ಆ್ಯಪ್ನಗರ

‘ಕ್ರಿಯಾಶೀಲರಿಗೆ ಗೌರವ ಅರ್ಥಪೂರ್ಣ ’

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಸರಕಾರಿ ಜೆಸಿ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಸರಕಾರಿ ನೌಕರರ ಸಂಘ, ಆರೋಗ್ಯ ಇಲಾಖೆ ನೌಕರರ ಸಂಘದ ಆಶ್ರಯದಲ್ಲಿ ಮಹಿಳಾ ದಿನಾಚರಣೆ ನಡೆಯಿತು.

Vijaya Karnataka 9 Mar 2019, 5:00 am
ತೀರ್ಥಹಳ್ಳಿ : ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಟ್ಟಣದ ಸರಕಾರಿ ಜೆಸಿ ಆಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಸರಕಾರಿ ನೌಕರರ ಸಂಘ, ಆರೋಗ್ಯ ಇಲಾಖೆ ನೌಕರರ ಸಂಘದ ಆಶ್ರಯದಲ್ಲಿ ಮಹಿಳಾ ದಿನಾಚರಣೆ ನಡೆಯಿತು.
Vijaya Karnataka Web SMR-8TTH6


ಸಮಾರಂಭ ಉದ್ದೇಶಿಸಿ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ವಿ. ಸತೀಶಶೆಟ್ಟಿ ಮಾತನಾಡಿ, ಮಹಿಳಾ ದಿನಾಚರಣೆ ಅರ್ಥಪೂರ್ಣವಾಗಿಸಲು ಕಾರ‍್ಯಚಟುವಟಿಕೆ ಅಗತ್ಯ. ಕ್ರಿಯಾಶೀಲತೆಯಿಂದ ಏಳಿಗೆಯಲ್ಲಿ ತೊಡಗಿಸಿಕೊಳ್ಳುವ ಮಹಿಳೆಯರ ಶ್ರಮ ಗುರುತಿಸುವಂತಹದ್ದು. ಮಹಿಳೆಯರ ಸಾಧನೆ ಗೌರವಿಸುವ ಸಮಾಜ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ ಬೆಳವಣಿಗೆ ಎಂದರು.

ಸರಕಾರಿ ಜೆಸಿ ಆಸ್ಪತ್ರೆ ತಜ್ಞ ವೈದ್ಯೆ ಡಾ.ಸುಮಾ, ಹುಂಚದಕಟ್ಟೆ ಸರಕಾರಿ ಆಸ್ಪತ್ರೆ ವೈದ್ಯೆ ಡಾ.ಶೋಭಾದೇವಿ, ಮಹಿಳೆ ಮತ್ತು ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕರಾದ ಎಚ್‌.ಸಿ. ಪವಿತ್ರಾ, ಚಂದ್ರಿಕಾ, ಹಿರಿಯ ಮಹಿಳಾ ಆರೋಗ್ಯ ಸಹಾಯಕರಾದ ಗಿರಿಜಮ್ಮ, ಪ್ಲೋರಿನಾ ಫರ್ನಾಂಡೀಸ್‌, ಕಿರಿಯ ಆರೋಗ್ಯ ಸಹಾಯಕರಾದ ಸುಮಿತ್ರಮ್ಮ, ಛಾಯಮ್ಮ, ಜೆಸಿ ಆಸ್ಪತ್ರೆ ಶೂಶ್ರೂಷಕಿ ಗೌರಮ್ಮ, ಡಿ ದರ್ಜೆ ಸಿಬ್ಬಂದಿ ಶೈಲಜಾಶೆಟ್ಟಿ ಅವರನ್ನು ಗೌರವಿಸಲಾಯಿತು. ಡಾ. ಸುಮಾ, ಡಾ. ಶೋಭಾದೇವಿ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್‌, ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ. ನಿಶ್ಚಲ್‌, ತಜ್ಞ ವೈದ್ಯರಾದ ಡಾ.ಗಿರೀಶ್‌, ಡಾ. ರಂಗಸ್ವಾಮಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳಾದ ಡಾ.ತೇಜಸ್ವಿ, ಡಾ.ಸುರೇಶ್‌, ಡಾ. ಶಮಾಅಜುಂ, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಬಲೇಶ್ವರ ಹೆಗಡೆ, ಜಿಲ್ಲಾ ಮೇಲ್ವಿಚಾರಕ ವೆಂಕಟಕೃಷ್ಣ ಮತ್ತಿತರರು ಇದ್ದರು.

ಎ.ಎಂ. ಜಗದೀಶ್‌ ಸ್ವಾಗತಿಸಿ, ಗುರು ಪ್ರಸಾದ್‌ ನಿರೂಪಿಸಿ, ಈಶ್ವರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ