ಆ್ಯಪ್ನಗರ

ಸಿದ್ದರಾಮಯ್ಯ ಗೋಮಾಂಸ ತಿನ್ನುತ್ತೇನೆ ಎಂದರೆ ತಿಂದು‌ ಸಾಯಲಿ: ಈಶ್ವರಪ್ಪ ವಿವಾದಾತ್ಮಕ ಹೇಳಿಕೆ

ಸಿದ್ದರಾಮಯ್ಯಗೆ ಬಲಪಂಥಿಯರು ಬೇಡ, ಎಡಪಂಥಿಯರು ಬೇಡ, ಗುರುಗಳು, ಮಠ, ದೇವಸ್ಥಾನ, ಗೋವು ಬೇಡ, ಹಾಗೆಯೇ ಹಿಂದೂಗಳು ಸಹ ಬೇಡ ಎಂದು ಸಹ ಸಿದ್ದರಾಮಯ್ಯ ಹೇಳಲಿ ನೋಡೋಣ ಎಂದು ಸವಾಲು ಹಾಕಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಅವರು ಗೋಮಾಂಸ ತಿನ್ನುತ್ತೇನೆ ಎಂದರೆ ತಿಂದು‌ ಸಾಯಲಿ ಎಂದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Vijaya Karnataka Web 29 Sep 2022, 4:56 pm
ಶಿವಮೊಗ್ಗ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನುತ್ತೇನೆ ಎಂದ್ರೇ ತಿನ್ಕೊಂಡು ಸಾಯ್ಲಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Vijaya Karnataka Web Ks Eshwarappa
ಕೆ.ಎಸ್.ಈಶ್ವರಪ್ಪ(ಸಂಗ್ರಹ ಚಿತ್ರ)


ಸಿದ್ದರಾಮಯ್ಯ ಬಲಪಂಥಿಯ ವಾದ ಡೇಂಜರ್ ಅಂದಿರುವ ವಿಚಾರವಾಗಿ ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸಿದ್ದರಾಮಯ್ಯಗೆ ಬಲಪಂಥಿಯರು ಬೇಡ, ಎಡಪಂಥಿಯರು ಬೇಡ, ಗುರುಗಳು, ಮಠ, ದೇವಸ್ಥಾನ, ಗೋವು ಬೇಡ, ಹಾಗೆಯೇ ಹಿಂದೂಗಳು ಸಹ ಬೇಡ ಎಂದು ಸಹ ಸಿದ್ದರಾಮಯ್ಯ ಹೇಳಲಿ ನೋಡೋಣ. ಇವರ ಇಚ್ಛೆಗೆ ತಕ್ಕಂತೆ ಇಂದು ಕಾಂಗ್ರೆಸ್ ಪಕ್ಷ ಇಲ್ಲ. ಪಿಎಫ್ಐ ಬ್ಯಾನ್ ನಿಂದ ಸ್ವಾತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಕ್ಕಿದೆ ಎಂದರು.

PFI Ban - ಪಿಎಫ್ಐ ನಿಷೇಧದಿಂದ ಭಗತ್ ಸಿಂಗ್ ಆತ್ಮಕ್ಕೆ ಶಾಂತಿ: ಈಶ್ವರಪ್ಪ
ಇಂದು ಗುಂಪು ಗುಂಪಾಗಿ ಬಂದು ಬಿಜೆಪಿ ಸೇರುತ್ತಿದ್ದಾರೆ. ಭಾರತ ಮಾತೇ ತಾಯಿ ಎಂದು ಒಪ್ಪಿಕೊಳ್ಳುವವರನ್ನು ಬಿಜೆಪಿ ಸ್ವಾಗತ ಮಾಡುತ್ತೆ. ಭಾರತ ಮಾತೇ ಅಲ್ಲ ಅನ್ನುವವರನ್ನು ಹತ್ರಾ ಸೇರಿಸಲ್ಲ. ಕೃಷ್ಣನ ದೇವಸ್ಥಾನಕ್ಕೆ ಹೋಗಲ್ಲ ಅನ್ನೋ ಸಿದ್ದರಾಮಯ್ಯನ ಸೇರಿಸೋಕೆ ಆಗುತ್ತಾ.?
ಸಿದ್ದರಾಮಯ್ಯ ಗೋಮಾಂಸ ತಿನ್ನುತ್ತೇನೆ ಎಂದರೆ ತಿಂದು‌ ಸಾಯಲಿ ಎಂದ ಈಶ್ವರಪ್ಪ ಹೇಳಿದರು.
ಕಳ್ಳತನ ಮಾಡಿದರೆ ಸುಮ್ಮನಿರಬೇಕಾ?
ಇದೇವೇಳೆ ಡಿ.ಕೆ.ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಅವರ ಮನೆಯಲ್ಲಿ ಬಂಡಲ್ ಗಟ್ಟಲೇ ಹಣ ಸಿಕ್ಕಿದ್ದು ಸುಳ್ಳಾ? ಕಳ್ಳತನ ಮಾಡಿಕೊಂಡು ಹೋದರೇ ಸುಮ್ಮನೇ ಇರಬೇಕಾ? ಅವರ ಮನೆ ಮೇಲೆ ರೈಡ್ ಮಾಡಿದ್ದು ತಪ್ಪಾ? ಇವರ ಮನೆ ಮೇಲೆ ರೈಡ್ ಮಾಡದೇ ಯಾರ ಮನೆ ಮೇಲೆ ಮಾಡ್ತಾರೆ ಎಂದು ಪ್ರಶ್ನೆಗಳನ್ನು ಕೇಳಿದರು.

‘ನಾನೀಗ ಮದುವೆ ಗಂಡು ಆಗಲು ರೆಡಿ ಇದ್ದೇನೆ’: ಸಚಿವ ಸ್ಥಾನ ನೀಡದ್ದಕ್ಕೆ ಸ್ವಪಕ್ಷೀಯರ ಮೇಲೆ ಈಶ್ವರಪ್ಪ ಗರಂ
ಬಂಡಲ್ ಲೆಕ್ಕದಲ್ಲಿ ಹಣ ಸಿಗುತ್ತೆ. ಎಷ್ಟು ಕೋಟಿ ಎಂದು ಲೆಕ್ಕಕ್ಕೆ ಸಿಗಬೇಕು.‌ ಭಾರತ್ ಜೋಡೋ ಯಾತ್ರೆ, ಅಧಿವೇಶನ ಸಮಯದಲ್ಲಿ ರೈಡ್ ಆಗುತ್ತದೆ ಎನ್ನುತ್ತಾರೆ. ಇನ್ನುಮೇಲೆ ಡಿಕೆಶಿಗೆ ಡೇಟ್ ಕೊಟ್ಟು ರೈಡ್ ಮಾಡಲು ಹೇಳೋಣ. 3 ತಿಂಗಳ ಮುಂಚೆಯೇ ನಿಮ್ಮ ಮನೆ ರೈಡ್ ಮಾಡ್ತಿವಿ. ನಿಮ್ಮ ದುಡ್ಡು, ಬಂಗಾರ, ದಾಖಲೆ ತೆಗೆದಿಡೋಕೆ ಅವಕಾಶ ಕೊಡೋಣ ಎಂದು ವ್ಯಂಗ್ಯವಾಡಿದರು.

ಈ ರೀತಿ ವಿಚಿತ್ರ ಹೇಳಿಕೆ ಕೊಟ್ಟರೇ ರಾಜ್ಯದ ಜನ ಇವರನ್ನ ನಂಬುತ್ತಾರಾ? ರಾಜ್ಯದ ಸಿಎಂ ಬಗ್ಗೆ ಪೇ ಸಿಎಂ ಅಭಿಯಾನ ಮಾಡ್ತಾರೆ. ದೇಶದಲ್ಲಿ ಯಾರು ಇಷ್ಟು ನಿರ್ಲಜ್ಜ ರಾಜಕಾರಣ ಮಾಡಿರಲಿಲ್ಲ. ಸಿಎಂ ಬಗ್ಗೆ ಹಗುರವಾಗಿ ಮಾತನಾಡುವ ಯೋಗ್ಯತೆ ಕಾಂಗ್ರೆಸ್ ಗೆ ಇಲ್ಲ. ಸಿಬಿಐ ಸ್ವತಂತ್ರ ಸಂಸ್ಥೆ. ಬಿಜೆಪಿ- ಕಾಂಗ್ರೆಸ್ ಎಲ್ಲರ ಮೇಲೂ ರೈಡ್ ಮಾಡಿದೆ. ಸ್ವಾತಂತ್ರ್ಯ ಬಂದಾಗಿಂದ ಲೂಟಿ ಮಾಡಿಕೊಂಡು ಬಂದಿದ್ದಾರೆ. ರೈಡ್ ಮಾಡಿದ ಕಡೆಯಲ್ಲಾ ಸಿಕ್ಕಿದೆ. ಸುಮ್ಮನೆ ರೈಡ್ ಮಾಡಿಲ್ಲ.
ಲೂಟಿ ಮಾಡಿದಕ್ಕೆ ತಿಹಾರ್ ಜೈಲಿಗೆ ಹೋಗಿ ಬಂದಿದ್ದು. ಜೈಲಿಗೆ ಹೋಗಿ ಬಂದವರ ಕೈಯಲ್ಲೇ ಇವತ್ತು ಕಾಂಗ್ರೆಸ್ ಇದೆ. ರಾಜ್ಯದ ಜನ ಜೈಲಿಗೆ ಹೋದವರ ಸಹವಾಸ ಬೇಡ ಎಂದು ಬಿಜೆಪಿಗೆ ಬೆಂಬಲ ಕೊಡ್ತಿದ್ದಾರೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ