ಆ್ಯಪ್ನಗರ

ಲಕ್ಷದೀಪದಲ್ಲಿ ಕಂಗೊಳಿಸಿದ ಹೊಸಗುಂದ

ಹೊಸಗುಂದದ ಇತಿಹಾಸ ಪ್ರಸಿದ್ಧ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿಹಮ್ಮಿಕೊಳ್ಳಲಾದ ಹೊಸಗುಂದ ಉತ್ಸವದ ಕೊನೆಯ ದಿನ ಸೋಮವಾರ ಲಕ್ಷ ದೀಪೋತ್ಸವ ಆಚರಿಸಲಾಯಿತು.

Vijaya Karnataka 20 Nov 2019, 5:00 am
ಆನಂದಪುರಂ : ಹೊಸಗುಂದದ ಇತಿಹಾಸ ಪ್ರಸಿದ್ಧ ಶ್ರೀ ಉಮಾಮಹೇಶ್ವರ ದೇವಾಲಯದ ಆವರಣದಲ್ಲಿಹಮ್ಮಿಕೊಳ್ಳಲಾದ ಹೊಸಗುಂದ ಉತ್ಸವದ ಕೊನೆಯ ದಿನ ಸೋಮವಾರ ಲಕ್ಷ ದೀಪೋತ್ಸವ ಆಚರಿಸಲಾಯಿತು.
Vijaya Karnataka Web 19ANPP1_46

ಪ್ರಧಾನ ದೇವಾಲಯ ಹಾಗೂ ಪರಿವಾರ ದೇಗುಲಗಳು, ಪುಷ್ಕರಣಿ, ಗೋಶಾಲೆ, ಕಾಡಿನ ನಡುವಿನ ಕಂಚಿಕಾಳಮ್ಮ ದೇವಾಲಯದ ಪ್ರದಕ್ಷಿಣಾ ಪಥದಲ್ಲಿಬೆಳಗಿಸಿದ ಸಾಲು ಸಾಲು ಹಣತೆ ದೀಪಗಳು ಇಡೀ ಹೊಸಗುಂದ ಕ್ಷೇತ್ರವೇ ಝಗಮಗಿಸುವಂತೆ ಕಂಗೊಳಿಸುತ್ತಿತ್ತು. ಮುರುಘಾಮಠದ ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿ ಕಾಡಿನ ನಡುವೆ ಕಣ್ಮರೆಯಾಗಿದ್ದ ಹೊಸಗುಂದ ಕ್ಷೇತ್ರ ಮತ್ತೆ ಬೆಳಗುವಂತಾಗಿರುವುದು ಶ್ಲಾಘನೀಯ ಎಂದರು.
ಬದುಕಿನ ಕತ್ತಲೆ ಕಳೆದು ಎಲ್ಲರ ಬಾಳೂ ಬೆಳಗಬೇಕು ಎಂಬುದು ದೀಪೋತ್ಸದ ಸಂದೇಶವಾಗಿದೆ ಎಂದರು. ಹೊಸದಿಲ್ಲಿಯ ಶ್ರೀಸರ್ವಾನಂದ ಸರಸ್ವತಿ ಸ್ವಾಮೀಜಿ, ಹೊಸನಗರ ಮೂಲೆಗದ್ದೆ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಗರ್ತಿಕೆರೆಯ ಆರ್ಯ ಈಡಿಗ ಮಹಾ ಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿ, ಶ್ರಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿ ಡಾ.ಗೌರಿಶಂಕರ, ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ, ಜಿ.ಪಂ. ಸದಸ್ಯ ಕಲಗೋಡು ರತ್ನಾಕರ, ಸಾಗರ ತಾ.ಪಂ.ಸದಸ್ಯೆ ಜ್ಯೋತಿ ಕೋವಿ,
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟಿನ ಮುಖ್ಯಸ್ಥ ಸಿ.ಎಂ.ಎನ್‌.ಶಾಸ್ತ್ರಿ, ಟ್ರಸ್ಟಿ ಶೋಭಾ ಶಾಸ್ತ್ರಿ, ಸೂರ್ಯ ಶಾಸ್ತ್ರಿ, ಕಾರ್ಯದರ್ಶಿ ಗಿರೀಶ ಕೋವಿ, ಗಣಪತಿ ಶೆಟ್ಟಿ, ಹೆಡ್ತ್ರಿ ಬಸವರಾಜ ಗೌಡ, ಕೋವಿ ಸ್ವಾಮಿ, ದಿನೇಶ ಐಗಿನಬೈಲು, ಉಮೇಶ ಅಡಿಗ, ಮಹೇಶ ಮಂಕಾಳೆ, ಶೇಷಗಿರಿ ಹೆಗಡೆ, ಮಹಾಬಲ ಗೌಡ, ರವಿ ಜಂಬೆಕೊಪ್ಪ, ರಾಕೇಶ, ಶ್ಯಾಮಸುಂದರ್‌, ಅಶ್ವಿನ್‌ ಕುಮಾರ್‌, ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಭಟ್‌ ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ