ಆ್ಯಪ್ನಗರ

ಫಲಿತಾಂಶದ ನಂತರ ಎಷ್ಟು ದಿನ ಮೈತ್ರಿ ಇರುತ್ತೋ ಗೊತ್ತಿಲ್ಲ

ದೇಶ ರಕ್ಷಣೆ ನಿಟ್ಟಿನಲ್ಲಿ ಜನರು ಮತ್ತೊಮ್ಮೆ ಮೋದಿಯನ್ನು ಆಯ್ಕೆ ಮಾಡಲಿದ್ದಾರೆ. ಚುನಾವಣೆ ಸಮೀಕ್ಷೆಗಳು ಇದಕ್ಕೆ ಪೂರಕವಾಗಿವೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು.

Vijaya Karnataka 21 May 2019, 5:00 am
ಶಿವಮೊಗ್ಗ : ದೇಶ ರಕ್ಷಣೆ ನಿಟ್ಟಿನಲ್ಲಿ ಜನರು ಮತ್ತೊಮ್ಮೆ ಮೋದಿಯನ್ನು ಆಯ್ಕೆ ಮಾಡಲಿದ್ದಾರೆ. ಚುನಾವಣೆ ಸಮೀಕ್ಷೆಗಳು ಇದಕ್ಕೆ ಪೂರಕವಾಗಿವೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಭವಿಷ್ಯ ನುಡಿದರು.
Vijaya Karnataka Web it does not know how many days alliance will be after result
ಫಲಿತಾಂಶದ ನಂತರ ಎಷ್ಟು ದಿನ ಮೈತ್ರಿ ಇರುತ್ತೋ ಗೊತ್ತಿಲ್ಲ


ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಮಾತನಾಡಿ, ದೇಶದಲ್ಲಿ ಮುಂದೆಯೂ ನರೇಂದ್ರ ಮೋದಿಯೇ ಪ್ರಧಾನಿಯಾಗಬೇಕು ಎಂಬುದು ಜನತೆಯ ಅಪೇಕ್ಷೆಯಾಗಿದೆ. ಹೀಗಾಗಿ, ಎಲ್ಲ ರಾಜ್ಯದಲ್ಲಿಯೂ ಬಿಜೆಪಿ ಅಭ್ಯರ್ಥಿಗಳಿಗೆ ಜನ ಆಶೀರ್ವಾದ ಮಾಡಲಿದ್ದಾರೆ ಎಂದರು.

ರಾಜ್ಯದಲ್ಲಿ ಹೆಸರಿಗಷ್ಟೇ ಮೈತ್ರಿ ಸರಕಾರವಿದೆ. ಆದರೆ, ಪರಸ್ಪರ ಒಬ್ಬರ ವಿರುದ್ಧ ಮತ್ತೊಬ್ಬರು ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭ ಸೀಟು ಹಂಚಿಕೆ ವಿಚಾರವಾಗಿ ಮೈತ್ರಿಯಲ್ಲಿ ಜಗಳವಾಗಿತ್ತು. ನಂತರ ಮೈತ್ರಿಯಾದರೂ, ಪರಸ್ಪರ ಬೆಂಬಲ ಕೊಡುತ್ತಿಲ್ಲ ಎಂದು ಚುನಾವಣೆ ವೇಳೆಯಲ್ಲೇ ಗಲಾಟೆಯಾಗಿತ್ತು. ಹಾಗಾಗಿ, ಮೈತ್ರಿ ಮುಂದೇನಾಗುತ್ತೋ ಗೊತ್ತಿಲ್ಲ ಎಂದರು.

ಮುಖ್ಯಮಂತ್ರಿ ಸೀಟು ಖಾಲಿ ಇಲ್ಲದಿದ್ದರೂ ಎಲ್ಲ ಕಾಂಗ್ರೆಸಿಗರು ಟವೆಲ್‌ ಹಾಕಿಕೊಂಡು ಕುಳಿತಿದ್ದಾರೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ರೇವಣ್ಣ ಸೇರಿದಂತೆ ಎಲ್ಲ ಕಾಂಗ್ರೆಸಿಗರ ಹೆಸರು ಪ್ರಸ್ತಾಪವಾಗಿದೆ ಎಂದರು.

ನರೇಂದ್ರ ಮೋದಿ ಅವರನ್ನು ದೇಶದ ಜನರು ನಂಬಿದ್ದಾರೆ. ಅದಕ್ಕಾಗಿಯೇ ಅವರ ಕೈಗೆ ಮತ್ತೊಮ್ಮೆ ಅಧಿಕಾರ ಕೊಡಲಿದ್ದಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಒಂದೇ ರೀತಿಯ ವಾತಾವರಣವಿದೆ. ಕರ್ನಾಟಕದಲ್ಲೂ ನಿರೀಕ್ಷೆಗೆ ಮೀರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.

ಬಿಜೆಪಿ ಶಾಸಕರು ಹುಲಿಗಳಿದ್ದಂತೆ:
ಬಿಜೆಪಿ ಶಾಸಕರು ಹುಲಿಗಳಿದ್ದಂತೆ, ಕಾಂಗ್ರೆಸ್‌ ಪಕ್ಷದವರು ಅಪರೇಷನ್‌ ಹಸ್ತ ಅಲ್ಲ ಏನೂ ಮಾಡಿದರೂ ಬಿಜೆಪಿಯ ಒಬ್ಬ ಶಾಸಕರನ್ನು ಮುಟ್ಟುವುದಕ್ಕೂ ಆಗುವುದಿಲ್ಲ. ನಾವು ಅಪರೇಷನ್‌ ಕಮಲ ಮಾಡುವುದಿಲ್ಲ. ಬದಲಿಗೆ ಮೈತ್ರಿ ಪಕ್ಷದ ಶಾಸಕರೇ ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಮ್ಮ ನಾಲಿಗೆ ಮೇಲಿಯೇ ಹಿಡಿತ ಇಲ್ಲ. ಇನ್ನು ಶಾಸಕರನ್ನು ಹೇಗೆ ಹಿಡಿತದಲ್ಲಿ ಇಟ್ಟುಕೊಳ್ಳುತ್ತಾರೆ. ಚುನಾವಣೆ ನಂತರ ಎಷ್ಟು ದಿನ ಮೈತ್ರಿ ಸರಕಾರ ಇರುತ್ತದೆ ಎಂಬುದು ಗೊತ್ತಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ