ಆ್ಯಪ್ನಗರ

ಅರ್ಹರಿಗೆ ಯೋಜನೆ ತಲುಪಲಿ

ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಸರಕಾರಿ ಯೋಜನೆಗಳನ್ನು ಅರ್ಹ ರೀತಿಯಲ್ಲಿ ಜಾರಿಗೆ ತರಲು ಪ್ರಯತ್ನಿಸಬೇಕೆಂದು ಸಮಾಜ ಸೇವಕ ಎನ್‌.ಸಿ.ಗಂಗಾಧರ್‌ ಹೇಳಿದರು.

Vijaya Karnataka 25 Mar 2019, 8:39 pm
ಸಾಗರ: ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಸರಕಾರಿ ಯೋಜನೆಗಳನ್ನು ಅರ್ಹ ರೀತಿಯಲ್ಲಿ ಜಾರಿಗೆ ತರಲು ಪ್ರಯತ್ನಿಸಬೇಕೆಂದು ಸಮಾಜ ಸೇವಕ ಎನ್‌.ಸಿ.ಗಂಗಾಧರ್‌ ಹೇಳಿದರು.
Vijaya Karnataka Web SMR-23SGR4


ತಾಲೂಕಿನ ಹೆಗ್ಗೋಡು ಸಮೀಪದ ಗಡಿಕಟ್ಟೆಯಲ್ಲಿ ಗುರುನಲಿಸು ಶಿವಶರಣ ಚನ್ನಯ್ಯ ಸೇವಾ ಟ್ರಸ್ಟ್‌ಗೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಅಧಿಕಾರಿಗಳು ಸದರಿ ಎನ್‌ಜಿಓಗಳ ಮೂಲಕ ಸರಕಾರದ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅವಕಾಶ ಮಾಡಿಕೊಡುತ್ತಿಲ. ಎನ್‌ಜಿಓಗಳು ಸಹ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಆಪಾದಿಸಿದರು.

ಇದೇ ಸಂದರ್ಭ ಶಿವಶರಣ ಚನ್ನಯ್ಯ ನಡೆದು ಬಂದ ದಾರಿ ಪುಸ್ತಕವನ್ನು ಬಿಡುಗಡೆ ಮಾಡಿದ ಡಿಎಸ್‌ಎಸ್‌ ರಾಜ್ಯ ಸಮಿತಿ ಸದಸ್ಯ ರಾಜೇಂದ್ರ ಬಂದಗದ್ದೆ ಮಾತನಾಡಿ, ಸರಕಾರದ ಯೋಜನೆಯಲ್ಲಿ ಅರ್ಹ ಫಲಾನುಭವಿಗಳ ಆಯ್ಕೆ ಹಾಗೂ ಎನ್‌ಆರ್‌ಇಜಿ ಮುಂತಾದ ಯೋಜನೆಗಳ ಸಂಪೂರ್ಣ ಬಳಕೆ ಕುರಿತು ಜನಪರ ಸಂಘಟನೆಗಳು ಜಾಗೃತಿ ಮೂಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದರು. ಸೇವಾ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಎಚ್‌.ಎಂ.ರಂಗಪ್ಪ ಹೊನ್ನೇಸರ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮುರುಗೇಂದ್ರ ವೀರಾಪುರ, ಸುಬ್ಬಪ್ಪ ಕಾಗೋಡು, ಆರ್‌.ಬಿ.ಲಕ್ಷ ್ಮಣ ತಾಳಗುಪ್ಪ ಪಾಲ್ಗೊಂಡಿದ್ದರು. ಸಿಂಧು ಪ್ರಾರ್ಥಿಸಿ, ಎಸ್‌.ನವೀನ್‌ ಅಡೂರು ವಂದಿಸಿ, ಬಿಂದು ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ