ಆ್ಯಪ್ನಗರ

ಸವಿತಾ ಮಹರ್ಷಿಗಳ ವಿಚಾರಧಾರೆ ಪಸರಿಸಲಿ

ಯುವ ಜನಾಂಗಕ್ಕೆ ಸವಿತಾ ಮಹರ್ಷಿಗಳ ಬದುಕು ಆದರ್ಶಪ್ರಾಯವಾಗಿದೆ ಎಂದು ಕೇಂದ್ರ ಸವಿತಾ ಸಮಾಜದ ಸದಸ್ಯ ಆರ್‌.ಟಿ.ಗೋಪಾಲ್‌ ತಿಳಿಸಿದರು.

Vijaya Karnataka 13 Feb 2019, 5:00 am
ಹೊಸನಗರ : ಯುವ ಜನಾಂಗಕ್ಕೆ ಸವಿತಾ ಮಹರ್ಷಿಗಳ ಬದುಕು ಆದರ್ಶಪ್ರಾಯವಾಗಿದೆ ಎಂದು ಕೇಂದ್ರ ಸವಿತಾ ಸಮಾಜದ ಸದಸ್ಯ ಆರ್‌.ಟಿ.ಗೋಪಾಲ್‌ ತಿಳಿಸಿದರು.
Vijaya Karnataka Web SMR-12hosp3


ಇಲ್ಲಿನ ತಾಲೂಕು ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ‍್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮೂಲದ ಕುರಿತು ಅರಿವು ಹೊಂದಿರಬೇಕು. ಸವಿತಾ ಮಹರ್ಷಿಗಳು ಸಾಮವೇದ ರಚನೆ ಮಾಡಿದ್ದರು. ಇವರ ಪುತ್ರಿ ಗಾಯತ್ರಿ ಮಂತ್ರ ರಚಿಸಿದ್ದರು ಎನ್ನುವ ಐಹಿತ್ಯವಿದೆ. ಸವಿತಾ ಸಮಾಜದವರು ಇಂದು ಹಲವಾರು ಸಮಾಜಮುಖಿ ಕಾರ‍್ಯಗಳಲ್ಲಿ ಗುರುತಿಸಿಕೊಂಡಿದ್ದು, ಸಮಾಜ ತನ್ನ ಪಾವಿತ್ರ್ಯತೆಯನ್ನು ಕಾಪಾಡಿಕೊಂಡಿದೆ. ಆದರೆ ಆರ್ಥಿಕ, ಶೈಕ್ಷ ಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಸರಕಾರ ಕಲ್ಪಿಸಿರುವ ಸವಲತ್ತುಗಳನ್ನು ಬಳಸಿಕೊಂಡು ಮುಖ್ಯವಾಹಿನಿಗೆ ಬರಬೇಕಿದೆ. ಒಂದು ಕಾಲದಲ್ಲಿ ತೀವ್ರ ಶೋಷಣೆಗೆ ಒಳಗಾಗಿದ್ದ ಸಮಾಜ ಪ್ರತಿ ಹಂತದಲ್ಲಿಯೂ ಪ್ರಗತಿ ಕಾಣಬೇಕಿದೆ. ಸಂಘಟನೆಯ ಮೂಲಕ ಹೋರಾಟಕ್ಕೆ ನಾಂದಿ ಹಾಡುವ ಅಗತ್ಯವಿದೆ ಎಂದರು.

ಸವಿತಾ ಮಹರ್ಷಿಗಳ ಜಯಂತಿ ಆಚರಣೆಗೆ ಸರಕಾರ ಆದೇಶಿಸಿರುವುದು ಸ್ವಾಗತಾರ್ಹ. ಕೇವಲ ಆಚರಣೆಯಿಂದ ಸಮಾಜದ ಉದ್ದಾರ ಸಾಧ್ಯವಾಗದು. ಮಹರ್ಷಿಗಳ ವಿಚಾರಧಾರೆಗಳನ್ನು ಪುಸ್ತಕರೂಪದಲ್ಲಿ ಹೊರತರುವ ಅಗತ್ಯವಿದೆ ಎಂದರು.

ತಾ.ಪಂ.ಅಧ್ಯಕ್ಷ ವಾಸಪ್ಪಗೌಡ ಅಧ್ಯಕ್ಷ ತೆ ವಹಿಸಿದ್ದರು. ತಹಸೀಲ್ದಾರ್‌ ಚಂದ್ರಶೇಖರ ನಾಯ್ಕ್‌, ತಾ.ಪಂ. ಇಒ ಡಾ.ಎಂ.ಎಸ್‌.ರಾಮಚಂದ್ರ, ಸಮಾಜದ ಅಧ್ಯಕ್ಷ ಬಾಬುರಾವ್‌, ರಾಘವೇಂದ್ರ, ಮಂಜುನಾಥ, ಷಣ್ಮುಖ ಭಂಡಾರಿ, ಸತೀಶ್‌, ಹಿರಿಯಣ್ಣ, ಸಾಹಿನಾಥ್‌, ಸುರೇಶ್‌, ಚಂದ್ರು, ವೆಂಕಟರಮಣ, ಶಶಿಧರ ಭಂಡಾರಿ, ಸುರೇಶ್‌, ಸುಕೇಶ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ