ಆ್ಯಪ್ನಗರ

ಜನಸಾಮಾನ್ಯರಿಗೂ ಕಾನೂನು ಅರಿವಾಗಲಿ

ಭಾರತ ದೇಶದ ಸಂವಿಧಾನ ದುರ್ಬಲವಾಗಿರದೆ ಎಲ್ಲಸಮಸ್ಯೆಗೆ ಪರಿಹಾರ ನೀಡುವಂತಹದ್ದಾಗಿದೆ ಎಂದು ಹೊಸಮನೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಧನಂಜಯ ಹೇಳಿದರು.

Vijaya Karnataka 8 Nov 2019, 5:00 am
ಭದ್ರಾವತಿ: ಭಾರತ ದೇಶದ ಸಂವಿಧಾನ ದುರ್ಬಲವಾಗಿರದೆ ಎಲ್ಲಸಮಸ್ಯೆಗೆ ಪರಿಹಾರ ನೀಡುವಂತಹದ್ದಾಗಿದೆ ಎಂದು ಹೊಸಮನೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಧನಂಜಯ ಹೇಳಿದರು.
Vijaya Karnataka Web let the masses know the law
ಜನಸಾಮಾನ್ಯರಿಗೂ ಕಾನೂನು ಅರಿವಾಗಲಿ


ಅವರು ಕಾಲೇಜಿನ ಸಭಾಂಗಣದಲ್ಲಿಬುಧವಾರ ಏರ್ಪಡಿಸಿದ್ದ 'ಒಂದು ದೇಶ-ಒಂದು ಸಂವಿಧಾನ ಅಭಿಯಾನ' ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಸಾಮಾಜಿಕ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿಯಾವುದೇ ಸವಾಲು ಎದುರಿಸುವ ಸಾಮರ್ಥ್ಯವಿದೆ. ಸಂವಿಧಾನವು ಶಿಕ್ಷಕರಿಗೆ ಕೇವಲ ಬೋಧನೆಗೆ ಹಾಗೂ ವಿದ್ಯಾರ್ಥಿಗಳ ಪರೀಕ್ಷೆಗೆ ಸೀಮಿತ ವಿಷಯವಾಗಬಾರದು. ಈ ಎರಡನ್ನು ಮೀರಿ ಸಂವಿಧಾನ ಮತ್ತು ಕಾನೂನಿನ ಅರಿವು ಜನ ಸಾಮಾನ್ಯರಿಗೂ ಅಥೈರ್‍ಸಿಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು. ಪ್ರತಿಯೊಬ್ಬರಲ್ಲೂಜವಾಬ್ದಾರಿ ಮೂಡಿ ಬರಬೇಕು. ಸ್ಥಿರ ರಾಜಕೀಯ ಹಾಗೂ ಸಾಮಾಜಿಕ ನಿಯಂತ್ರಣ ಬಹು ಜನಾಂಗೀಯ ವ್ಯವಸ್ಥೆಗೆ ಪೂರಕವಾಗಿದೆ ಎಂದರು. ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಬಿ.ಬಸವರಾಜಪ್ಪ ಪ್ರಾಸ್ತಾವಿಕ ಮಾತನಾಡಿದರು. ಧನ್ಯಕುಮಾರ್‌, ಮನೋಹರ್‌, ಅಜಯಕುಮಾರ್‌, ಉಮಾಮಹೇಶ್ವರಸಿಂಗ್‌, ಅಭಿಯಾನದ ವಿದ್ಯಾರ್ಥಿಗಳಾದ ಮೋನಿಕಾ, ಕರ್ಣ, ರಶ್ಮಿ ಇತರರು ಇದ್ದರು.

--------
ಪ್ರಜಾಪ್ರಭುತ್ವದ ತಳಹದಿಯೇ ಸಂವಿಧಾನ. ದೇಶೀಯ ಸಂವಿಧಾನ ಬಹುಧರ್ಮೀಯರ ಹಾಗೂ ಎಲ್ಲಜನಾಂಗೀಯ ವ್ಯವಸ್ಥೆಗೆ ಪ್ರಬಲವಾಗಿದೆ. ಇದರಲ್ಲಿದೇಶದ ಎಲ್ಲಸಮಸ್ಯೆಗೆ ಪರಿಹಾರವಿದೆ. ಇದರ ಕೀರ್ತಿ ಸಂವಿಧಾನ ಕತೃ ಡಾ.ಬಿ.ಆರ್‌. ಅಂಬೇಡ್ಕರ್‌ಗೆ ಸಲ್ಲುತ್ತದೆ.
-ಡಾ.ಧನಂಜಯ, ಹೊಸಮನೆ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರು \



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ