ಆ್ಯಪ್ನಗರ

ಪರೀಕ್ಷೆ ನಿಯಮ ಉಲ್ಲಂಘನೆಯಾದರೆ ಜೈಲು

ಪರೀಕ್ಷೆ ಸಮಯದಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಯ ಪೋಟೋ ತೆಗೆದು ವಾಟ್ಸಾಪ್‌ ಮೂಲಕ ಹರಿಬಿಡುವುದು, ಪರೀಕ್ಷಾ ಕೇಂದ್ರಗಳಲ್ಲಿ ಚೀಟಿ ಸರಬರಾಜು ಇತರೆ ಕೃತ್ಯ ಕಂಡು ಬಂದರೆ ಪರೀಕ್ಷಾ ನಿಯಮ ಉಲ್ಲಂಘನೆ ಕಾಯಿದೆ ಪ್ರಕಾರ 5 ವರ್ಷ ಜೈಲು, ಐದು ಲಕ್ಷ ರೂ. ದಂಡದ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಡಿಡಿಪಿಐ ಸುಮಂಗಳಾ ಪಿ.ಕುಚಿನಾಡ ತಿಳಿಸಿದ್ದಾರೆ.

Vijaya Karnataka 24 Mar 2019, 5:00 am
ಶಿವಮೊಗ್ಗ : ಪರೀಕ್ಷೆ ಸಮಯದಲ್ಲಿ ನಕಲು ಮಾಡುವುದು, ಪ್ರಶ್ನೆಪತ್ರಿಕೆಯ ಪೋಟೋ ತೆಗೆದು ವಾಟ್ಸಾಪ್‌ ಮೂಲಕ ಹರಿಬಿಡುವುದು, ಪರೀಕ್ಷಾ ಕೇಂದ್ರಗಳಲ್ಲಿ ಚೀಟಿ ಸರಬರಾಜು ಇತರೆ ಕೃತ್ಯ ಕಂಡು ಬಂದರೆ ಪರೀಕ್ಷಾ ನಿಯಮ ಉಲ್ಲಂಘನೆ ಕಾಯಿದೆ ಪ್ರಕಾರ 5 ವರ್ಷ ಜೈಲು, ಐದು ಲಕ್ಷ ರೂ. ದಂಡದ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಡಿಡಿಪಿಐ ಸುಮಂಗಳಾ ಪಿ.ಕುಚಿನಾಡ ತಿಳಿಸಿದ್ದಾರೆ.
Vijaya Karnataka Web Sumangala DDPI


ಜಿಲ್ಲೆಯ ಎಲ್ಲ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯವಾಗಿ ಬಳಕೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಇಷ್ಟಾಗ್ಯೂ ಪ್ರಶ್ನೆ ಪತ್ರಿಕೆ ಲೀಕ್‌ ಮಾಡುವುದು, ನಕಲು ಮಾಡುವುದು, ಅಜಾಗರೂಕತೆ,ಅವ್ಯವಹಾರಗಳು ಕಂಡು ಬಂದರೆ ಕೇಂದ್ರದ ಮುಖ್ಯ ಅಧಿಕ್ಷಕರು, ಕಸ್ಟೋಡಿಯನ್‌ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ