ಆ್ಯಪ್ನಗರ

ಕೆಎಸ್‌ನ ಕವಿತೆ ಕುವೆಂಪು ವಿವಿ ಗೀತೆ

ಮೈಸೂರು ಮಲ್ಲಿಗೆ ಖ್ಯಾತಿಯ ಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರು ರಚಿಸಿರುವ 'ವಿದ್ಯೋದಯವಾಗಿದೆ' ಗೀತೆಯನ್ನು ಕುವೆಂಪು ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯದ ಗೀತೆಯನ್ನಾಗಿ ಘೋಷಿಸಿದೆ.

Vijaya Karnataka 18 Jan 2019, 5:00 am
ಶಂಕರಘಟ್ಟ : ಮೈಸೂರು ಮಲ್ಲಿಗೆ ಖ್ಯಾತಿಯ ಕವಿ ಕೆ.ಎಸ್‌.ನರಸಿಂಹಸ್ವಾಮಿ ಅವರು ರಚಿಸಿರುವ 'ವಿದ್ಯೋದಯವಾಗಿದೆ' ಗೀತೆಯನ್ನು ಕುವೆಂಪು ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯದ ಗೀತೆಯನ್ನಾಗಿ ಘೋಷಿಸಿದೆ.
Vijaya Karnataka Web ksn poem is kuvempu vv song
ಕೆಎಸ್‌ನ ಕವಿತೆ ಕುವೆಂಪು ವಿವಿ ಗೀತೆ


ಜ್ಞಾನ ಸಹ್ಯಾದ್ರಿ ಆವರಣದಲ್ಲಿ ಗುರುವಾರ ಪರೀಕ್ಷಾಂಗ ವಿಭಾಗ ಕಟ್ಟಡದ ಮುಂಭಾಗದಲ್ಲಿ ವಿದ್ಯಾರ್ಥಿಗಳೊಂದಿಗೆ ಸಾಮೂಹಿಕವಾಗಿ 'ವಿದ್ಯೋದಯವಾಗಿದೆ' ಗೀತೆಯನ್ನು ಹಾಡುವ ಮೂಲಕ ಕುಲಪತಿ ಪ್ರೊ. ಜೋಗನ್‌ ಶಂಕರ್‌ ಅವರು ಅನಾವರಣಗೊಳಿಸಿದರು.

ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಚಿದಾನಂದಗೌಡರ ಕೋರಿಕೆ ಮೇರೆಗೆ ಕೆ.ಎಸ್‌.ನರಸಿಂಹ ಸ್ವಾಮಿ ಅವರು ಕವಿತೆಯನ್ನು ರಚಿಸಿಕೊಟ್ಟಿದ್ದರು. ವಿಶೇಷವೆಂದರೆ ಈ ಕವಿತೆಯೆ ಕೆಎಸ್‌ನ ಅವರ ಕಡೇಯ ಕವಿತೆಯೂ ಆಗಿದೆ.

ಖ್ಯಾತ ಸಂಗೀತ ಸಂಯೋಜಕ ಸಿ.ಎಸ್‌.ಸೋಮಸುಂದರಂ ಅವರು ಗೀತೆಗೆ ರಾಗ ಸಂಯೋಜಿಸಿದ್ದಾರೆ. ವಿಶ್ವವಿದ್ಯಾಲಯದ 30ಕ್ಕೂ ಹೆಚ್ಚಿನ ವಿಭಾಗಗಳ 500ಕ್ಕೂ ಅಧಿಕ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ಸಾಮೂಹಿಕವಾಗಿ ಪಾಲ್ಗೊಂಡು ಮೂರು ನಿಮಿಷಗಳ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು. ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಚ್‌.ಎಸ್‌.ಭೋಜ್ಯಾನಾಯ್ಕ, ಪ್ರೊ.ರಾಜಾನಾಯಕ, ಪ್ರೊ.ಹಿರೇಮಣಿ ನಾಯ್ಕ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ