ಆ್ಯಪ್ನಗರ

ಪ್ರಧಾನಿಗಳೊಂದಿಗೆ ಸಂವಾದಕ್ಕೆ ಆಹ್ವಾನ

ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸ್‌ಲೆನ್ಸ್‌ ನಲ್ಲಿರುವ ಹೊಂಗಿರಣ ಟಿಂಕರಿಂಗ್‌ ಲ್ಯಾಬ್‌ಗೆ ಮತ್ತೊಂದು ಸುವರ್ಣ ಅವಕಾಶ ಒದಗಿದೆ.

Vijaya Karnataka 10 Aug 2018, 5:00 am
ಸಾಗರ: ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸ್‌ಲೆನ್ಸ್‌ ನಲ್ಲಿರುವ ಹೊಂಗಿರಣ ಟಿಂಕರಿಂಗ್‌ ಲ್ಯಾಬ್‌ಗೆ ಮತ್ತೊಂದು ಸುವರ್ಣ ಅವಕಾಶ ಒದಗಿದೆ.
Vijaya Karnataka Web invite to a conversation with the prime ministers
ಪ್ರಧಾನಿಗಳೊಂದಿಗೆ ಸಂವಾದಕ್ಕೆ ಆಹ್ವಾನ


ಕೇಂದ್ರ ಸರಕಾರದ ಪ್ರತಿಷ್ಠಿತ ಯೋಜನೆಯಾದ ಅಟಲ್‌ ಇನ್ನೋವೇಶನ್‌ ಮಿಷನ್‌ನಡಿ ರಾಷ್ಟ್ರಮಟ್ಟದಲ್ಲಿ ಅಗ್ರ ಸ್ಥಾನ ಪಡೆದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸ್ಸ್‌ಲೆನ್ಸ್‌ನ 'ಮೋಟೋ ಅರೇಕಾ' ಮಾದರಿ ರೂಪಿಸಿದ ಈ ಲ್ಯಾಬ್‌ನ ತಂಡವನ್ನು ಪ್ರಧಾನಮಂತ್ರಿಗಳೊಂದಿಗೆ ಸಂವಾದಕ್ಕಾಗಿ ಆಹ್ವಾನಿಸಲಾಗಿದೆ.

ಆ.11ರಂದು ಮುಂಬಯಿನ ಐಐಟಿ ಆವರಣದಲ್ಲಿ ಈ ಸಂವಾದ ಕಾರ್ಯಕ್ರಮ ನಡೆಯಲಿದ್ದು, ವಿದ್ಯಾರ್ಥಿಗಳಾದ ಬಿ.ಎಂ. ಗುರುದತ್‌, ಕೆ.ಎನ್‌. ತೇಜಸ್‌, ಎಸ್‌.ಆಕರ್ಷ ಮತ್ತು ಮಾರ್ಗದರ್ಶಕ ಹಾಗೂ ಹೊಂಗಿರಣ ಟಿಂಕರಿಂಗ್‌ ಲ್ಯಾಬ್‌ನ ಸಂಚಾಲಕ ರೋಹಿತ್‌ ಅವರ ತಂಡ ಪ್ರಧಾನಮಂತ್ರಿಗಳಿಗೆ ಮಾದರಿಯ ಬಗ್ಗೆ ವಿವರ ನೀಡಿ, ಸಂವಾದ ನಡೆಸಲಿದ್ದಾರೆ ಎಂದು ಪ್ರಾಚಾರ್ಯೆ ಶೋಭಾ ರವೀಂದ್ರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ