ಆ್ಯಪ್ನಗರ

ಮಿತ ಬಳಕೆ ಪ್ರಜ್ಞೆ ಹೆಚ್ಚಲಿ

ಪ್ರಕೃತಿ ನೀಡಿದ ಸಂಗತಿಗಳನ್ನು ಬಳಸುವಾಗ ಯಾವುದೇ ಮುನ್ನೆಚ್ಚರಿಕೆ ಇಲ್ಲದಿರುವುದು ವಿಷಾದದ ಸಂಗತಿ ಎಂದು ಪರಿಸರ ಬರಹಗಾರ ಅಖಿಲೇಶ ಚಿಪ್ಪಳಿ ಹೇಳಿದರು.

Vijaya Karnataka 7 Jul 2019, 5:00 am
ಸಾಗರ: ಪ್ರಕೃತಿ ನೀಡಿದ ಸಂಗತಿಗಳನ್ನು ಬಳಸುವಾಗ ಯಾವುದೇ ಮುನ್ನೆಚ್ಚರಿಕೆ ಇಲ್ಲದಿರುವುದು ವಿಷಾದದ ಸಂಗತಿ ಎಂದು ಪರಿಸರ ಬರಹಗಾರ ಅಖಿಲೇಶ ಚಿಪ್ಪಳಿ ಹೇಳಿದರು.
Vijaya Karnataka Web increase moderate consumption consciousness
ಮಿತ ಬಳಕೆ ಪ್ರಜ್ಞೆ ಹೆಚ್ಚಲಿ


ಇಲ್ಲಿನ ಬಿಎಚ್‌ರಸ್ತೆಯ ಆಭರಣ ಜ್ಯುವೆಲರ್ಸ್‌ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹಸಿರು ಹೆಚ್ಚಿಸೋಣ ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪರಿಸರದಲ್ಲಿ ವ್ಯರ್ಥ ಎನ್ನುವ ಮಾಪನವೇ ಇಲ್ಲ. ಆದರೆ ಮಾನವ ನಿರ್ಮಿತ ಜೀವನ ಶೈಲಿಯಲ್ಲಿ ಪೋಲು ಅತಿಯಾಗಿದೆ. ನೀರು, ವಿದ್ಯುತ್‌ ಮುಂತಾದವುಗಳ ಮಿತ ಬಳಕೆಯ ಪ್ರಜ್ಞೆ ವ್ಯಾಪಕವಾಗಬೇಕೆಂದರು.

ಜಲ ಮೂಲಗಳ ನಾಶ ನಮ್ಮ ಬದುಕಿಗೆ ದೊಡ್ಡ ಗಂಡಾಂತರ ತರಲಿದೆ. ಬೆಂಗಳೂರಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಮಲೆನಾಡಿನ ಸೂಕ್ಷ ್ಮ ಪರಿಸರವನ್ನು ಸರ್ವನಾಶ ಮಾಡಲು ಹೊರಟ ನಮ್ಮ ಆಳುವ ಸರಕಾರದ ಯೋಜನೆಗಳನ್ನು ಒಟ್ಟಾಗಿ ವಿರೋಧಿಸಬೇಕೆಂದರು.

ಸಂಸ್ಥೆಯ ರವಿಚಂದ್ರ ನಾಯಕ್‌ ಮಾತನಾಡಿ, ಆಭರಣ ಸಂಸ್ಥೆ ಸಿಬ್ಬಂದಿಗಳ ಜನುಮದಿನದಂದು ಗಿಡನೆಡುವ ಕಾರ‍್ಯ ಮಾಡಲಾಗುತ್ತಿದೆ. ಭೂಮಿಯ ಹಸಿರು ಹೆಚ್ಚಿಸುವ ಕಾರ‍್ಯವನ್ನು ಪ್ರತಿಯೊಬ್ಬರೂ ಪ್ರಜ್ಞಾಪೂರ್ವಕವಾಗಿ ಮಾಡುವ ಸ್ಥಿತಿ ಬಂದಿದೆ ಎಂದರು. ಸಂಸ್ಥೆಯ ಪ್ರದೀಪ ಪ್ರಭು, ಯೋಗೀಶ, ವಿನಾಯಕ, ಪ್ರಶಾಂತ, ಜಯ ಕಾಮತ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ