ಆ್ಯಪ್ನಗರ

ಎಲ್ಲರಲ್ಲೂ ಸಮನ್ವಯ ಭಾವ ಮೂಡಲಿ: ಉಜ್ಜಯಿನಿ ಜಗದ್ಗುರು

ಇಂತಹ ಜಾತಿ, ಧರ್ಮದವರು ಅನ್ನುವುದಕ್ಕಿಂತ ನಾವೆಲ್ಲ ಭಾರತೀಯರು ಎನ್ನುವ ಸಮನ್ವಯ ಭಾವ ಸರ್ವರಲ್ಲಿ ಒಡಮೂಡಲಿ ಎಂದು ಉಜ್ಜಯಿನಿ ಮಹಾಪೀಠದ ಶ್ರೀಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

Vijaya Karnataka 8 Feb 2019, 5:00 am
ಶಿರಾಳಕೊಪ್ಪ: ಇಂತಹ ಜಾತಿ, ಧರ್ಮದವರು ಅನ್ನುವುದಕ್ಕಿಂತ ನಾವೆಲ್ಲ ಭಾರತೀಯರು ಎನ್ನುವ ಸಮನ್ವಯ ಭಾವ ಸರ್ವರಲ್ಲಿ ಒಡಮೂಡಲಿ ಎಂದು ಉಜ್ಜಯಿನಿ ಮಹಾಪೀಠದ ಶ್ರೀಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
Vijaya Karnataka Web SMR-07SLKP01 PHOTO 01


ತೊಗರ್ಸಿಯಲ್ಲಿ ಬುಧವಾರ ನಡೆದ ಮಳೆಹಿರೇಮಠದ ಗುರು ಪಟ್ಟಾಧಿಕಾರದ ಕಾರ್ಯಕ್ರಮದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

ಈ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಯಾಗಿದ್ದು, ಕಾಶಿಯ ಶಾಖಾ ಮಠ ಮತ್ತು ಉಜ್ಜಯಿನಿಯ ಶಾಖಾ ಮಠಗಳು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿವೆ. ಉಭಯ ಶ್ರೀಮಠಗಳಿಗೆ ಸಾವಿರ ವರ್ಷಗಳ ಇತಿಹಾಸವಿದ್ದು, ಭಕ್ತರು ಮತ್ತು ಮಠದ ಶ್ರೀಗಳ ಜತೆ ಉತ್ತಮ ಒಡನಾಟವಿದೆ ಎಂದರು.

ಕಬ್ಬಿಣ ಕಂತೀಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಜಗತ್ತಿನಲ್ಲಿ ಗುರು ಎಂಬುದು ಮೌಲ್ಯವಾಗಿದೆ. ಗುರು ಇಲ್ಲದಿರುವಾಗಲೂ ಅವರ ಉಪದೇಶ ಕ್ರಿಯಾತ್ಮಕವಾಗಿರುತ್ತದೆ. ಆನಂದ ಇದ್ದರೆ ಮನಸ್ಸಿನ ಉದ್ವೇಗ ಕಡಿಮೆಯಾಗುತ್ತದೆ. ಗುರು-ಗುರುಮಠ ಮನಸ್ಸಿನ ಸಮಾಧಾನಕ್ಕೆ ಇವೆ. ಇಲ್ಲಿ ಪರಿಹಾರ ಮತ್ತು ಮಾನಸಿಕ ಸ್ವಾಸ್ಥ್ಯತೆ ಸಿಗುತ್ತದೆ. ಪರಸ್ಪರ ಭಿನ್ನಾಭಿಪ್ರಾಯ ಮರತೆ ಗುರು ಪರಂಪರೆ ಉಳಿಸೋಣ ಎಂದರು.

ಕವಲೇದುರ್ಗ ಮಠದ ಡಾ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಯಡಿಯೂರು ಮಠದ ಶ್ರೀಗಳು ಮಾತನಾಡಿದರು.

ಮಳೇಹಿರೇಮಠದ ಹಿರಿಯ ಶ್ರೀಗಳು, ನೂತನ ಶ್ರೀಗಳು, ಸಾಲೂರು, ಮಳಲಿ,ಬಿಳಿಕಿ, ಜಡೆ, ಶಾಂತಪುರ, ಶಿಕಾರಿಪುರ ಮತ್ತು ಶಿರಾಳಕೊಪ್ಪದ ವಿರಕ್ತಮಠ, ಪಂಚವಣ್ಣಿಗೆಮಠ ಮತ್ತಿತರ ಸ್ವಾಮೀಜಿಗಳು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ