ಆ್ಯಪ್ನಗರ

ಬಿಜೆಪಿ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಯಲಿ

ರಾಜ್ಯದಲ್ಲಿ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಸರಕಾರ ಸುಭದ್ರವಾಗಿದೆ. ಇದನ್ನು ಕೆಡವಲು ಬಿಜೆಪಿ ಯತ್ನಿಸಿದರೆ ನಾವೂ ಕೂಡ 'ಆಪರೇಷನ್‌ ಹಸ'್ ಮಾಡುತ್ತೇವೆ ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದರು.

Vijaya Karnataka 21 Jun 2018, 5:00 am
ಶಿವಮೊಗ್ಗ : ರಾಜ್ಯದಲ್ಲಿ ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಸರಕಾರ ಸುಭದ್ರವಾಗಿದೆ. ಇದನ್ನು ಕೆಡವಲು ಬಿಜೆಪಿ ಯತ್ನಿಸಿದರೆ ನಾವೂ ಕೂಡ 'ಆಪರೇಷನ್‌ ಹಸ'್ತ ಮಾಡುತ್ತೇವೆ ಎಂದು ಮಾಜಿ ಶಾಸಕ, ಕಾಂಗ್ರೆಸ್‌ ಮುಖಂಡ ಬೇಳೂರು ಗೋಪಾಲಕೃಷ್ಣ ಹೇಳಿದರು.
Vijaya Karnataka Web income tax department raid must at bjp leaders residence
ಬಿಜೆಪಿ ನಾಯಕರ ಮನೆ ಮೇಲೆ ಐಟಿ ದಾಳಿ ನಡೆಯಲಿ


ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ಮಾತನಾಡಿ, ಈಗಾಗಲೇ 8 ಜನ ಬಿಜೆಪಿ ಶಾಸಕರು ನಮ್ಮ ಜತೆ ಇದ್ದಾರೆ. ಕಾಂಗ್ರೆಸ್‌ ನನಗೆ ಅವಕಾಶ ನೀಡಿದರೆ ಇವರೆಲ್ಲರನ್ನು ಕರೆತರುತ್ತೇನೆ ಎಂದರು.

ಬಿಜೆಪಿ 150ಕ್ಕೂ ಹೆಚ್ಚು ಅಧಿಕ ಸ್ಥಾನಗಳಲ್ಲಿ ಗೆಲುವು ಪಡೆದೇ ತೀರುತ್ತದೆಂಬ ವಿಶ್ವಾಸ ಹೊಂದಿದ್ದರು. ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರಕ್ಕೆ ಬಾರದೇ ಹೋಗಿದ್ದರೆ ಬಿಜೆಪಿ ಕನಿಷ್ಠ 70 ಸ್ಥಾನಗಳಲ್ಲೂ ಗೆಲುವು ಸಾಧಿಸುತ್ತಿರಲಿಲ್ಲ. 104 ಸ್ಥಾನದಲ್ಲಿ ಗೆಲುವು ಪಡೆದಿರುವುದು ಮೋದಿ ಪ್ರಚಾರದಿಂದಲೇ ಹೊರತು, ಪರಿವರ್ತನೆ ಯಾತ್ರೆಯಿಂದಲ್ಲ ಎಂದರು.

ಹರಕೆ ಫಲಿಸಿದೆ:

ನನಗೆ ಮೋಸ, ವಂಚನೆ ಮಾಡಿದ ಬಿಜೆಪಿ ರಾಜ್ಯ ನಾಯಕ ಬಿ.ಎಸ್‌.ಯಡಿಯೂರಪ್ಪರಿಗೆ ಅಧಿಕಾರ ಸಿಗಬಾರದು ಎಂಬ ನನ್ನ ಹರಕೆ ಈಡೇರಿದೆ. ತಮಗೆ ಮೋಸ ಮಾಡಿದವರಿಗೆ ಸ್ಥಾನಮಾನ ಸಿಗಬಾರದು ಎಂದು ನನ್ನ ಮನೆದೇವರಾದ ಹುಚ್ಚರಾಯಸ್ವಾಮಿಗೆ ಹರಕೆ ಹೊತ್ತಿದ್ದೆ. ಅದು ಈಡೇರಿದೆ ಎಂದರು.

ವಿಧಾನಸಭಾ ಚುನಾವಣೆ ಸಂದರ್ಭ ಯಡಿಯೂರಪ್ಪರನ್ನೇ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಯಡಿಯೂರಪ್ಪ ಕೂಡ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದರು. 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದಾಗಿ ಹೇಳಿಕೆ ನೀಡುತ್ತಾ ಬಂದಿದ್ದರು. ಆದರೆ ಇದೀಗ ಯಡಿಯೂರಪ್ಪ ಮಕಾಡೆ ಮಲಗಿದ್ದಾರೆ. ಅವರ ಶಕ್ತಿ ಕುಂದಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌-ಜೆಡಿಎಸ್‌ ಅಪವಿತ್ರ ಮೈತ್ರಿ ಮಾಡಿಕೊಂಡಿವೆ ಎಂದು ಈಗ ಯಡಿಯೂರಪ್ಪ ಹೇಳುತ್ತಿದ್ದಾರೆ. ಹಿಂದೆ ಬಿಜೆಪಿ 79 ಸ್ಥಾನ ಪಡೆದಿದ್ದಾಗ ಜೆಡಿಎಸ್‌ಗೆ ಶರಣಾಗಿ ಸಮ್ಮಿಶ್ರ ಸರಕಾರ ರಚನೆ ಮಾಡಿದ್ದು ಮರೆತ್ತಿದ್ದಾರೆ. ಕಾಂಗ್ರೆಸ್‌ ಸೋಲಿಗೆ ಯಡಿಯೂರಪ್ಪರ ಭ್ರಷ್ಟಾಚಾರದ ಹಣ ಕಾರಣ ಎಂದರು.

ಕಳೆದ ಚುನಾವಣೆ ಸಂದರ್ಭ ಸೀಟು ಹಂಚಿಕೆಯಲ್ಲಿ ಸಾಕಷ್ಟು ಹಣ ಮಾಡಿಕೊಂಡಿದ್ದಾರೆ. ಅದರಲ್ಲಿ ಅರ್ಧದಷ್ಟು ಹಣವನ್ನು ಸಾಗರ, ಶಿಕಾರಿಪುರ ಕ್ಷೇತ್ರದಲ್ಲಿ ಚೆಲ್ಲಿದ್ದಾರೆ. ಎ,ಬಿ,ಸಿ ಎಂದು ವರ್ಗ ಮಾಡಿಕೊಂಡು ಕೋಟ್ಯಂತರ ರೂ. ಹಣವನ್ನು ಚುನಾವಣೆಯಲ್ಲಿ ಖರ್ಚು ಮಾಡಿದ್ದಾರೆ. ಜತೆಗೆ ಸಿಗಂದೂರು ದೇವಿಯ ಭಾವಚಿತ್ರ ತೋರಿಸಿ ಆಣೆ ಪ್ರಮಾಣ ಮಾಡಿಸಿಕೊಂಡು ಮತ ಪಡೆದಿದ್ದಾರೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ಸಾಗರ ಕ್ಷೇತ್ರದಲ್ಲಿ ಸೋಲು ಕಂಡಿದ್ದು ತಮಗೆ ಬಹಳ ನೋವುಂಟು ಮಾಡಿದೆ. ಕಾಗೋಡು ತಿಮ್ಮಪ್ಪ ತಮ್ಮ ಹೋರಾಟ ಹಾಗೂ ಭೂಮಿ ವಿಚಾರದಲ್ಲಿ ಪ್ರಚಾರ ನಡೆಸಿದರು. ಆದರೆ, ಅದು ಅವರಿಗೆ ಗೆಲುವನ್ನು ತಂದುಕೊಡಲಿಲ್ಲ. ಭ್ರಷ್ಟಾಚಾರ, ಅನ್ಯಾಯ, ಅಕ್ರಮ ನಡೆಸಿದವರಿಗೆ ಕಾಲ ಎಂಬಂತಾಗಿದೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರ 5 ವರ್ಷ ಅವಧಿ ಪೂರ್ಣಗೊಳಿಸಲಿದೆ. ಯಾರೂ ಚುನಾವಣೆಗೆ ಹೋಗುವುದಿಲ್ಲ. ಇದರಲ್ಲಿ ಯಾವುದೇ ಅನುಮಾನ ಬೇಡ. ಅಧಿಕಾರದಿಂದ ವಂಚಿತರಾಗಿದ್ದಕ್ಕೆ ಯಡಿಯೂರಪ್ಪಗೆ ತಲೆ ಕೆಟ್ಟಿರಬೇಕು. ಹೀಗಾಗಿ, ಸರಕಾರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪ ನರಿಯಂತೆ ಕಾದು ನಿಂತಿದ್ದಾರೆ. ಆದರೆ, ಅವರಿಗೆ ಸಿಗುವುದು ಹುಳಿ ದ್ರಾಕ್ಷಿ ಎಂದು ವ್ಯಂಗ್ಯವಾಡಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ತೀ.ನಾ.ಶ್ರೀನಿವಾಸ್‌,ವಿಶ್ವನಾಥ್‌ ಕಾಶಿ ಮತ್ತಿತರರು ಹಾಜರಿದ್ದರು.


ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಮನೆ ಮೇಲೆ ದಾಳಿ ನಡೆಸಲಾಗುತ್ತಿದೆ. ಇದನ್ನು ಬಿಟ್ಟು ಶೋಭಾ ಕರಂದ್ಲಾಜೆ ಮನೆ ಮೇಲೆ ಐಟಿ ದಾಳಿ ಮಾಡಿದರೆ ಯಡಿಯೂರಪ್ಪ ಅವರ ಭ್ರಷ್ಟಾಚಾರದ ಹಣ ಹಾಗೂ ಶೋಭಾ ಕರಂದ್ಲಾಜೆ ಅವರ ಅಕ್ರಮ ಸಂಪಾದನೆ ಎಲ್ಲವೂ ಬಹಿರಂಗವಾಗುತ್ತದೆ.

-ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ