ಆ್ಯಪ್ನಗರ

ಪುಸ್ತಕ ಓದಲು ಪ್ರೇರೇಪಿಸಿ

ಕೈಯಲ್ಲಿಪುಸ್ತಕ ಹಿಡಿದು ಓದಬೇಕಾದ ಮಕ್ಕಳು ಇಂದು ಮೊಬೈಲ್‌ನಲ್ಲಿವಾಟ್ಸಾಪ್‌, ಪೇಸ್‌ ಬುಕ್‌ ಅಂತ ಕಾಲ ಕಳೆಯುತ್ತಿದ್ದಾರೆ. ಪರಿಣಾಮ ಓದು ಯುವ ಜನತೆಯಿಂದ ದೂರ ಸರಿಯುತ್ತಿದೆ. ಇದು ಹೀಗೆ ಮುಂದುವರಿದರೆ ಸಮಾಜ ಪತನದತ್ತ ಸಾಗುತ್ತದೆ ಎಂದು ವಿದ್ವಾನ್‌ ಜಿ.ಎಸ್‌.ನಟೇಶ್‌ ಹೇಳಿದರು.

Vijaya Karnataka 23 Sep 2019, 5:00 am
ಶಿವಮೊಗ್ಗ: ಕೈಯಲ್ಲಿಪುಸ್ತಕ ಹಿಡಿದು ಓದಬೇಕಾದ ಮಕ್ಕಳು ಇಂದು ಮೊಬೈಲ್‌ನಲ್ಲಿವಾಟ್ಸಾಪ್‌, ಪೇಸ್‌ ಬುಕ್‌ ಅಂತ ಕಾಲ ಕಳೆಯುತ್ತಿದ್ದಾರೆ. ಪರಿಣಾಮ ಓದು ಯುವ ಜನತೆಯಿಂದ ದೂರ ಸರಿಯುತ್ತಿದೆ. ಇದು ಹೀಗೆ ಮುಂದುವರಿದರೆ ಸಮಾಜ ಪತನದತ್ತ ಸಾಗುತ್ತದೆ ಎಂದು ವಿದ್ವಾನ್‌ ಜಿ.ಎಸ್‌.ನಟೇಶ್‌ ಹೇಳಿದರು.
Vijaya Karnataka Web inspire to read book
ಪುಸ್ತಕ ಓದಲು ಪ್ರೇರೇಪಿಸಿ


ರವೀಂದ್ರ ನಗರದ ಬಲಮುರಿ ಗಣಪತಿ ದೇವಸ್ಥಾನದಲ್ಲಿಭಾನುವಾರ ಏರ್ಪಡಿಸಿದ್ದ ಕವಯಿತ್ರಿ ಲಾವಣ್ಯ ಶ್ರೀಕಾಂತ್‌ ಅವರ ಶರಣಾಗತಿ ಪುಸ್ತಕ ಬಿಡುಗಡೆ ಹಾಗೂ ಧ್ವನಿಸುರಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಮೊಬೈಲ್‌ ಬಂದ ಮೇಲೆ ಯುವ ಜನತೆ ಪುಸ್ತಕ ಓದುವ ಹವ್ಯಾಸವನ್ನೇ ಕೈ ಬಿಟ್ಟು ಸದಾ ಮೊಬೈಲ್‌ ಕೈಯಲ್ಲಿಇಟ್ಟುಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಪುಸ್ತಕ ಓದು ಹವ್ಯಾಸ ಹಿರಿಯರಿಗೆ ಮಾತ್ರ ಸೀಮಿತವಾಗಿದೆ. ಪುಸ್ತಕ ಓದಿನಿಂದ ನಮಗೆ ಬಹಳಷ್ಟು ವಿಚಾರ ಗಮನಕ್ಕೆ ಬರುತ್ತದೆ. ಇದರಿಂದ ಅಲೋಚನೆ ಶಕ್ತಿ ವೃದ್ಧಿ ಜತೆಗೆ ಜ್ಞಾನವೂ ವಿಸ್ತಾರಗೊಳ್ಳುತ್ತದೆ. ಆದರೆ ಯುವ ಜನತೆ ಪುಸ್ತಕ ಓದುವುದನ್ನು ಬಿಟ್ಟಿರುವುದರಿಂದ ಎಷ್ಟೋ ವಿಷಯಗಳು ಅವರಿಗೆ ತಲುಪುತ್ತಿಲ್ಲ. ಈ ಎಲ್ಲವಿಷಯಗಳು ಯುವ ಪೀಳಿಗೆಗೂ ಸಹ ತಲುಪಬೇಕು. ಈ ನಿಟ್ಟಿನಲ್ಲಿಹಿರಿಯರು ಮಕ್ಕಳಿಗೆ ಪುಸ್ತಕ ಓದುವಂತೆ ಪ್ರೇರೇಪಿಸಬೇಕೆಂದರು.

ಲಾವಣ್ಯ ಶ್ರೀಕಾಂತ್‌ ಅವರು ರಚಿಸಿರುವ 'ಶರಣಾಗತಿ' ಕವಿತೆಯಲ್ಲಿಪದ್ಯಗಳ ಸರಮಾಲೆಯಿದೆ. ಒಂದೊಂದು ಪದ್ಯದಲ್ಲೂಭಾವಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.

ಅಧ್ಯಾತ್ಮ ಚಿಂತಕಿ ಡಾ. ವೀಣಾ ಬನ್ನಂಜೆ ಅವರು ಮಾತನಾಡಿ, ಪ್ರೀತಿಯ ಅಲೆ ಹೆಚ್ಚಾದಾಗ ಭಕ್ತಿಯಾಗುತ್ತದೆ, ಅದರಂತೆ ಎಲ್ಲಭಾವಗಳನ್ನು ಒಳಗೊಂಡಂತೆ ಲಾವಣ್ಯ ಶ್ರೀಕಾಂತ್‌ ಅವರು ಶರಣಾಗತಿಯನ್ನು ರಚಿಸಿದ್ದಾರೆ. ಭಾವಕ್ಕೆ ಕವಿತೆಯನ್ನು ಸಮರ್ಪಿಸಿದ್ದಾರೆ. ವಿವಿಧ ಭಾವಗಳನ್ನು ಅನಾವರಣ ಮಾಡಿದ್ದು, ಭಕ್ತಿಯ ಬೇರೆ ಬೇರೆ ಸಾಧ್ಯತೆಗಳನ್ನು ಇಲ್ಲಿಕಾಣಬಹುದಾಗಿದೆ ಎಂದರು.


ಎಲ್ಲವೂ ಇದ್ದು ಬೇಡ ಎಂದು ತ್ಯಜಿಸಿ ಬರುವುದೇ ಶರಣಾಗತಿ. ಈ ರೀತಿಯ ಸಮರ್ಪಣಾ ಭಾವ ಕೆಲವರಲ್ಲಿಮಾತ್ರ ಹುಟ್ಟುತ್ತದೆ. ಅ ರೀತಿಯ ಸಮರ್ಪಣಾ ಭಾವ ನಮ್ಮೊಳಗಿನ ಭಾವದಿಂದ ಸಾಧ್ಯ. ಕವಿತೆಯಲ್ಲಿಕೇವಲ ಪ್ರಾಸ, ಸಾಹಿತ್ಯ ಮಾತ್ರ ಮುಖ್ಯವಲ್ಲ. ಕವಿತೆಗಳಲ್ಲಿಕಾವ್ಯದ ಗುಣ ಹಾಗೂ ಆತ್ಮಕೆ ಆನಂದವಾಗುವ ಗುಣ ಇರಬೇಕು. ಭಾವವೂ ಮುಖ್ಯ.

*ಡಾ. ವೀಣಾ ಬನ್ನಂಜೆ, ಅಧ್ಯಾತ್ಮ ಚಿಂತಕಿ.

-----------------

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ