ಆ್ಯಪ್ನಗರ

ಕ್ರೀಡೆಯಿಂದ ಲೀಡರ್‌ಶಿಪ್‌, ಆತ್ವವಿಶ್ವಾಸವೃದ್ಧಿ

ಕ್ರೀಡೆಯಲ್ಲಿಭಾಗವಹಿಸುವಿಕೆಯಿಂದ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣ ಬೆಳೆಯುತ್ತದೆ ಎಂದು ಜಿ.ಪಂ. ಸದಸ್ಯೆ ಮಮತಾ ಸಾಲಿ ಹೇಳಿದರು.

Vijaya Karnataka 20 Sep 2019, 5:00 am
ಶಿಕಾರಿಪುರ: ಕ್ರೀಡೆಯಲ್ಲಿಭಾಗವಹಿಸುವಿಕೆಯಿಂದ ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣ ಬೆಳೆಯುತ್ತದೆ ಎಂದು ಜಿ.ಪಂ. ಸದಸ್ಯೆ ಮಮತಾ ಸಾಲಿ ಹೇಳಿದರು.
Vijaya Karnataka Web leadership from the sport confidence in the sport
ಕ್ರೀಡೆಯಿಂದ ಲೀಡರ್‌ಶಿಪ್‌, ಆತ್ವವಿಶ್ವಾಸವೃದ್ಧಿ


ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿಸೋಮವಾರ ನಡೆದ 17 ವರ್ಷ ವಯೋಮಿತಿಯೊಳಗಿನ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದು ವಿದ್ಯಾರ್ಥಿಗಳು ಮನೆಯಿಂದ ಹೊರಬಂದು ಆಟ ಆಡದೆ ಮೊಬೈಲ್‌ ಗೇಮ್‌, ಟಿವಿ ನೋಡುವುದರಲ್ಲಿತಲ್ಲೀನರಾಗಿದ್ದಾರೆ. ಒಳ್ಳೆಯ ಮಾಧ್ಯಮವನ್ನು ಬಳಸಿಕೊಂಡು ದೇಶ ಪ್ರತಿನಿಧಿಸುವಂತಹ ಮಕ್ಕಳು ನೀವಾಗಿ ಎಂದು ಹಾರೈಸಿದರು.

ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಸಿಎಂ ಬಿ.ಎಸ್‌.ಯಡಿಯೂರಪ್ಪ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅವರು ಒತ್ತು ನೀಡಿದ್ದಾರೆ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಿಂಥೆಟಿಕ್‌ ಟ್ರ್ಯಾಕ್‌ ಮಾಡಲು ಮನವಿ ಮಾಡಲಾಗುವುದು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ. ಸದಸ್ಯೆ ರೇಣುಕಮ್ಮ ಹನುಮಂತಪ್ಪ ಮಾತನಾಡಿ, ದೈಹಿಕ ಶಿಕ್ಷಣದಿಂದ ಮಕ್ಕಳು ಸದೃಢರಾಗಿ ದೇಶ ರಕ್ಷಿಸುವ ಯೋಧರಾಗಬಹುದು, ಇಲ್ಲವೇ ಆರಕ್ಷಕರಾಗಬಹುದು ಎಂದರು.

ಜಿ.ಪಂ. ಸದಸ್ಯೆ ಅರುಂಧತಿ ರಾಜೇಶ್‌ ಮಾತನಾಡಿ, ವಿದ್ಯಾರ್ಥಿಗಳ ಆಸಕ್ತಿಗೆ ಪೋಷಕರ ಪ್ರೋತ್ಸಾಹ ಅಗತ್ಯ. ಬಲವಂತದ ಹೇರಿಕೆಯಿಂದ ಯಶಸ್ಸು ಗಳಿಸಲು ಸಾಧ್ಯವಿಲ್ಲಎಂದರು. ತಾ.ಪಂ.ಮಾಜಿ ಅಧ್ಯಕ್ಷ ಹನುಮಂತಪ್ಪ ಮಾತನಾಡಿ, ತಾಲೂಕಿನಿಂದ ಗುಂಪು ಆಟಗಳಲ್ಲಿರಾಜ್ಯ ಮಟ್ಟಕ್ಕೆ ಆಯ್ಕೆಯಾದವರಿಗೆ ರೂ.5000 ನಗದು ಹಾಗೆ ವೈಯಕ್ತಿಕ ಕ್ರೀಡೆಯಲ್ಲಿರಾಜ್ಯ ಮಟ್ಟಕ್ಕೆ ಆಯ್ಕೆಯಾದವರಿಗೆ 2000 ರೂ. ನಗದು ಬಹುಮಾನವನ್ನು ವೈಯಕ್ತಿಕವಾಗಿ ನೀಡಲಾಗುವುದು ಎಂದರು.

ಎಸ್‌.ಬಿ.ಅರುಣ್‌ಕುಮಾರ್‌, ಮಲ್ಲಿಕಾರ್ಜುನ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ವೆಂಕಟೇಶ್‌, ತಾಲೂಕು ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ರೇವಣಸಿದ್ದಪ್ಪ, ಜಿ.ಟಿ.ಸುರೇಶ್‌ ಮತ್ತಿತರರು ಇದ್ದರು. ವೆಂಕಟೇಶಪ್ಪ ಪ್ರಾಸ್ತಾವಿಕ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಆಂಜನಪ್ಪ ನಿರೂಪಿಸಿ, ಜಿ.ಎನ್‌.ವಿಜಯಕುಮಾರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ