ಆ್ಯಪ್ನಗರ

‘ಆಯುರ್ವೇದ ಔಷಧಕ್ಕೆ ಆಸಕ್ತಿ ವಹಿಸಿ’

ಪ್ರಾಚೀನ ಭಾರತದ ಆಯುರ್ವೇದ ಔಷಧಿ ಬಳಕೆ ಕುರಿತು ಜನತೆ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟಗೋಡು ಸುರೇಶ ಹೇಳಿದರು.

Vijaya Karnataka 21 Dec 2018, 5:00 am
ಹೊಸನಗರ: ಪ್ರಾಚೀನ ಭಾರತದ ಆಯುರ್ವೇದ ಔಷಧಿ ಬಳಕೆ ಕುರಿತು ಜನತೆ ಹೆಚ್ಚಿನ ಆಸಕ್ತಿ ವಹಿಸಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟಗೋಡು ಸುರೇಶ ಹೇಳಿದರು.
Vijaya Karnataka Web SMR-19HOSP4


ತಾಲೂಕಿನ ಹರಿದ್ರಾವತಿ ಗ್ರಾಪಂ ವ್ಯಾಪ್ತಿಯ ಬಾಣಿಗ ಗ್ರಾಮದಲ್ಲಿ ಬುಧವಾರ ಆಯುಷ್‌ ಇಲಾಖೆ ವತಿಯಿಂದ ನಡೆದ ಆಯುಷ್‌ ಮನೆಮದ್ದು ತರಬೇತಿ ಶಿಬಿರಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.

ಆಯುರ್ವೇದಿಕ್‌ ಔಷಧಿ ಕುರಿತು ಜನಸಾಮಾನ್ಯರಲ್ಲಿ ತಾತ್ಸಾರ ಮನೋಭಾವವಿದೆ. ಆದರೆ ಯಾವ ಅಡ್ಡ ಪರಿಣಾಮವಿಲ್ಲದೇ ಕಾಯಿಲೆ ಗುಣಪಡಿಸಬಲ್ಲ ಶಕ್ತಿ ಆಯುರ್ವೇದಕ್ಕಿದೆ. ಆಧುನಿಕ ಔಷಧೀಯ ಪದ್ಧತಿ ಹೆಚ್ಚು ಪ್ರಚಾರ ಪಡೆದುಕೊಂಡಿದ್ದು, ಹಳ್ಳಿಗಳಲ್ಲಿ ಸಿಗುವ ಬೇರು-ನಾರು ಕುರಿತು ಇಂದು ಸಾಕಷ್ಟು ಅರಿವು ಕಡಿಮೆಯಾಗುತ್ತಿರುವುದು ದುರದೃಷ್ಟಕರ ಎಂದರು.

ಪ್ರಾಸ್ತಾವಿಕ ಮಾತನಾಡಿದ ಡಾ.ಪತಂಜಲಿ, ಕಲುಷಿತ ಆಹಾರ ಸೇವನೆಯಿಂದ ಇಂದು ಆರೋಗ್ಯ ಏರುಪೇರಾಗುತ್ತಿದೆ. ನಮ್ಮ ಹಿಂದಿನ ಪೀಳಿಗೆಯ ಜನರು ಯಾವುದೇ ವಿಶೇಷ ಆಹಾರ ಸೇವನೆ ಮಾಡದಿದ್ದರೂ, ಸದೃಢರಾಗಿದ್ದರು. ಆದರೆ ಇಂದು ಸಣ್ಣ ಪುಟ್ಟದ್ದಕ್ಕೂ ಮಾರುಕಟ್ಟೆಯಲ್ಲಿ ಸಿಗುವ ಸಿದ್ಧ ಔಷಧಿಗಳ ಮೊರೆ ಹೋಗುತ್ತಿದ್ದೇವೆ ಎಂದು ವಿಷಾದವ್ಯಕ್ತಪಡಿಸಿದರು. ಹಿರಿಯ ವೈದ್ಯೆ ಡಾ.ಗೀತಾ, ಡಾ.ಹರೀಶ್‌, ಗ್ರಾಪಂ ಸದಸ್ಯ ಮಂಜುನಾಥ ಬ್ಯಾಣದ, ಆರೋಗ್ಯ ಶಿಕ್ಷ ಣಾಧಿಕಾರಿ ಎನ್‌.ಸಿ.ಸದಾಶಿವಪ್ಪ ಮತ್ತಿತರರು ಇದ್ದರು. ಅಂಗನವಾಡಿ ಕಾರ‍್ಯಕರ್ತೆ ರೋಹಿಣಿ ನಿರೂಪಿಸಿದರು. ಗ್ರಾಮಸ್ಥರಿಗೆ ಆರೋಗ್ಯ ತಪಾಸಣೆ ನಡೆಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ