ಆ್ಯಪ್ನಗರ

ನಾರಾಯಣಗುರು ಮಠದಲ್ಲಿ ಹೋಳಿ ಹುಣ್ಣಿಮೆ

ಧರ್ಮದ ದಾರಿ ಮಾನವ ಲೋಕದ ಉನ್ನತಿಗೆ ಮತ್ತು ಸುಭದ್ರ ಜೀವನಕ್ಕೆ ಹೆದ್ದಾರಿ, ಧರ್ಮವನ್ನು ರಕ್ಷಿಸಿದರೆ ಅದು ಎಲ್ಲರನ್ನು ರಕ್ಷಿಸುತ್ತದೆ ಎಂದು ನಾರಾಯಣ ಗುರು ಮಹಾ ಸಂಸ್ಥಾನ ಮಠದ ಶ್ರೀರೇಣುಕಾನಂದ ಸ್ವಾಮೀಜಿ ಹೇಳಿದರು.

Vijaya Karnataka 22 Mar 2019, 5:00 am
ರಿಪ್ಪನ್‌ಪೇಟೆ : ಧರ್ಮದ ದಾರಿ ಮಾನವ ಲೋಕದ ಉನ್ನತಿಗೆ ಮತ್ತು ಸುಭದ್ರ ಜೀವನಕ್ಕೆ ಹೆದ್ದಾರಿ, ಧರ್ಮವನ್ನು ರಕ್ಷಿಸಿದರೆ ಅದು ಎಲ್ಲರನ್ನು ರಕ್ಷಿಸುತ್ತದೆ ಎಂದು ನಾರಾಯಣ ಗುರು ಮಹಾ ಸಂಸ್ಥಾನ ಮಠದ ಶ್ರೀರೇಣುಕಾನಂದ ಸ್ವಾಮೀಜಿ ಹೇಳಿದರು.
Vijaya Karnataka Web SMR-21RPT1


ನಿಟ್ಟೂರಿನ ಶ್ರೀಮಠದಲ್ಲಿ ಗುರುವಾರ ಹೋಳಿ ಹುಣ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಧರ್ಮವನ್ನು ಅನುಸರಿಸಿದರೆ ನಮ್ಮೆಲ್ಲರ ಬದುಕು ಸುಭದ್ರವಾಗಿರುತ್ತದೆ. ಭೂಮಿಯ ಮೇಲೆ ಪ್ರತಿಯೊಬ್ಬರು ಹುಟ್ಟಿದ ಮೇಲೆ ಇರುವುದು ಒಂದೇ ಜೀವ, ಒಂದೇ ಜೀವನ. ನಮ್ಮ ಜೀವ ಮತ್ತು ಜೀವನ ಶಾಶ್ವತವೇನೂ ಅಲ್ಲ. ಧರ್ಮವು ಸರ್ವರ ಜೀವನಕ್ಕೆ ಶಾಂತಿಯ ದಾರಿ ತೋರಿಸುವ ಹೆದ್ದಾರಿಯಾಗಿದೆ. ಸಂಸಾರ ನೌಕೆ ಸುಗಮವಾಗಿ ಸಾಗಬೇಕಾದರೆ ಧರ್ಮವು ಜೀವನದ ಅವಿಭಾಜ್ಯ ಅಂಗವಾಗಿರಬೇಕು. ಆಗ ಮಾತ್ರ ಮನುಕುಲ ಶಾಂತಿಯ ಸ್ವರ್ಗವಾಗಿ ರೂಪುಗೊಳ್ಳುತ್ತದೆ ಎಂದರು.

ಸಮಾರಂಭದಲ್ಲಿ ಮಠದ ಅಭಿವೃದ್ಧಿಗೆ ಸಹಕಾರ ನೀಡಿದ ಸಾಗರ, ಶಿಕಾರಿಪುರ ಹಾಗೂ ಹೊಸನಗರ ತಾಲೂಕಿನ ದಾನಿಗಳನ್ನು ಸನ್ಮಾನಿಸಲಾಯಿತು. ಹೋಳಿ ಹುಣ್ಣಿಮೆ ನಿಮಿತ್ತ ಮಠಕ್ಕೆ ರಾಜ್ಯದ ಹಾಗೂ ಜಿಲ್ಲೆಯ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಹುಗುಡಿ ಗ್ರಾಮದ ಗ್ರಾಮಸ್ಥರು ಭಕ್ತಾದಿಗಳಿಗೆ ಹೋಳಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ