ಆ್ಯಪ್ನಗರ

ಪ್ರಾಮಾಣಿಕ ಸೇವೇಯೇ ಐಡೆಂಟಿಟಿ

ಪ್ರಾಮಾಣಿಕ ಸೇವೆಯನ್ನು ಸಮಾಜ ಗುರುತಿಸುತ್ತದೆ, ಪ್ರತಿಯೊಬ್ಬ ನಾಗರಿಕರಲ್ಲೂಸೇವಾ ಮನೋಭಾವ ಬೆಳೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ರೋಟರಿ ಕ್ಲಬ್‌ನ 3182ರ ಜಿಲ್ಲಾಗೌವರ್ನರ್‌ ರೋ.ಪಿ.ಎಚ್‌.ಪಿ.ಬಿ.ಎನ್‌.ರಮೇಶ್‌ ಹೇಳಿದರು.

Vijaya Karnataka 1 Sep 2019, 5:00 am
ರಿಪ್ಪನ್‌ಪೇಟೆ: ಪ್ರಾಮಾಣಿಕ ಸೇವೆಯನ್ನು ಸಮಾಜ ಗುರುತಿಸುತ್ತದೆ, ಪ್ರತಿಯೊಬ್ಬ ನಾಗರಿಕರಲ್ಲೂಸೇವಾ ಮನೋಭಾವ ಬೆಳೆದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ರೋಟರಿ ಕ್ಲಬ್‌ನ 3182ರ ಜಿಲ್ಲಾಗೌವರ್ನರ್‌ ರೋ.ಪಿ.ಎಚ್‌.ಪಿ.ಬಿ.ಎನ್‌.ರಮೇಶ್‌ ಹೇಳಿದರು.
Vijaya Karnataka Web SMR-31RPT6


ಪಟ್ಟಣದ ಜಿಎಸ್‌ಬಿ ಕಲ್ಯಾಣ ಮಂದಿರದಲ್ಲಿಶುಕ್ರವಾರ ಸಂಜೆ ಏರ್ಪಡಿಸಿದ್ದ ರೋಟರಿ ಕ್ಲಬ್‌ ಜಿಲ್ಲಾಗೌವರ್ನರ್‌ ಭೇಟಿ ಕಾರ್ಯಕ್ರಮದಲ್ಲಿಮೆಸ್ಕಾಂ ಅಧಿಕಾರಿಗಳು ಮತ್ತು ನೌಕರರಿಗೆ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.

ನೆರೆ ಪೀಡಿತ ಪ್ರದೇಶದಲ್ಲಿನೌಕರರು ಶ್ರಮವಹಿಸಿ ಬೆಳಕು ನೀಡುವ ಮೂಲಕ ಗ್ರಾಮಾಂತರ ಪ್ರದೇಶದ ನಿರಾಶ್ರಿತರ ನೆರವಿಗೆ ಧಾವಿಸಿದ್ದಾರೆ. ಮಳೆ ಚಳಿ ಎನ್ನದೆ ಕರ್ತವ್ಯ ನಿರ್ವಹಿಸಿದ್ದಾರೆ. ಅವರ ಕಾಯಕ ನಿಷ್ಠೆ ಗುರುತಿಸಿ ಪ್ರೋತ್ಸಾಹಿಸುವ ಹೊಣೆ ರೋಟರಿಯದ್ದು ಎಂದರು. ರೋಟರಿ ಕ್ಲಬ್‌ ಅಧ್ಯಕ್ಷ ಆರ್‌.ಗಣೇಶ್‌ ಅಧ್ಯಕ್ಷತೆ ವಹಿಸಿದ್ದರು. ಅಸಿಸ್ಟೆಂಟ್‌ ಗೌವರ್ನರ್‌ ರೋ.ಪಿ.ಹೆಚ್‌.ಎಫ್‌ ಜಿ.ವಿಜಯಕುಮಾರ್‌, ಜೋನಲ್‌ ಲೆಫ್ಟಿನೆಂಟ್‌ ರೋ.ಡಾ.ಜ್ಞಾನೇಶ್‌ ಮಾತನಾಡಿದರು. ರೋಟರಿ ಕ್ಲಬ್‌ ಕಾರ‍್ಯದರ್ಶಿ ಎಂ.ಬಿ.ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು. ರೋಟರಿ ತರಬೇತಿದಾರ ವಸಂತ್‌ ಹೋಬಳಿದಾರ್‌, ಶಿವಮೊಗ್ಗ ರಾಷ್ಟ್ರೀಯ ವಾಣಿಜ್ಯ ಕಾಲೇಜು ಪ್ರಾಚಾರ್ಯ ಎಚ್‌.ಎಂ.ಸುರೇಶ್‌ ಇತರರು ಇದ್ದರು. ಪ್ರಣತಿ ಅಣ್ಣಪ್ಪ ಪ್ರಾರ್ಥಿಸಿ, ಜಂಬಳ್ಳಿ ಸದಾನಂದ ಸ್ವಾಗತಿಸಿದರು. ಜೆ.ರಾಧಾಕೃಷ್ಣ, ನಾಗಭೂಷಣ ನಿರೂಪಿಸಿದರು. ಸಬ್ಬಾಸ್ಟಿನ್‌ ಮ್ಯಾಥ್ಯೂಸ್‌ ವಂದಿಸಿದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ