ಆ್ಯಪ್ನಗರ

ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿರಿಸಿ

ಮನೆಯ ಸುತ್ತಲಿನ ವಾತಾವರಣದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದರಿಂದ ಕೀಟಜನ್ಯ ಕಾಯಿಲೆಗಳಾದ ಡೆಂಗೆ, ಮಲೇರಿಯ, ಚಿಕೂನ್‌ಗೂನ್ಯ, ಮೆದುಳು ಜ್ವರ, ಆನೆಕಾಲು ಇನ್ನಿತರೆ ರೋಗಗಳಿಂದ ದೂರ ಉಳಿಯಬಹುದು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‌ ಸುರಗಿಹಳ್ಳಿ ಹೇಳಿದರು.

Vijaya Karnataka 27 Jul 2019, 5:00 am
ಶಿವಮೊಗ್ಗ : ಮನೆಯ ಸುತ್ತಲಿನ ವಾತಾವರಣದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದರಿಂದ ಕೀಟಜನ್ಯ ಕಾಯಿಲೆಗಳಾದ ಡೆಂಗೆ, ಮಲೇರಿಯ, ಚಿಕೂನ್‌ಗೂನ್ಯ, ಮೆದುಳು ಜ್ವರ, ಆನೆಕಾಲು ಇನ್ನಿತರೆ ರೋಗಗಳಿಂದ ದೂರ ಉಳಿಯಬಹುದು ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್‌ ಸುರಗಿಹಳ್ಳಿ ಹೇಳಿದರು.
Vijaya Karnataka Web keep the environment around the house clean
ಮನೆ ಸುತ್ತಲಿನ ಪರಿಸರ ಸ್ವಚ್ಛವಾಗಿರಿಸಿ


ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ಮಲೇರಿಯ ಮತ್ತು ಡೆಂಗೆ ವಿರೋಧ ದಿನಾಚರಣೆ ಅಂಗವಾಗಿ ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯಿಂದ ಸೀಗೆಹಟ್ಟಿ ನಗರ ಆರೋಗ್ಯ ಕೇಂದ್ರದವರೆಗೆ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಡೆಂಗೆ, ಚಿಕೂನ್‌ಗೂನ್ಯಕಾಯಿಲೆಗಳಿಗೆ ನಿರ್ದಿಷ್ಟ ಚಿಕಿತ್ಸೆ ಲಭ್ಯವಿಲ್ಲ. ಆದರೆ, ಸೂಕ್ತ ಸಮಯದಲ್ಲಿ ವೈದ್ಯರು ನೀಡುವ ಚಿಕಿತ್ಸೆಯಿಂದ ಮಾತ್ರ ಪಾರಾಗಬಹುದು. ಇದಕ್ಕೂ ಮುನ್ನ ನಾವು ಕಾಯಿಲೆಗಳು ಹರಡುವ ಸೊಳ್ಳೆ ಇನ್ನಿತರೆ ಕೀಟಗಳು ಹೆಚ್ಚದಂತೆ ನಿಯಂತ್ರಣ ಮಾಡುವ ಕಾರ್ಯ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಮನೆಯ ಸುತ್ತಲಿನ ಪರಿಸರದಲ್ಲಿ ಸೊಳ್ಳೆಗಳು ಉತ್ಪಾದನೆಗೆ ಸಹಾಯವಾಗುವ ಕೊಳಚೆ ಪ್ರದೇಶಗಳು ನಿರ್ಮಾಣಗೊಳ್ಳದಂತೆ ಎಚ್ಚರಿಕೆ ವಹಿಸಬೇಕು. ನೀರು ನಿಲ್ಲಲು ಅನುಕೂಲವಾಗುವಂತಹ ಪ್ಲಾಸ್ಟಿಕ್‌ ವಸ್ತುಗಳು, ಟೈಯರ್‌, ಮಡಕೆ, ಪಾತ್ರೆ, ತೆಂಗಿನ ಚಿಪÜು್ಪ ಮುಂತಾದ ವಸ್ತುಗಳು ಮನೆಯ ಸುತ್ತ ಇರದಂತೆ ಎಚ್ಚರಿಕೆ ವಹಿಸಿ ವಿಲೇವಾರಿ ಮಾಡಬೇಕು ಎಂದು ಹೇಳಿದರು.

ಮನೆಯಲ್ಲಿ ವಾರಕ್ಕೊಮ್ಮೆ ಒಣ ದಿನವನ್ನಾಗಿ ಆಚರಿಸುವುದು, ನೀರಿನ ಟ್ಯಾಂಕ್‌ಗಳನ್ನು ಪ್ರತಿ ವಾರಕ್ಕೊಮ್ಮೆ ಶುಚಿಗೊಳಿಸಿ, ಒಣಗಿಸಿ ನೀರು ತುಂಬಿಸಿ ಭದ್ರವಾಗಿ ಮುಚ್ಚಿರುವಂತೆ ನೋಡಿಕೊಳ್ಳಬೇಕು. ಮಲಗುವಾಗ ಸೊಳ್ಳೆ ಪರದೆ ಹಾಗೂ ಇನ್ನಿತರೆ ಸೊಳ್ಳೆಗಳ ವಿಕರ್ಷಕ ವಸ್ತುಗಳನ್ನು ಬಳಸಿ ಕಾಯಿಲೆಗಳು ಹರಡದಂತೆ ತಡೆಯಬಹುದಾಗಿದೆ.

ಮಲೇರಿಯ ಮತ್ತಿತರ ಕೀಟಜನ್ಯ ರೋಗಗಳು ಕೇವಲ ರಕ್ತ ಪರೀಕ್ಷೆ ಮಾತ್ರದಿಂದ ಅರಿಯಲು ಸಾಧ್ಯವಾಗುವುದರಿಂದ ಜ್ವರ ಹಾಗೂ ಲಕ್ಷ ಣಗಳಾದ ಬಾಯಿ ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ, ಚರ್ಮದ ಮೇಲೆ ರಕ್ತಸ್ರಾವದ ಗುರುತುಗಳು, ವಿಪರೀತ ಬಾಯಾರಿಕೆ, ತಣ್ಣನೆಯ ಬಿಳುಚಿಕೊಂಡ ಚರ್ಮ, ಚಡಪಡಿಸುವುದು, ಜ್ಞಾನ ತಪ್ಪುವುದು, ಐದಾರು ದಿನಗಳ ಕಾಲ ಜ್ವರ ಮುಂದುವರಿಯುವುದು ಹಾಗೂ ಕಡಿಮೆಯಾಗಿ ಜ್ವರ ಹೆಚ್ಚುವುದು, ಕಪ್ಪು ಮಲ ವಿಸರ್ಜನೆ ಇನ್ನಿತರೆ ಲಕ್ಷ ಣಗಳು ಕಾಣಿಸಿಕೊಂಡಾಗ ಸೂಕ್ತ ವೈದ್ಯರನ್ನು ಭೇಟಿಯಾಗಿ ಸೂಚಿಸಿದ ಪರೀಕ್ಷೆ ಹಾಗೂ ಚಿಕಿತ್ಸೆ ಪಡೆಯಬೇಕು ಎಂದರು.

ಆರೋಗ್ಯ ಇಲಾಖೆ ಸಿಬ್ಬಂದಿ ಡಾ. ರುದ್ರಪ್ಪ, ಡಾ. ಶಂಕರ್‌ ಇತರರು ಪಾಲ್ಗೊಂಡಿದ್ದರು. ವಿವಿಧ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾಹಿತಿಗಳ ಕರಪತ್ರ ವಿತರಿಸಿ ಜಾಗೃತಿ ಮೂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ