ಆ್ಯಪ್ನಗರ

ಮರಗಳ ಅಕ್ರಮ ಕಡಿತಲೆ: ದೂರು ದಾಖಲು

ತಮ್ಮ ಖಾತೆ ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುರುವಾರ ದೂರು ನೀಡಲಾಗಿದೆ.

Vijaya Karnataka 22 Dec 2018, 5:00 am
ಹೊಸನಗರ: ತಮ್ಮ ಖಾತೆ ಜಮೀನಿನಲ್ಲಿ ಬೆಳೆದಿದ್ದ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಗುರುವಾರ ದೂರು ನೀಡಲಾಗಿದೆ.
Vijaya Karnataka Web SMR-20HOSP7


ತಾಲೂಕಿನ ನಗರ ಹೋಬಳಿ ಅಂಡಗದೋದೂರು ಗ್ರಾ.ಪಂ. ವ್ಯಾಪ್ತಿಯ ನಿಲ್ಸಕಲ್‌ ಗ್ರಾಮದ ಚಂದ್ರಶೇಖರ ಹಾಗೂ ಗುಂಡಪ್ಪಗೌಡ ಅವರಿಗೆ ಸೇರಿದ ಸರ್ವೆ ನಂ. 31 ಮತ್ತು 32ರಲ್ಲಿ ಬೆಳೆದಿದ್ದ ಐದಾರು ಬೋಗಿ ಜಾತಿಯ ಮರಗಳ ಸಹಿತ ಅನೇಕ ಕಾಡು ಜಾತಿಯ ಮರಗಳನ್ನು ಇದೇ ಗ್ರಾಮದ ಪ್ರಮೋದ ಎಂಬುವವರು ಅಕ್ರಮವಾಗಿ ಕಡಿತಲೆ ಮಾಡಿದ್ದಾರೆ ಎಂದು ಅರಣ್ಯ ಇಲಾಖೆಗೆ ನೀಡಿದ ದೂರಿನಲ್ಲಿ ಆರೋಪಿಸಲಾಗಿದೆ.

ಅಲ್ಲದೇ ಕಡಿತಲೆ ಮಾಡಿದ ಮರಗಳು ಅಡಕೆ ತೋಟದ ಮೇಲೆ ಉರುಳಿದ್ದು, ನೂರಕ್ಕೂ ಹೆಚ್ಚು ಅಡಕೆ ಮರಗಳು ಧರಾಶಾಯಿಯಾಗಿವೆ. ಅಕ್ರಮವಾಗಿ ಮರಕಡಿತಲೆ ಮಾಡಿದ್ದು ಅಲ್ಲದೇ, ನನ್ನ ಕೃಷಿ ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿದ ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಹಾಗೂ ತಾಲೂಕು ಆಡಳಿತಕ್ಕೆ ಚಂದ್ರಶೇಖರ್‌ ಹಾಗೂ ಗುಂಡಪ್ಪ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ