ಆ್ಯಪ್ನಗರ

ಕಾಲಘಟ್ಟ ಅರಿತರೆ ಕಥೆ ತುಡಿತ ಅರ್ಥ

ಕಥಾ ಭಾಗಗಳಲ್ಲಿಬರುವ ಪ್ರತಿಯೊಂದು ಪಾತ್ರಗಳಿಗೂ ಅದರದ್ದೇ ಆದ ಆಯಾಮವಿದೆ. ಆದ್ದರಿಂದ ಕಥೆಯ ಪ್ರತಿ ಸಾಲುಗಳೂ ಅರ್ಥಗರ್ಭಿತ ವಾಗುತ್ತದೆ. ಆದ್ದರಿಂದ ಕಥೆಯ ಸನ್ನಿವೇಶ, ಕಾಲಘಟ್ಟ ಅರಿತು ಅಥೈರ್‍ಸಿ ಓದಿದಾಗ ಕಥೆಗಾರನ ಪ್ರತಿಯೊಂದು ಪಾತ್ರ, ಶಬ್ಧಗಳು ಕಥೆಯ ಆಂತರಿಕ ತುಡಿತ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೆಗ್ಗೋಡಿನ ನೀನಾಸಂ ಪ್ರತಿಷ್ಠಾನದ ಪ್ರೊ.ಟಿ.ಪಿ. ಅಶೋಕ್‌ ಹೇಳಿದರು.

Vijaya Karnataka 19 Jan 2020, 5:00 am
ಭದ್ರಾವತಿ: ಕಥಾ ಭಾಗಗಳಲ್ಲಿಬರುವ ಪ್ರತಿಯೊಂದು ಪಾತ್ರಗಳಿಗೂ ಅದರದ್ದೇ ಆದ ಆಯಾಮವಿದೆ. ಆದ್ದರಿಂದ ಕಥೆಯ ಪ್ರತಿ ಸಾಲುಗಳೂ ಅರ್ಥಗರ್ಭಿತ ವಾಗುತ್ತದೆ. ಆದ್ದರಿಂದ ಕಥೆಯ ಸನ್ನಿವೇಶ, ಕಾಲಘಟ್ಟ ಅರಿತು ಅಥೈರ್‍ಸಿ ಓದಿದಾಗ ಕಥೆಗಾರನ ಪ್ರತಿಯೊಂದು ಪಾತ್ರ, ಶಬ್ಧಗಳು ಕಥೆಯ ಆಂತರಿಕ ತುಡಿತ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೆಗ್ಗೋಡಿನ ನೀನಾಸಂ ಪ್ರತಿಷ್ಠಾನದ ಪ್ರೊ.ಟಿ.ಪಿ. ಅಶೋಕ್‌ ಹೇಳಿದರು.
Vijaya Karnataka Web 53462908073313BDVT4_46


ಅವರು ಸೋಮವಾರ ನ್ಯೂಟೌನ್‌ ಸರ್‌.ಎಂ.ವಿಶ್ವೇಶ್ವರಾಯ ಸರಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಭಾಂಗಣದಲ್ಲಿಸ್ನಾತಕೋತ್ತರ ಅಧ್ಯಯನ ಕೇಂದ್ರ, ಸಾಹಿತ್ಯ ವೇದಿಕೆ, ಕನ್ನಡ ಮತ್ತು ಇಂಗ್ಲಿಷ್‌ ವಿಭಾಗ, ಐಕ್ಯುಎಂಸಿ ಹಾಗೂ ನೀನಾಸಂ ಪ್ರತಿಷ್ಠಾನ ಹೆಗ್ಗೋಡು ಆಶ್ರಯದಲ್ಲಿಏರ್ಪಡಿಸಿದ್ದ ಕಥಾಕಮ್ಮಟ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಕಥಾ ಸಾಹಿತ್ಯ ವಸಾಹತು ಶಾಹಿಯಿಂದ ದೇಶದ ಸಂಸ್ಕೃತಿಯ ಮೇಲಾದ ಪರಿಣಾಮಗಳನ್ನು ಸಶಕ್ತವಾಗಿ ಅವುಗಳು ಅಭಿವ್ಯಕ್ತಪಡಿಸಿವೆ. ಕುಟುಂಬದಲ್ಲಿವ್ಯಕ್ತಿ ಸರಿಯಾದ ಜವಾಬ್ಧಾರಿ ನಿರ್ವಹಿಸದಿದ್ದಾಗ ಅನ್ಯವ್ಯಕ್ತಿ ಕುಟುಂಬದಲ್ಲಿಪ್ರವೇಶಿಸುವ ಮೂಲಕ ಕುಟುಂಬದ ಸಂಬಂಧ ಹಾಳುಮಾಡಲು ಸಾಧ್ಯ. ಹಾಗೆಯೇ ದೇಶದ ಆಡಳಿತಗಾರರು ದೇಶದ ಚುಕ್ಕಾಣಿ ಸರಿಯಾಗಿ ನಡೆಸದಿದ್ದರೆ ಅಧಃಪತನವಾಗುತ್ತದೆ ಎಂಬುದಕ್ಕೆ ಆಂಗ್ಲರು ಈ ದೇಶವನ್ನು ಆಳ್ವಿಕೆ ಮಾಡಿದ್ದೇ ಸಾಕ್ಷಿ. ಹಿರಿಯ ಸಾಹಿತಿಗಳಾದ ಮಾಸ್ತಿ, ಪ್ರೇಂಚಂದ್‌, ಕುವೆಂಪು, ಭೀಷ್ಮಸಹನಿ ಅವರು ರಚಿಸಿದ ಕಥೆಗಳ ಕೆಲವು ಸನ್ನಿವೇಶ ಮತ್ತು ಪಾತ್ರ ವಿವರಿಸಿ ಕಥಾ ಕಮ್ಮಟದಲ್ಲಿಭಾಗವಹಿಸಿದ್ದ ವಿದ್ಯಾರ್ಥಿಗಳ ಗಮನ ಸೆಳೆದರು.

ಕಾಲೇಜು ಪ್ರಾಂಶುಪಾಲ ಡಾ.ಎಂ.ಜಿ.ಉಮಾಶಂಕರ್‌ ಅಧ್ಯಕ್ಷತೆ ವಹಿಸಿದ್ದರು. ಸಹ್ಯಾದ್ರಿ ಕಾಲೇಜಿನ ಪ್ರೊ.ಅವಿನಾಶ್‌, ನಿವೃತ್ತ ಪ್ರಾಧ್ಯಾಪಕ ಎಚ್‌.ಎಂ.ಶಿವಾನಂದ ಇತರರು ಇದ್ದರು. ಐಕ್ಯುಎಂಸಿ ಸಂಚಾಲಕ ಪ್ರೊ.ಮೊಹಮದ್‌ ನಜೀಬ್‌, ಅಧ್ಯಾಪಕರಾದ ಪ್ರೊ.ವೆಂಕಟೇಶ್‌, ಪ್ರೊ.ಸವಿತ ಹಾಗೂ ನಾನಾ ವಿಭಾಗಗಳ ಅಧ್ಯಾಪಕರು ಇತರರು ಇದ್ದರು. ಶೀಲಾ ಪ್ರಾರ್ಥಿಸಿ, ಡಾ.ಸುಧಾ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ