ಆ್ಯಪ್ನಗರ

ಸಂಶೋಧನಾ ಕಂದಕ ತುಂಬುವ ಕಾರ್ಯವಾಗಲಿ

ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿಎಲ್ಲರೂ ಕಾರ್ಯಗತರಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಎಸ್‌ಎಂಒ ಡಾ. ಸತೀಶ್ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

Vijaya Karnataka 20 Sep 2019, 5:00 am
ಶಿವಮೊಗ್ಗ: ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಕುರಿತು ಇನ್ನಷ್ಟು ಸಂಶೋಧನೆಗಳು ನಡೆಯಬೇಕಿದೆ. ಈ ನಿಟ್ಟಿನಲ್ಲಿಎಲ್ಲರೂ ಕಾರ್ಯಗತರಾಗಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಎಸ್‌ಎಂಒ ಡಾ. ಸತೀಶ್ಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
Vijaya Karnataka Web let the research trench fill
ಸಂಶೋಧನಾ ಕಂದಕ ತುಂಬುವ ಕಾರ್ಯವಾಗಲಿ


ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಲಯ, ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಾಲಯ ಹಾಗೂ ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋದಲ್ಲಿನಗರದ ಡಿಎಚ್‌ಒ ಕಚೇರಿ ಸಭಾಂಗಣದಲ್ಲಿ'ಕೆಎಫ್‌ಡಿ' ಕುರಿತು ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿಮಾತನಾಡಿದರು.

ಒಂದು ಪ್ರದೇಶದಿಂದ ಇನ್ನೊಂದೆಡೆ ಕಾಯಿಲೆ ಹರಡುತ್ತಿದ್ದು, ಇದಕ್ಕೆ ಕಾರಣ ಮತ್ತು ನೀಡಲಾಗುತ್ತಿರುವ ಚಿಕಿತ್ಸೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕಂದಕವಿದೆ. ಈ ನಿಟ್ಟಿನಲ್ಲಿಅಧಿಕ ಒತ್ತು ನೀಡಬೇಕೆಂದು ಸಲಹೆ ನೀಡಿದರು.

ಎನ್‌ವಿಬಿಡಿಸಿಟಿ ವಿಭಾಗದ ಸಂಶೋಧನೆ ಅಧಿಕಾರಿ ಡಾ.ಮಹ್ಮದ್‌ ಶರೀಫ್‌ ಮಾತನಾಡಿ, ಕಾಡು ನಾಶ, ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಮಳೆಯಿಂದಾಗಿ ಉಣುಗುಗಳ ಪ್ರಮಾಣ ಅಧಿಕಗೊಂಡು ಕಾಯಿಲೆ ತೀವ್ರ ಸ್ವರೂಪ ಪಡೆದಿದೆ ಎಂದರು.

ವಿಡಿಎಲ್‌ ಡಿಸಿಎಂಒ ಡಾ.ಗುಡದಪ್ಪ ಕಸಬಿ ಮಾತನಾಡಿ, ಕಾಡು ಮತ್ತು ಗದ್ದೆಯ ಸಮೀಪವಿರುವ ಹಳ್ಳಿಗಳು ಮತ್ತು ಕಳೆದ ವರ್ಷ ಸೋಂಕು ಪೀಡಿತ ಪ್ರದೇಶಗಳಲ್ಲಿಕಡ್ಡಾಯವಾಗಿ ಸಮೀಕ್ಷೆ ಕಾರ್ಯ ಕೈಗೊಳ್ಳಬೇಕು. ಇದು ಸರಿಯಾಗಿ ಆದರೆ ಕಾಯಿಲೆ ತಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಡಿಎಚ್‌ಒ ಡಾ.ರಾಜೇಶ್‌ ಸುರಗೀಹಳ್ಳಿ, ಡಿಎಸ್‌ಒ ಡಾ.ಬಿ.ಎಸ್‌.ಶಂಕ್ರಪ್ಪ, ಶಿವಮೊಗ್ಗದ ವಿಡಿಎಲ್‌ ಉಪ ನಿರ್ದೇಶಕ ಡಾ.ಎಸ್‌.ಕೆ.ಕಿರಣ್‌, ಬೆಳಗಾವಿಯ ಎನ್‌ಐಟಿಎಂ ರಿಸರ್ಚ್ ಅಸೋಸಿಯೇಟ್‌ ಡಾ. ದರ್ಶನ್‌, ಡಾ.ಬಾಲಕೃಷ್ಣ, ಡಾ. ಪಲ್ಲವಿ, ಸಂಧ್ಯಾ ಸೇರಿದಂತೆ ವಿವಿಧ ಜಿಲ್ಲೆಗಳ ಡಿಎಚ್‌ಒ, ಡಿಎಸ್‌ಒ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ