ಆ್ಯಪ್ನಗರ

ಅಭ್ಯರ್ಥಿ, ಪಕ್ಷಕ್ಕಿಂತ ದೇಶ ರಕ್ಷಣೆಗೆ ಮಹತ್ವ

ಪ್ರಧಾನಿ ಯಾರಾಗಬೇಕು ಎನ್ನುವುದು ಈ ಬಾರಿಯ ಲೋಕಸಭಾ ಚುನಾವಣೆ ಚರ್ಚೆಯ ವಿಷಯವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

Vijaya Karnataka 21 Mar 2019, 5:00 am
ಹೊಸನಗರ: ಪ್ರಧಾನಿ ಯಾರಾಗಬೇಕು ಎನ್ನುವುದು ಈ ಬಾರಿಯ ಲೋಕಸಭಾ ಚುನಾವಣೆ ಚರ್ಚೆಯ ವಿಷಯವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
Vijaya Karnataka Web SMR-20hosp2


ತಾಲೂಕಿನ ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಅವರು ಬುಧವಾರ ಭೇಟಿ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ,

ರಾಷ್ಟ್ರೀಯ ವಿಷಯಗಳ ಕುರಿತು ದೇಶದ ಪ್ರತಿಯೊಬ್ಬ ನಾಗರಿಕ ಚರ್ಚೆ ನಡೆಸುತ್ತಿರುವುದು ಈ ಬಾರಿಯ ಚುನಾವಣೆ ವಿಶೇಷ. ಮತದಾರರು ಅಭ್ಯರ್ಥಿ ಹಾಗೂ ಪಕ್ಷ ಕ್ಕಿಂತಲೂ ದೇಶದ ಸಂರಕ್ಷ ಣೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಈ ದಿಸೆಯಲ್ಲಿ ನರೇಂದ್ರ ಮೋದಿ ಅವರೇ ಮುಂದಿನ ಅವಧಿಗೆ ಪ್ರದಾನಿಯಾಗಬೇಕು ಹಾಗೂ ಅದರಲ್ಲಿ ದೇಶದ ಹಿತ ಅಡಗಿದೆ ಎನ್ನುವುದು ಸಾರ್ವತ್ರಿಕವಾಗಿ ಕೇಳಿ ಬಂದಿದೆ ಎಂದರು.

ಸ್ವಾತಂತ್ರ್ಯಾ ನಂತರ ಆರು ದಶಕಗಳ ಕಾಲ ಕಾಂಗ್ರೆಸ್‌ ಆಡಳಿತ ನಡೆಸಿದಾಗ ದೇಶ ಯಾವ ರೀತಿಯಲ್ಲಿ ಅಭಿವೃದ್ಧಿಯಾಗಿತ್ತು ಎನ್ನುವ ವಿಷಯವನ್ನು ಕಳೆದ ಐದು ವರ್ಷಗಳ ಅಭಿವೃದ್ಧಿಯೊಂದಿಗೆ ಹೋಲಿಸಿ ನೋಡಬೇಕು. ಮೋದಿ ಪ್ರಧಾನಿಯಾದ ನಂತರ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವ ಎಷ್ಟು ಹೆಚ್ಚಿದೆ ಎನ್ನುವುದು ಗಮನಾರ್ಹ ಎಂದರು.

ಕಳಸವಳ್ಳಿ ಸೇತುವೆ ನಿರ್ಮಾಣ, ಜನಶತಾಬ್ದಿ ರೈಲು, ವಿಐಎಸ್‌ಎಲ್‌ ಅಭಿವೃದ್ಧಿ, ಅರಸಾಳು, ಆನಂದಪುರ ರೈಲ್ವೆ ನಿಲ್ದಾಣ, ಇಎಸ್‌ಐ ಆಸ್ಪತ್ರೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಸಂಸದನಾಗಿ ಹೆಚ್ಚು ಗಮನ ಹರಿಸಿದ್ದೇನೆ. ಅತಿ ಹೆಚ್ಚಿನ ಅಂತರದೊಂದಿಗೆ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ಚುನಾವಣೆ ನಂತರ ರಾಜ್ಯದಲ್ಲಿ ಸಹಾ ಬಿಜೆಪಿ ನೇತೃತ್ವದ ಸರಕಾರ ರಚನೆಯಾಗಲಿದೆ ಎಂದರು.

ಪಕ್ಷ ದ ಮುಖಂಡರಾದ ಎಸ್‌.ದತ್ತಾತ್ರಿ, ಪದ್ಮನಾಭಭಟ್‌, ತಾಲೂಕು ಘಟಕದ ಅಧ್ಯಕ್ಷ ಎ.ವಿ.ಮಲ್ಲಿಕಾರ್ಜುನ, ಕೆ.ವಿ.ಕೃಷ್ಣಮೂರ್ತಿ, ಜಿ.ಪಂ. ಸದಸ್ಯ ಎಸ್‌.ಸುರೇಶ್‌, ಗ್ರಾ.ಪಂ. ಸದಸ್ಯ ಸುಬ್ರಮಣ್ಯ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ