ಆ್ಯಪ್ನಗರ

ರಕ್ತದಾನದಿಂದ ಜ್ಞಾಪಕ ಶಕ್ತಿ ಹೆಚ್ಚಳ

ರಕ್ತದಾನ ಮಾಡುವುದರಿಂದ ರಕ್ತದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಿ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು 107 ಬಾರಿ ರಕ್ತದಾನ ಮಾಡಿದ ಯಜ್ಞ ನಾರಾಯಣ ತಿಳಿಸಿದರು.

Vijaya Karnataka 5 Oct 2019, 5:00 am
ಶಿವಮೊಗ್ಗ: ರಕ್ತದಾನ ಮಾಡುವುದರಿಂದ ರಕ್ತದಲ್ಲಿನ ಕೊಬ್ಬಿನ ಅಂಶ ಕಡಿಮೆಯಾಗಿ, ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಎಂದು 107 ಬಾರಿ ರಕ್ತದಾನ ಮಾಡಿದ ಯಜ್ಞ ನಾರಾಯಣ ತಿಳಿಸಿದರು.
Vijaya Karnataka Web increase of mnemonic energy from blood donation
ರಕ್ತದಾನದಿಂದ ಜ್ಞಾಪಕ ಶಕ್ತಿ ಹೆಚ್ಚಳ

ಬಾಪೂಜಿ ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜು ಯುವರೆಡ್‌ ಕ್ರಾಸ್‌ ಘಟಕ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಮೆಗ್ಗಾನ್‌ ಆಸ್ಪತ್ರೆ ರಕ್ತನಿಧಿ ವಿಭಾಗ ಸಹಯೋಗದಲ್ಲಿಮಂಗಳವಾರ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಬೃಹತ್‌ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಧನಂಜಯ ಅವರು ಮಾತನಾಡಿ, ಆರೋಗ್ಯವಂತ ಮನುಷ್ಯ ವರ್ಷದಲ್ಲಿಎರಡು ಬಾರಿ ರಕ್ತದಾನ ಮಾಡಬಹುದು.ರಕ್ತದಾನದಿಂದ ದೇಹದಲ್ಲಿರುವ ಕೊಬ್ಬು ಕರಗಿ ಆರೋಗ್ಯವಂತನಾಗುವ ಜತೆಗೆ ಸೌಂದರ್ಯವೂ ವೃದ್ಧಿಯಾಗುತ್ತದೆ ಎಂದರು. ಯುವರೆಡ್‌ ಕ್ರಾಸ್‌ ಘಟಕದ ಕಾರ‍್ಯಕ್ರಮಾಧಿಕಾರಿಗಳಾದ ಆರ್‌.ರವಿ, ರೇಷ್ಮಾ, ರಾಷ್ಟ್ರೀಯ ಸೇವಾಯೋಜನಾಧಿಕಾರಿಗಳಾದ ಡಾ. ಸೀಮಾ, ಡಾ. ನಾಗರಾಜನಾಯ್ಕ, ಪ್ರೊ. ಪೂರ್ಣಿಮ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ