ಆ್ಯಪ್ನಗರ

ಸಿಗಂದೂರಲ್ಲಿ ಸಂಭ್ರಮದ ಸಂಕ್ರಾತಿ ಉತ್ಸವ: ಅದ್ದೂರಿ ಜ್ಯೋತಿ ಮೆರವಣಿಗೆ

ಸಿಗಂದೂರಿನ ಚೌಡೇಶ್ವರಿ ಕ್ಷೇತ್ರದಲ್ಲಿ ಗುರುವಾರ ಮಕರ ಸಂಕ್ರಾಂತಿ ಅಂಗವಾಗಿ ವಿಶೇಷ ಪೂಜಾವಿಧಿಗಳು ಜರುಗಿದವು. ಡಾ. ಶಿವಾನಂದ ಜಡ್ಡಿನಬೈಲು, ಸತ್ಯಜಿತ್‌ ಸುರತ್ಕಲ್ ಅವರು ಮೂಲ ಸ್ಥಳದ ಜ್ಯೋತಿಗೆ ಚಾಲನೆ ನೀಡಿದರು.

Vijaya Karnataka Web 14 Jan 2021, 7:11 pm
ಸಾಗರ: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹಿನ್ನೂರಿನ ಶ್ರೀ ಸಿಗಂದೂರಿನ ಚೌಡೇಶ್ವರಿ ಕ್ಷೇತ್ರದಲ್ಲಿ ಗುರುವಾರ ಮಕರ ಸಂಕ್ರಾಂತಿ ಅಂಗವಾಗಿ ವಿಶೇಷ ಪೂಜಾವಿಧಿಗಳು ಜರುಗಿದವು. ದೇವಿಯ ಮೂಲ ಸ್ಥಾನವಾದ ಸೀಗೆಕಣಿವೆಯಲ್ಲಿ ಡಾ.ರಾಮಪ್ಪನವರ ಹೊಳೆಕೊಪ್ಪದ ಕುಟುಂಬದವರೊಂದಿಗೆ ಮೊದಲ ಪೂಜೆ ಸಲ್ಲಿಸಿದರು. ಡಾ. ಶಿವಾನಂದ ಜಡ್ಡಿನಬೈಲು, ಸತ್ಯಜಿತ್‌ ಸುರತ್ಕಲ್‌ ಮೂಲ ಸ್ಥಳದ ಜ್ಯೋತಿಗೆ ಚಾಲನೆ ನೀಡಿದರು.
Vijaya Karnataka Web sigandur chowdeshwari temple


ನಂತರ ಜ್ಯೋತಿ ಸ್ವರೂಪದ ದೇವಿಯನ್ನು ಮೆರವಣಿಗೆ ಮೂಲಕ ತಂದು, ಸಿಗಂದೂರು ದೇವಸ್ಥಾನದ ಶ್ರೀ ಚೌಡಮ್ಮ ದೇವಿಯ ಸನ್ನಿಧಾನದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಕರೂರು ಹೋಬಳಿಯ ಮಹಿಳೆಯರಿಂದ ಪೂರ್ಣಕುಂಭ , ವಿವಿಧ ಕಲಾ ತಂಡದವರಿಂದ ಡೊಳ್ಳುಕುಣಿತ , ವೀರಗಾಸೆ, ಕೋಲಾಟ, ಚಂಡೆವಾದನ ಇನ್ನಿತರೆಗಳು ಮೆರವಣಿಗೆಗೆ ಕಳೆಕಟ್ಟಿದವು.

ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ, ಆಭರಣ ಅಲಂಕಾರ ನಡೆಯಿತು. ಗುರುವಾರ ಬೆಳಗಿನ ಸಮಯದಲ್ಲಿಯೇ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಯಕ್ಷಗಾನ ಪ್ರದರ್ಶನ: ಶ್ರೀ ಸಿಗಂದೂರು ಮೇಳದವರಿಂದ ಯಕ್ಷಗಾನ ಪ್ರದರ್ಶನ. 15ರಂದು ಬೆಳಗ್ಗೆ 05ಕ್ಕೆ ವಿವಿಧ ಆಭರಣ ಪೂಜೆ ಮಧ್ಯಾಹ್ನ ಅನ್ನಸಂತರ್ಪಣೆ ಸಂಜೆ 05 ಗಂಟೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಹಾಗೂ ಎಸ್‌ಎಸ್‌ಎಲ್‌ಸಿ ,ಪಿ ಯು ಸಿ ಯಲ್ಲಿ ಹೆಚ್ಚು ಅಂಕ ಗಳಿಸಿದ ಕರೂರು ಹೋಬಳಿಯ ವಿದ್ಯಾರ್ಥಿಗಳಿಗೆ ಪುರಸ್ಕಾರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ