ಆ್ಯಪ್ನಗರ

ತಡಸದಲ್ಲಿಪುರಾತನ ಶಾಸನಗಳು ಪತ್ತೆ

ಭದ್ರಾವತಿ ತಾಲೂಕಿನ ತಡಸ ಗ್ರಾಮದಲ್ಲಿರಾಷ್ಟ್ರಕೂಟರ ಕಾಲದ ಕ್ರಿ.ಶ. 10ನೇ ಶತಮಾನದ ತುರುಗೋಳು ವೀರಗಲ್ಲುಶಾಸನ, ಇದೇ ಗ್ರಾಮದ ವೀರಭದ್ರ ದೇವಾಲಯ ಮುಂದೆ ಹೊಯ್ಸಳರ ಕಾಲದ ಕ್ರಿ.ಶ. 13ನೇ ಶತಮಾನದ ನಂದಿ ಪೀಠ ಶಾಸನ ಪತ್ತೆಯಾಗಿವೆ.

Vijaya Karnataka 3 Oct 2019, 5:00 am
ಶಿವಮೊಗ್ಗ: ಭದ್ರಾವತಿ ತಾಲೂಕಿನ ತಡಸ ಗ್ರಾಮದಲ್ಲಿರಾಷ್ಟ್ರಕೂಟರ ಕಾಲದ ಕ್ರಿ.ಶ. 10ನೇ ಶತಮಾನದ ತುರುಗೋಳು ವೀರಗಲ್ಲುಶಾಸನ, ಇದೇ ಗ್ರಾಮದ ವೀರಭದ್ರ ದೇವಾಲಯ ಮುಂದೆ ಹೊಯ್ಸಳರ ಕಾಲದ ಕ್ರಿ.ಶ. 13ನೇ ಶತಮಾನದ ನಂದಿ ಪೀಠ ಶಾಸನ ಪತ್ತೆಯಾಗಿವೆ.
Vijaya Karnataka Web late invention of ancient inscriptions
ತಡಸದಲ್ಲಿಪುರಾತನ ಶಾಸನಗಳು ಪತ್ತೆ


ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಆರ್‌.ಶೇಜೇಶ್ವರ್‌ ಕ್ಷೇತ್ರಕಾರ್ಯ ವೇಳೆ ಈ ಶಾಸನಗಳು ಸಿಕ್ಕಿವೆ.

ತಡಸ ಗ್ರಾಮದ ಮಧ್ಯೆದಲ್ಲಿತುರುಗೋಳು ವೀರಗಲ್ಲುಶಾಸನ ಪತ್ತೆಯಾಗಿದ್ದು, ಇದು ಗ್ರಾನೈಟ್‌ ಶಿಲೆಯಿಂದ ಕೆತ್ತಲ್ಪಟ್ಟಿದೆ. ಒಂದೂವರೆ ಮೀಟರ್‌ ಉದ್ದ ಹಾಗೂ 65 ಸೆ.ಮೀ ಅಗಲವಾಗಿದ್ದು, ಹಳಗನ್ನಡ ಲಿಪಿ ಹೊಂದಿದೆ. ಶಿಲ್ಪವು ಮೂರು ಪಟ್ಟಿಕೆಗಳಿಂದ ಕೂಡಿದ್ದು, ವೀರಗಲ್ಲಿನ ಸುತ್ತಲೂ ಶಾಸನ ಕಾಣಬಹುದು.

ಮೊದಲ ಪಟ್ಟಿಕೆಯಲ್ಲಿವೀರನುಬಿಲ್ಲುಬಾಣಗಳನ್ನು ಹಿಡಿದು ಹೋರಾಡುತ್ತಿರುವುದು, ವೀರನ ಸುತ್ತ ಗೋವುಗಳು ನಿಂತಿರುವುದು, ಒಬ್ಬ ಶತ್ರುವು ಕೆಳಗೆ ಬಿದ್ದಿದ್ದು, ಇನ್ನೊಬ್ಬ ಶತ್ರುವು ವೀರನೊಂದಿಗೆ ಬಿಲ್ಲುಬಾಣವನ್ನು ಹಿಡಿದು ಹೊರಾಡುತ್ತಿರುವ ದೃಶ್ಯ ಕೆತ್ತಲಾಗಿದೆ. ಎರಡನೇ ಪಟ್ಟಿಕೆಯಲ್ಲಿಇಬ್ಬರು ಅಪ್ಸರೆಯರು ವೀರನನ್ನು ತಮ್ಮ ತೋಳುಗಳಲ್ಲಿಸ್ವರ್ಗಕ್ಕೆಕರೆದುಕೊಂಡು ಹೋಗುತ್ತಿರುವುದು ಕಂಡುಬರುತ್ತದೆ. ಮೂರನೇ ಪಟ್ಟಿಕೆಯಲ್ಲಿವೀರನು ಪೀಠದ ಮೇಲೆ ಕುಳಿತಿರುವುದಿದೆ. ಪಕ್ಕದಲ್ಲಿಚಾಮರಧಾರಣಿಯರು ನಿಂತಿದ್ದಾರೆ.

ಶಾಸನದ ಮಹತ್ವ: ರಾಷ್ಟ್ರಕೂಟರ ಕಾಲದಲ್ಲಿಪೀಠದ ಮೇಲೆ ದೇವರ ಬದಲಿ ವ್ಯಕಿಯನ್ನು ಕೂರಿಸುಸುತ್ತಿರುವುದು ವಿಶೇಷವಾಗಿದೆ. ಶಾಸನವು ತೃಟಿತವಾಗಿದ್ದು, ಹಳೆಗನ್ನಡದಲ್ಲಿದೆ. ಸ್ವಸ್ತಿ ವರ್ಷ ಕಲಿ ಉಲ್ಲೇಖ ಮಾತ್ರಕಂಡು ಬರುತ್ತದೆ. ಇದು ಬಹುಶಃ ಗೋವುಗಳನ್ನು ಕದಿಯಲು ಬಂದ ಕಳ್ಳರ ವಿರುದ್ಧ ಹೋರಾಡಿ ವೀರ ಹೋರಾಡಿ ಮರಣ ಹೊಂದಿರುವುದರ ಮಾಹಿತಿ ಒಳಗೊಂಡಿರಬಹುದು. ಶಾಸನದ ಬಗ್ಗೆ ಇನ್ನೂ ಹೆಚ್ಚಿನಅಧ್ಯಯನ ಕೈಗೊಳ್ಳುವುದಾಗಿ ತಿಳಿಸಲಾಗಿದೆ.

ನಂದಿ ಪೀಠ ಶಾಸನ ಸಿಸ್ಟ್‌ ಶಿಲೆಯಿಂದ ಕೂಡಿದೆ. 58 ಸೆ.ಮೀ ಉದ್ದ 22 ಸೆ.ಮೀ. ಅಗಲವಾಗಿದೆ. ಪೀಠದ ಬಲಭಾಗದಲ್ಲಿಎರಡು ಸಾಲಿನ ಹಳೆಗನ್ನಡದ ಶಾಸನವಿದೆ. ಲಿಪಿಯ ಆಧಾರದ ಮೇಲೆ ಇದು ಕ್ರಿ.ಶ. ಸು 13 ನೇ ಶತಮಾನದ ಎನ್ನಬಹುದು. ಮುಳಗಿರೆಯನು ಜಯಸಂವತ್ಸರದ ಆಶ್ವಿಜ ಸೋಮವಾರದಂದು ಈ ವಿಗ್ರಹವನ್ನು ಮಾಡಿಸಿ ಪ್ರತಿಷ್ಠಾಪಿಸಿದ್ದಾನೆಂದು ಶಾಸನದ ಮೇಲಿನ ಸಾಲುಗಳಿಂದ ತಿಳಿದುಬರುತ್ತದೆ.

ಗ್ರಾಮಸ್ಥರಾದ ಮಹಮ್ಮದ್‌ ಜಲಾಲ್‌, ದೇವೇಂದ್ರಪ್ಪ, ಐತಾಳು ಚೆನ್ನಪ್ಪ ಇತರರಿದ್ದರು. ಶಾಸನ ಓದಲು ಡಾ.ಜಗದೀಶ್‌, ರವಿಕುಮಾರ ನವಲಗುಂದ್‌ ಸಹಕರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ