ಆ್ಯಪ್ನಗರ

ಕರ್ನಾಟಕ ಋುಣ ಪರಿಹಾರ ಕಾಯಿದೆ ಜಾರಿಗೆ ಆಗ್ರಹ

ಕರ್ನಾಟಕ ಋುಣ ಪರಿಹಾರ ಕಾಯಿದೆ 2018ರ ಗೊಂದಲಗಳನ್ನು ಬಗೆಹರಿಸಿ ಕೂಡಲೇ ಕಾಯಿದೆ ಜಾರಿಗೊಳಿಸಬೇಕೆಂದು ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ.ರಮೇಶ್‌ಗೌಡ ಒತ್ತಾಯಿಸಿದರು.

Vijaya Karnataka 18 Aug 2019, 5:00 am
ಶಿವಮೊಗ್ಗ: ಕರ್ನಾಟಕ ಋುಣ ಪರಿಹಾರ ಕಾಯಿದೆ 2018ರ ಗೊಂದಲಗಳನ್ನು ಬಗೆಹರಿಸಿ ಕೂಡಲೇ ಕಾಯಿದೆ ಜಾರಿಗೊಳಿಸಬೇಕೆಂದು ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಗೋ.ರಮೇಶ್‌ಗೌಡ ಒತ್ತಾಯಿಸಿದರು.
Vijaya Karnataka Web karnataka debt relief act to be enacted
ಕರ್ನಾಟಕ ಋುಣ ಪರಿಹಾರ ಕಾಯಿದೆ ಜಾರಿಗೆ ಆಗ್ರಹ


ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಅವರು ಮಾತನಾಡಿ, ರಾಜ್ಯ ಸರಕಾರ ಕರ್ನಾಟಕ ಋುಣ ಪರಿಹಾರ ಕಾಯಿದೆ -2018 ಜಾರಿಗೆ ತಂದಿದ್ದು, ಈ ಕಾಯಿದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಕಾಯಿದೆಗೆ ಸಂಬಂಧಿಸಿದಂತೆ ಸರಕಾರ ಆದೇಶ ಹೊರಡಿಸಿದೆ ಎಂದರು.

ಕಾಯಿದೆ ಪ್ರಕಾರ 1.20 ಲಕ್ಷ ರೂ. ಗಿಂತ ಕಡಿಮೆ ಆದಾಯ ಹೊಂದಿರುವ, 2 ಹೆಕ್ಟೇರ್‌ ಒಣಭೂಮಿ ಹೊಂದಿರುವ, ಎರಡು ಬೆಳೆಗಿಂತ ಹೆಚ್ಚು ಬೆಳೆ ತೆಗೆಯುವ 1/4 ಹೆಕ್ಟೇರ್‌ ನೀರಾವರಿ ಜಮೀನು ಹೊಂದಿರುವವರು, ವರ್ಷಕ್ಕೆ ಒಂದು ಬೆಳೆ ತೆಗೆಯುವ ಅರ್ಧ ಎಕರೆ ನೀರಾವರಿ ಜಮೀನು ಹೊಂದಿರುವವರು, ಸಣ್ಣ ರೈತರು, ಕೃಷಿಕಾರ್ಮಿಕರು, ಕಡುಬಡವರು ಫಲಾನುಭವಿಗಳಾಗಿದ್ದಾರೆ ಎಂದರು.

ಈ ಫಲಾನುಭವಿಗಳು ಖಾಸಗಿ ಲೇವಾದೇವಿಗಾರರಿಂದ ಅಥವಾ ಪಾನ್‌ ಬ್ರೋಕರ್‌ಗಳಿಂದ ಚಿನ್ನ, ವಸ್ತು, ಚೆಕ್‌ ನೀಡಿ ಬಡ್ಡಿಗೆ ಸಾಲ ಪಡೆದಿದ್ದರೆ ಅಂತಹ ವ್ಯಕ್ತಿಗಳು ತಮ್ಮ ವ್ಯಾಪ್ತಿಯ ಉಪವಿಭಾಗಾಧಿಕಾರಿಗೆ ತಾವು ಪಡೆದಿರುವ ಸಾಲದ ವಿವರ, ತಮ್ಮ ಆದಾಯದ ವಿವರ ಸಲ್ಲಿಸಿ ರಾಜ್ಯ ಸರಕಾರದ ಮಾನವೀಯತೆಯ ಆರ್ಥಿಕ ಸಮಾನತೆಯ ಈ ಕಾಯಿದೆ ಉಪಯೋಗವನ್ನು ಪಡೆಯಲು ಅವಕಾಶವಿದೆ ಎಂದರು.

ಆದರೆ, ನೂತನವಾಗಿ ಅಸ್ತಿತ್ವಕ್ಕೆ ಬಂದ ಸರಕಾರ ಮತ್ತು ಅಧಿಕಾರಿಗಳು ಈ ಬಗ್ಗೆ ಜನರಿಗೆ ಯಾವುದೇ ಮಾಹಿತಿ ನೀಡದಿರುವುದರಿಂದ ಫಲಾನುಭವಿಗಳಲ್ಲಿ ಕಾಯಿದೆ ಬಗ್ಗೆ ಗೊಂದಲ ಉಂಟಾಗಿದೆ. ಸರಕಾರ ಮತ್ತು ಡಿಸಿ ಈ ಬಗ್ಗೆ ಸೂಕ್ತ ರೀತಿಯಲ್ಲಿ ಜನರಿಗೆ ಮಾಹಿತಿ ನೀಡಿ ಬಡವರಿಗೆ ರೂಪಿತಗೊಂಡಿರುವ ಈ ಕಾಯಿದೆಯನ್ನು ಸಮಗ್ರವಾಗಿ ಅನುಷ್ಠಾನಕ್ಕೆ ತರಬೇಕು. ಒಂದು ವೇಳೆ ಕಾಯಿದೆ ಜಾರಿಗೆ ವಿಳಂಬ ಮಾಡಿದರೆ ವೇದಿಕೆ ವತಿಯಿಂದ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ವೇದಿಕೆ ಪ್ರಮುಖರಾದ ಆಸೀಫ್‌, ನಾಗರಾಜ್‌, ನಾಗೇಶ್‌, ಶಿವಣ್ಣ, ಲಕ್ಷ್ಮಣ, ರಾಜು ನಾಯ್ಕ್‌, ಕಾಸೀಂ, ರೇಣುಕಮ,್ಮ ಅಶ್ರಫ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ