ಆ್ಯಪ್ನಗರ

ಇಂದಿನಿಂದ ಅಂತರ ಕಾಲೇಜು ಅಥ್ಲೇಟಿಕ್‌ ಕ್ರೀಡಾಕೂಟ

ನಗರದ ನೆಹರು ಕ್ರೀಡಾಂಗಣದಲ್ಲಿ ಸೆ.26ರಿಂದ 28ರವರೆಗೆ ಕುವೆಂಪು ವಿವಿಯ 33ನೇ ವಾರ್ಷಿಕ ಅಂತರ ಕಾಲೇಜು ಅಥ್ಲೆಟಿಕ್ಸ್‌ ಕ್ರೀಡಾಕೂಟ ಆಯೋಜಿಸಲಾಗಿದೆ.

Vijaya Karnataka 26 Sep 2019, 5:00 am
ಶಿವಮೊಗ್: ನಗರದ ನೆಹರು ಕ್ರೀಡಾಂಗಣದಲ್ಲಿ ಸೆ.26ರಿಂದ 28ರವರೆಗೆ ಕುವೆಂಪು ವಿವಿಯ 33ನೇ ವಾರ್ಷಿಕ ಅಂತರ ಕಾಲೇಜು ಅಥ್ಲೆಟಿಕ್ಸ್‌ ಕ್ರೀಡಾಕೂಟ ಆಯೋಜಿಸಲಾಗಿದೆ.
Vijaya Karnataka Web inter college athletic games from today
ಇಂದಿನಿಂದ ಅಂತರ ಕಾಲೇಜು ಅಥ್ಲೇಟಿಕ್‌ ಕ್ರೀಡಾಕೂಟ


ಡಿವಿಎಸ್‌ ಕಲಾ ಮತ್ತು ವಿಜ್ಞಾನ ಕಾಲೇಜು ಹಾಗೂ ಕುವೆಂಪು ವಿವಿ ಸಹಯೋಗದಲ್ಲಿಈ ಕ್ರೀಡಾಕೂಟ ನಡೆಯಲಿದ್ದು, ಸೆ.26ರಂದು ಬೆಳಗ್ಗೆ 9ಕ್ಕೆ ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಕ್ರೀಡಾಕೂಟ ಉದ್ಘಾಟಿಸಲಿದ್ದಾರೆ. ಎಸ್‌ಪಿ ಕೆ.ಎಂ.ಶಾಂತರಾಜ್‌, ಡಿವಿಎಸ್‌ ಕಾರ್ಯದರ್ಶಿ ಎಸ್‌.ಜೆ.ರಾಜಶೇಖರ್‌, ಕುವೆಂಪು ವಿವಿ ಸ್ನಾತಕೋತ್ತರ ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಸಂಯೋಜನಾಧಿಕಾರಿ ಡಾ.ಎನ್‌.ಡಿ.ವಿರುಪಾಕ್ಷ, ಅಂತಾರಾಷ್ಟ್ರೀಯ ಕ್ರೀಡಾಪಟು ಸತ್ಯನಾರಾಯಣ ಭಾಗವಹಿಸಲಿದ್ದಾರೆ ಎಂದು ಡಿವಿಎಸ್‌ ಅಧ್ಯಕ್ಷ ಕೆ.ಬಸಪ್ಪಗೌಡ ಬುಧವಾರ ಸುದ್ದಿಗೋಷ್ಠಿಯಲ್ಲಿತಿಳಿಸಿದರು.

ಸೆ.28ರಂದು ಮಧ್ಯಾಹ್ನ 3.30ಕ್ಕೆ ನಡೆಯುವ ಸಮಾರೋಪದಲ್ಲಿವಿವಿ ಕುಲಸಚಿವ ಡಾ.ಎಸ್‌.ಎಸ್‌.ಪಾಟೀಲ್‌ ಸಮಾರೋಪ ನುಡಿಗಳನ್ನಾಡುವರು. ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಕೆ.ಪ್ರಸಾದ್‌ ಮತ್ತಿತರರು ಪಾಲ್ಗೊಳ್ಳಲಿದ್ದು, ಡಿವಿಎಸ್‌ ಉಪಾಧ್ಯಕ್ಷ ಕೆ.ಎಸ್‌.ರುದ್ರಪ್ಪ ಗೌಡ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕ್ರೀಡಾಕೂಟದಲ್ಲಿಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಒಟ್ಟು 48 ಕಾಲೇಜುಗಳ ಸುಮಾರು 750 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಇವರಲ್ಲಿ430 ವಿದ್ಯಾರ್ಥಿಗಳು 320 ವಿದ್ಯಾರ್ಥಿನಿಯರು ಇದ್ದಾರೆ. 150 ಅಧಿಕಾರಿ ವರ್ಗ ಹಾಗೂ ತಾಂತ್ರಿಕ ವರ್ಗ, 70 ಸ್ವಯಂ ಸೇವಕರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಗೋಷ್ಠಿಯಲ್ಲಿಡಿವಿಎಸ್‌ ಖಜಾಂಚಿ ಬಿ.ಗೋಪಿನಾಥ್‌, ಪ್ರಾಂಶುಪಾಲ ಡಾ.ಎಚ್‌.ಟಿ.ಕೃಷ್ಣಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಸಚಿನ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ