ಆ್ಯಪ್ನಗರ

ಐಟಿಐ ಕಾಲೇಜು ಕಟ್ಟಡಕ್ಕೆ ಶಾಸಕರಿಂದ ಜಾಗ ಪರಿಶೀಲನೆ

ಕೆದಲುಗುಡ್ಡೆ ಗ್ರಾಮದಲ್ಲಿ ಸರಕಾರಿ ಐಟಿಐ ಕಾಲೇಜ್‌ ಕಟ್ಟಡಕ್ಕೆ ಮಂಜೂರು ಆಗಿರುವ ಜಾಗವನ್ನು ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ಪರಿಶೀಲಿಸಿದರು.

Vijaya Karnataka 21 Jun 2019, 5:00 am
ರಿಪ್ಪನ್‌ಪೇಟೆ: ಕೆದಲುಗುಡ್ಡೆ ಗ್ರಾಮದಲ್ಲಿ ಸರಕಾರಿ ಐಟಿಐ ಕಾಲೇಜ್‌ ಕಟ್ಟಡಕ್ಕೆ ಮಂಜೂರು ಆಗಿರುವ ಜಾಗವನ್ನು ಶಾಸಕ ಹರತಾಳು ಹಾಲಪ್ಪ ಭೇಟಿ ನೀಡಿ ಪರಿಶೀಲಿಸಿದರು.
Vijaya Karnataka Web inspection of fields for iti college building by mla
ಐಟಿಐ ಕಾಲೇಜು ಕಟ್ಟಡಕ್ಕೆ ಶಾಸಕರಿಂದ ಜಾಗ ಪರಿಶೀಲನೆ


ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮೂರು ಎಕರೆ ಜಾಗ ಮಂಜೂರಾಗಿದ್ದು, ಸರಕಾರದಿಂದ ಅನುದಾನ ಸಹ ಬಿಡುಗಡೆಯಾಗಿದೆ. ವಿದ್ಯಾರ್ಥಿಗಳಿಗೆ ಸೂಕ್ತ ಸ್ಥಳವಾಗಿದ್ದು, ಐಟಿಐ ಕಾಲೇಜ್‌ಗೆ ಒಳ್ಳೆಯ ಪರಿಸರ ಮತ್ತು ಅಕ್ಕ-ಪಕ್ಕದಲ್ಲಿ ವಿದ್ಯುತ್‌ ಪರಿವರ್ತಕದ ಕಚೇರಿ ಸಹ ಇದೆ ಎಂದರು.

ಕೆಲವು ವೇಳೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ತರಬೇತಿಗೆ ಸಹಕಾರಿಯಾಗುವುದು. ಈ ಜಾಗ ಸೂಕ್ತ ಮತ್ತು ಸಮರ್ಪಕವಾಗಿದೆ. ಇದು ಊರಿನ ಹೊರಭಾಗದಲ್ಲಿರುವುದರಿಂದ ದೂರದ ವಿದ್ಯಾರ್ಥಿಗಳು, ಪ್ರಾಚಾರ್ಯರು, ಉಪನ್ಯಾಸಕರಿಗೆ ಈಗ ದೂರವೆನ್ನಿಸಬಹುದು. ಆದರೆ ಮುಂದಿನ ದಿನಗಳಲ್ಲಿ ಇಂತಹ ಸುಸಜ್ಜಿತ ಜಾಗ ಸಿಗುವುದು ಕಷ್ಟವಾಗಿದೆ. ಆದ್ದರಿಂದ ಇದೇ ಜಾಗದಲ್ಲಿ ಐಟಿಐ ಕಾಲೇಜ್‌ ಕಟ್ಟಡ ನಿರ್ಮಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಪಂಚಾಯಿತಿ ಸದಸ್ಯ ಅಲುವಳ್ಳಿ ವೀರೇಶ್‌,

ಬಿಜೆಪಿ ಮುಖಂಡರಾದ ಆರ್‌.ಟಿ.ಗೋಪಾಲ್‌, ಕೆ.ಬಿ.ಹೂವಪ್ಪ, ಎಂ.ಬಿ.ಮಂಜುನಾಥ್‌, ಮೆಣಸೆ ಆನಂದ, ರಾಜಶೇಖರ್‌ ಕಮದೂರು, ರಾಜೇಶ್‌ಜೈನ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ