ಆ್ಯಪ್ನಗರ

ಗಾಂಧೀಜಿ ಕುರಿತು ಬಿಜೆಪಿ ನಿಲುವು ಸ್ಪಷ್ಟಪಡಿಸಲಿ

ವಿಕ ಸುದ್ದಿಲೋಕ ಹೊಸನಗರ ಧರ್ಮ, ಜಾತಿ ಆಧಾರಿತ ರಾಜಕೀಯ ಮಾಡುವ ಬಿಜೆಪಿ ಕೈಗೊಂಡಿರುವ ಗಾಂಧಿ ಸಂಕಲ್ಪ ಯಾತ್ರೆ ನಾಟ ಕೀಯ ವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ವ್ಯಂಗ್ಯ ...

Vijaya Karnataka 18 Oct 2019, 5:00 am
ಹೊಸನಗರ: ಧರ್ಮ, ಜಾತಿ ಆಧಾರಿತ ರಾಜಕೀಯ ಮಾಡುವ ಬಿಜೆಪಿ ಕೈಗೊಂಡಿರುವ ಗಾಂಧಿ ಸಂಕಲ್ಪ ಯಾತ್ರೆ ನಾಟ ಕೀಯ ವಾಗಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ವ್ಯಂಗ್ಯ ವಾಡಿದ್ದಾರೆ.
Vijaya Karnataka Web let the bjp stand on gandhiji
ಗಾಂಧೀಜಿ ಕುರಿತು ಬಿಜೆಪಿ ನಿಲುವು ಸ್ಪಷ್ಟಪಡಿಸಲಿ

ಅವರು ಇಲ್ಲಿನ ಕಾಂಗ್ರೆಸ್‌ ಕಚೇರಿ ಯಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಗಾಂಧೀಜಿಯವರಂತೆ ಬದುಕುವುದು ಅಸಾಧ್ಯದ ಮಾತು. ಕನಿಷ್ಟ ಅವರ ತತ್ವಗಳನ್ನಾದರೂ ಜೀವನ ದಲ್ಲಿಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಗಾಂಧಿ ಹಂತಕ ಗೋಡ್ಸೆ ಯನ್ನು ಪರೋಕ್ಷವಾಗಿ ಬೆಂಬಲಿಸುವ ಬಿಜೆಪಿ ಈಗ ಪಕ್ಷ ಸಂಘಟನೆಗಾಗಿ ಗಾಂಧೀಜಿ ಹೆಸರಿನಲ್ಲಿಯಾತ್ರೆ ಕೈಗೊಂ ಡಿದೆ. ಇದು ಪಾದಯಾತ್ರೆ ಯಂತೆ ಎನಿಸುತ್ತಿಲ್ಲ. ಇದನ್ನು ಕಪ್ಪೆಯಾತ್ರೆ ಎಂದು ಕರೆಯ ಬಹುದು ಎಂದು ಲೇವಡಿ ಮಾಡಿದರು.
ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌ ಸಂಘಟನೆಗಳನ್ನು ಸರ್ದಾರ್‌ ವಲ್ಲಭಬಾಯಿ ಪಟೇಲ್‌ ನಿಷೇಧಿಸಲು ಮುಂದಾಗಿದ್ದರು. ಅವರನ್ನು ಬಿಜೆಪಿ ಇಂದು ತಮ್ಮ ಪಕ್ಷದವರು ಎನ್ನುವಷ್ಟರ ಮಟ್ಟಿಗೆ ಬಿಂಬಿಸುತ್ತಿದೆ. ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದರೂ, ಮತ ಬ್ಯಾಂಕ್‌ಗಾಗಿ ಅಂಬೇಡ್ಕರ್‌ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಈಗ ಗಾಂಧೀಜಿ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಲು ಹೊರಟಿದ್ದಾರೆ. ಗಾಂಧಿ ಹತ್ಯೆಯ ಆರೋಪಿಗಳಲ್ಲಿಒಬ್ಬರಾದ ಸಾವರ್ಕರ್‌ಗೆ ಭಾರತರತ್ನ ನೀಡಲು ಮುಂದಾಗಿದ್ದಾರೆ. ಗೋಡ್ಸೆಯ ಪ್ರತಿಮೆ ನಿರ್ಮಿಸಿ, ಆರಾಧಿಸುತ್ತಿರುವ ಬಿಜೆಪಿ ಬೆಂಬಲಿತ ಸಂಘಟನೆಗಳ ತತ್ವಕ್ಕೂ ಬಿಜೆಪಿ ಕೈಗೊಂಡಿರುವ ಯಾತ್ರೆಯ ಉದ್ದೇಶಕ್ಕೂ ವೈರುಧ್ಯವಿದೆ. ತನ್ನ ನಿಲುವನ್ನು ಮೊದಲು ಸ್ಪಷ್ಟಪಡಿಸಬೇಕು. ಇಂತಹ ನಾಟಕಗಳನ್ನು ನಿಲ್ಲಿಸಬೇಕು.
ಗಾಂಧಿ ವಿರೋಧಿ ಹೇಳಿಕೆ ನೀಡುವ ಬಿಜೆಪಿ ಪದಾಧಿಕಾರಿಗಳನ್ನು ಪಕ್ಷದಿಂದ ಹೊರಹಾಕುವ ಮೂಲಕ ಪಕ್ಷ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಗಾಂಧೀಜಿ ಎಂದೂ ಜಾತಿ, ಧರ್ಮದಲ್ಲಿಭೇದ ಕಂಡವರಲ್ಲ. ಬಿಜೆಪಿ ರಾಜಕಾರಣ ಮಾಡುತ್ತಿರುವುದು ಧರ್ಮ, ಭಾವನೆಗಳ ಆಧಾರದ ಮೇಲೆ. ಬಿಜೆಪಿ ಅಥವಾ ಮೋದಿಯನ್ನು ಟೀಕಿಸುವವರನ್ನು ದೇಶದ್ರೋಹಿ ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಇಂತಹ ಪಕ್ಷ ಇಂದು ರಾಜಕೀಯ ಲಾಭಕ್ಕಾಗಿ ಮಹಾತ್ಮ ಗಾಂಧೀಜಿ ಹೆಸರನ್ನು ದುರುಪಯೋಗಪಡಿಕೊಳ್ಳುತ್ತಿದೆ ಎಂದು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ