

ಹೈಟೆಕ್‌ ಕನ್ಸ್‌ರ್ವೆನ್ಸಿಲಿ ಗುಂಡು ಪಾರ್ಟಿ!

ಗಬ್ಬು ನಾರುತ್ತಿದ್ದ ಕನ್ಸ್‌ರ್ವೆನ್ಸಿಯನ್ನು ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಅಭಿವೃದ್ಧಿಪಡಿಸಿ ಹೊಸ ಲುಕ್‌ ನೀಡಲಾಗಿತ್ತು. ಆದರದು ಈಗ ರಾತ್ರಿ ವೇಳೆ ಗುಂಡು ಪಾರ್ಟಿ ಹಾಗೂ ಶೌಚಾಲಯಕ್ಕಾಗಿ ಬಳಸಲಾಗುತ್ತಿದೆ.

Vijaya Karnataka Web 15 Jun 2020, 5:00 am
ಶಿವಮೊಗ್ಗ : ಗಬ್ಬು ನಾರುತ್ತಿದ್ದ ಕನ್ಸ್‌ರ್ವೆನ್ಸಿಯನ್ನು ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಅಭಿವೃದ್ಧಿಪಡಿಸಿ ಹೊಸ ಲುಕ್‌ ನೀಡಲಾಗಿತ್ತು. ಆದರದು ಈಗ ರಾತ್ರಿ ವೇಳೆ ಗುಂಡು ಪಾರ್ಟಿ ಹಾಗೂ ಶೌಚಾಲಯಕ್ಕಾಗಿ ಬಳಸಲಾಗುತ್ತಿದೆ.
Vijaya Karnataka Web high tech conservancy shoot party
ಹೈಟೆಕ್‌ ಕನ್ಸ್‌ರ್ವೆನ್ಸಿಲಿ ಗುಂಡು ಪಾರ್ಟಿ!


ನಗರದ ಜೈಲು ವೃತ್ತದ ಸಮೀಪ ಹಾಗೂ ಅಚ್ಯುತ್‌ರಾವ್‌ ಲೇಔಟ್‌ ಮೊದಲ ಅಡ್ಡರಸ್ತೆಗೆ ಹೊಂದಿಕೊಂಡಂತೆ ಇರುವ ಕನ್ಸ್‌ರ್ವೆನ್ಸಿಗಳನ್ನು ಇತ್ತೀಚೆಗಷ್ಟೇ ಲಕ್ಷಾಂತರ ಹಣ ಖರ್ಚು ಮಾಡಿ ನೆಲಹಾಸುಗಳನ್ನು ಹಾಕಲಾಗಿದೆ. ಸಾರ್ವಜನಿಕರ ಬಳಕೆಗೆ ಬರಲಿ ಎಂಬ ಉದ್ದೇಶದಿಂದ ಶುಚಿಗೊಳಿಸಲಾಗಿದೆ. ಅದೀಗ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಸಂಜೆಯಾದರೆ ಸಾಕು ಇದು ಬಾರ್‌ ಆಗಿ ಪರಿವರ್ತನೆಯಾಗುತ್ತದೆ. ಯಾರ ಕಣ್ಣಿಗೂ ಸುಲಭವಾಗಿ ಬೀಳುವುದಿಲ್ಲಎಂಬ ಕಾರಣದಿಂದಾಗಿ ಮದ್ಯ ಸೇವಿಸುವುದಕ್ಕಾಗಿ ಇಲ್ಲಿಯೇ ಬರುತ್ತಿದ್ದಾರೆ. ಇಡೀ ಕನ್ಸ್‌ರ್ವೆನ್ಸಿ ತುಂಬ ಮದ್ಯದ ಪೌಚ್‌ ರಾಶಿ ಬಿದ್ದಿದ್ದೇ ಇದಕ್ಕೆ ಸಾಕ್ಷಿಯಾಗಿದೆ.

ಪಬ್ಲಿಕ್‌ ಟಾಯ್ಲೆಟ್‌: ಜನರ ಉಪಯೋಗಕ್ಕೆ ಬರಲಿ ಎಂಬ ಉದ್ದೇಶದಿಂದ ಒಂದೂವರೆ ತಿಂಗಳ ಹಿಂದಷ್ಟೇ ಹೈಟೆಕ್‌ ಸ್ಪರ್ಶ ನೀಡಲಾಗಿದೆ. ಆದರೆ, ಸಾರ್ವಜನಿಕ ಹೊಣೆಗೇಡಿತನ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷತ್ರ್ಯದಿಂದಾಗಿ ಪೂರ್ವಸ್ಥಿತಿಗೆ ಬಂದಿದೆ.

===

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ