ಆ್ಯಪ್ನಗರ

ಕನಿಷ್ಠ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ

ಬ್ಯಾಂಕ್‌ ಮಿತ್ರರಿಗೆ ಸಮಾನ ಹಾಗೂ ಕನಿಷ್ಠ ವೇತನ ನೀಡಿ ಸೇವೆ ಕಾಯಂಗೊಳಿಸುವಂತೆ ಅಗ್ರಹಿಸಿ ಡಿ.19ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಶಿವಮೊಗ್ಗ ಶಾಖೆ ಕರ್ನಾಟಕ ಬ್ಯಾಂಕ್‌ ಮಿತ್ರಾಸ್‌ ಸಂಘದ ಪ್ರಮುಖ ಲೋಹಿತ್‌ ಹೇಳಿದರು.

Vijaya Karnataka 18 Dec 2018, 5:00 am
ಶಿವಮೊಗ್ಗ : ಬ್ಯಾಂಕ್‌ ಮಿತ್ರರಿಗೆ ಸಮಾನ ಹಾಗೂ ಕನಿಷ್ಠ ವೇತನ ನೀಡಿ ಸೇವೆ ಕಾಯಂಗೊಳಿಸುವಂತೆ ಅಗ್ರಹಿಸಿ ಡಿ.19ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಶಿವಮೊಗ್ಗ ಶಾಖೆ ಕರ್ನಾಟಕ ಬ್ಯಾಂಕ್‌ ಮಿತ್ರಾಸ್‌ ಸಂಘದ ಪ್ರಮುಖ ಲೋಹಿತ್‌ ಹೇಳಿದರು.
Vijaya Karnataka Web indefinite strike
ಕನಿಷ್ಠ ವೇತನಕ್ಕೆ ಆಗ್ರಹಿಸಿ ಅನಿರ್ದಿಷ್ಟಾವಧಿ ಮುಷ್ಕರ


ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿ, 10 ವರ್ಷಗಳಿಂದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ತೊಡಗಿರುವ ಸುಮಾರು ಬ್ಯಾಂಕ್‌ ಮಿತ್ರರು ಗ್ರಾಮೀಣ ಪ್ರದೇಶದ ಜನರಿಗೆ ಅವರ ಮನೆಯ ಬಾಗಿಲಿಗೆ ಬ್ಯಾಂಕಿಂಗ್‌ ಸೌಲಭ್ಯ ಒದಗಿಸುತ್ತಿದ್ದಾರೆ. ಆರಂಭದಲ್ಲಿ ಇವರಿಗೆ 500 ರೂ. ವೇತನ ನೀಡಲಾಗುತ್ತಿತ್ತು. ನಂತರ ಪ್ರಧಾನಮಂತ್ರಿ ಹೊಸ ಆರ್ಥಿಕ ಸೇರ್ಪಡೆ ಯೋಜನೆಯಡಿ 2014ರಿಂದ ಕನಿಷ್ಠ 5ಸಾವಿರ ವೇತನ ನಿಗದಿಪಡಿಸಿ ಆದೇಶಿಸಿದ್ದರು. ಆದರೆ, ಬ್ಯಾಂಕ್‌ ನೌಕರರು ಇಬ್ಬಗೆ ನೀತಿ ಮಾಡುತ್ತ ಹಗಲು ದರೋಡೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಬ್ಯಾಂಕ್‌ನಿಂದ ನೇಮಕಗೊಂಡಿರುವ ಕಂಪನಿಯವರು ಬ್ಯಾಂಕ್‌ ಮಿತ್ರರನ್ನು ಜೀತದಾಳುಗಳಂತೆ ದುಡಿಸಿಕೊಂಡು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಈಗಲೂ ದಿನದಿಂದ ದಿನಕ್ಕೆ ವೇತನ ಕಡಿಮೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಎಸ್‌ಬಿಐ ಬ್ಯಾಂಕ್‌ ಮಿತ್ರರೂ ಈಗಲೂ ವೇತನವಿಲ್ಲದೇ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಂಘದ ನಿರ್ಮಲಾ ಮಾತನಾಡಿ, ಕೆನರಾ ಬ್ಯಾಂಕ್‌ ಇಷ್ಟು ವರ್ಷ ಐದು ಸಾವಿರ ಕೊಡುತ್ತಿದ್ದು, ಏಕಾಏಕಿ ಎರಡುಸಾವಿರಕ್ಕೆ ಇಳಿಸಿದ್ದಾರೆ. ಪ್ರತಿ ಬ್ಯಾಂಕ್‌ ಮಿತ್ರರಿಂದ 50ಸಾವಿರ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಗುತ್ತಿಗೆದಾರರನ್ನು ಕೈಬಿಡಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿ ಮಾಡಬೇಕು. ಬ್ಯಾಂಕ್‌ ಮಿತ್ರರನ್ನು ಕಾಯಂಗೊಳಿಸಬೇಕು. ಕೆನರಾಬ್ಯಾಂಕ್‌ನ ಮಿಷನ್‌ ಇಂಡಿಯಾ ಕಂಪನಿಯ ಹಗಲು ದರೋಡೆ ನಿಲ್ಲಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ.19ರಿಂದ ಬೆಂಗಳೂರಿನ ಟೌನ್‌ ಹಾಲ್‌ ಆವರಣದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದರು. ಗೋಷ್ಠಿಯಲ್ಲಿ ಕೆ.ಎನ್‌.ಸಂಪತ್‌ ಕುಮಾರ್‌, ದೇವಪ್ಪ ಗೌಡ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ