ಆ್ಯಪ್ನಗರ

ನಾಳೆಯಿಂದ ಅಂತರ ವಿವಿ ಸೆಪೆಕ್‌ ಟಕ್ರಾ ಪಂದ್ಯಾವಳಿ

ಕುವೆಂಪು ವಿವಿ ವತಿಯಿಂದ ಫೆ.17ರಿಂದ 19ರವರೆಗೆ ವಿವಿ ಆವರಣದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸೆಪೆಕ್‌ ಟಕ್ರಾ ಪುರುಷರ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಕುವೆಂಪು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಸ್‌.ಎಂ.ಪ್ರಕಾಶ್‌ ಹೇಳಿದರು.

Vijaya Karnataka 15 Feb 2019, 5:00 am
ಶಿವಮೊಗ್ಗ: ಕುವೆಂಪು ವಿವಿ ವತಿಯಿಂದ ಫೆ.17ರಿಂದ 19ರವರೆಗೆ ವಿವಿ ಆವರಣದಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಸೆಪೆಕ್‌ ಟಕ್ರಾ ಪುರುಷರ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಕುವೆಂಪು ವಿವಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಸ್‌.ಎಂ.ಪ್ರಕಾಶ್‌ ಹೇಳಿದರು.
Vijaya Karnataka Web inter university sepec tuckra tournment tomorrow onwards
ನಾಳೆಯಿಂದ ಅಂತರ ವಿವಿ ಸೆಪೆಕ್‌ ಟಕ್ರಾ ಪಂದ್ಯಾವಳಿ


ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿ, 28 ವಿಶ್ವ ವಿದ್ಯಾಲಯಗಳಿಂದ ಸುಮಾರು 600 ಕ್ರೀಡಾಪಟುಗಳು, 100 ಅಧಿಕಾರಿಗಳು, ಸ್ವಯಂ ಸೇವಕರು ಸೇರಿ 60 ವ್ಯವಸ್ಥಾಪಕರು, ತರಬೇತುದಾರರು ಭಾಗವಹಿಸುವ ನಿರೀಕ್ಷೆ ಇದೆ. ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲರಿಗೂ ವಿವಿ ಆವರಣದಲ್ಲಿ ವಸತಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.

ಈ ಪಂದ್ಯಾವಳಿಯು 2 ವಿಭಾಗದಲ್ಲಿ ನಡೆಯಲಿದ್ದು, ರೆಗು ಎಂಬ ಆಟವು 3ಕ್ರೀಡಾಪಟುಗಳಿಂದ ಹಾಗೂ ಡಬಲ್ಸ್‌ ಪಂದ್ಯವು ಇಬ್ಬರು ಕ್ರೀಡಾಪಟುಗಳಿಂದ ಆಡಿಸಲ್ಪಡುತ್ತದೆ. ಈ ಪಂದ್ಯಾವಳಿಯು ಎಐಯು ಮಾನದಂಡದ ಪ್ರಕಾರ ನಾಕೌಟ್‌ ಮತ್ತು ಲೀಗ್‌ ಮಾದರಿಯಲ್ಲಿ ನಡೆಯಲಿದೆ. 4 ಗುಂಪುಗಳ ವಿಜೇತ ತಂಡವು ಲೀಗ್‌ ಮಾದರಿ ಪಂದ್ಯಾವಳಿಗೆ ಅರ್ಹವಾಗುತ್ತದೆ ಎಂದರು.ಗೋಷ್ಠಿಯಲ್ಲಿ ಉಪನಿರ್ದೇಶಕ ಪೊ›.ಜಿ.ಎಸ್‌.ನಾಗರಾಜ್‌ ಇದ್ದರು.


ಫೆ.17ರಂದು ಬೆಳಗ್ಗೆ 10.30ಕ್ಕೆ ವಿವಿಯ ಕುಲಪತಿ ಪೊ›.ಜೋಗನ್‌ ಶಂಕರ್‌ ಪಂದ್ಯಾವಳಿ ಉದ್ಘಾಟಿಸಲಿದ್ದು, ಜಿಲ್ಲಾ ಪೊಲೀಸ್‌ ರಕ್ಷಣಾಧಿಕಾರಿ ಅಭಿನವ್‌ಖರೆ, ಎಐಯು ವೀಕ್ಷಕ ಪೊ›.ನಾಗೇಂದ್ರ ಪ್ರಸಾದ್‌ ಶರ್ಮಾ, ಜೂಡೊ ತರಬೇತುದಾರ ಕಾಂತರಾಜ್‌, ಎಸ್‌ಟಿಎಫ್‌ಐ ಕಾರ್ಯದರ್ಶಿ ಯೋಗಿಂದರ್‌ ಸಿಂಗ್‌ ಆಗಮಿಸಲಿದ್ದಾರೆ. ವಿವಿಯ ಕುಲಸಚಿವ ಪೊ›.ಎಚ್‌.ಎಸ್‌.ಭೋಜ್ಯಾನಾಯ್ಕ್‌ ಅಧ್ಯಕ್ಷತೆ ವಹಿಸುವರು. ಫೆ.19ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದ್ದು, ವಿವಿ ಕುಲಪತಿ ಪೊ›.ಜೋಗನ್‌ ಶಂಕರ್‌ ಅಧ್ಯಕ್ಷತೆ ವಹಿಸುವರು.

-ಡಾ.ಎಸ್‌.ಎಂ.ಪ್ರಕಾಶ್‌, ಕುವೆಂಪು ವಿವಿ ದೈಹಿಕ ಶಿಕ್ಷಣ ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ