Please enable javascript.Linganamakki Reservoir,Water Scarcity: ಲಿಂಗನಮಕ್ಕಿ ಜಲಾಶಯಕ್ಕೂ ನೀರಿನ ಕೊರತೆ - linganamakki reservoir is also short of water - Vijay Karnataka

Water Scarcity: ಲಿಂಗನಮಕ್ಕಿ ಜಲಾಶಯಕ್ಕೂ ನೀರಿನ ಕೊರತೆ

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 5 May 2023, 7:16 am
Subscribe

Sharavati Hydropower Project: ಮಳೆಯನ್ನೇ ಆಶ್ರಯಿಸಿರುವ ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಕೊರತೆ ಉಂಟಾಗಿದೆ. ನೀರು ಕಡಿಮೆಯಾಗಿ ವಿದ್ಯುತ್ ಅಭಾವ ಕಾಣಿಸಿಕೊಳ್ಳುವುದು ಪ್ರತಿವರ್ಷದ ಸಮಸ್ಯೆಯಾಗಿದೆ. ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯಕ್ಕೆ ಹೋಲಿಸಿದರೆ ಶೇ 19.87 ರಷ್ಟು ಮಾತ್ರ ನೀರು ಉಳಿದಿದೆ. ಶರಾವತಿ ಕಣಿವೆಯ ಜಲ ವಿದ್ಯುತ್ ಯೋಜನೆಗೆ ಲಿಂಗನಮಕ್ಕಿ ಜಲಾಶಯವೇ ಮೂಲ ಆಧಾರ ಆಗಿದೆ. ರಾಜ್ಯದ ವಿದ್ಯುತ್ ಬಳಕೆಯ ಶೇ 30 ರಷ್ಟು ಶರಾವತಿ ಕಣಿವೆಯ ಜಲ ವಿದ್ಯುತ್ ಯೋಜನೆಯಿಂದಲೇ ಲಭ್ಯವಾಗುತ್ತದೆ.

ಹೈಲೈಟ್ಸ್‌:

  • ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯದೆ ಬಿರುಬಿಸಲಿನ ತಾಪದಲ್ಲಿ ಲಿಂಗನಮಕ್ಕಿ ಜಲಾಶಯ ಸೊರಗುತ್ತಿದೆ. ಜಲಾಶಯದ ಸಂಗ್ರಹಣಾ ಸಾಮರ್ಥ್ಯಕ್ಕೆ ಹೋಲಿಸಿದರೆ ಶೇ.19.87ರಷ್ಟು ಮಾತ್ರ ನೀರು ಉಳಿದಿದೆ
  • ಜಲಾಶಯದ ನೀರಿನ ಮಟ್ಟ ಗರಿಷ್ಠ 1819 ಅಡಿಗಳಾಗಿದ್ದು, ಈ ವರ್ಷ 1816.35 ರಷ್ಟು ಭರ್ತಿಯಾಗಿತ್ತು. ಮೇ 3 ರಂದು ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1762.25 ಅಡಿಗಳಿದ್ದು ಕಳೆದ ವರ್ಷ ಇದೇ ದಿನ 1769.75 ಅಡಿಗಳಿತ್ತು.
  • ಮಳೆಯನ್ನೇ ಅವಲಂಬಿಸಿದ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಕಡಿಮೆಯಾಗಿ ವಿದ್ಯುತ್‌ ಅಭಾವ ಕಾಣಿಸಿಕೊಳ್ಳುವುದು ಪ್ರತಿ ವರ್ಷದ ಸಮಸ್ಯೆಯಾದರೂ ಈ ವರ್ಷ ಜಲಾಶಯದಲ್ಲಿ ನೀರು ಸಂಗ್ರಹ ತೃಪ್ತಿಕರವಾಗಿದೆ.
Linganamakki dam
ಸಾಂದರ್ಭಿಕ ಚಿತ್ರ
  • ಕಲಗಾರು ಲಕ್ಷಿತ್ರ್ಮೕನಾರಾಯಣ ಹೆಗಡೆ,
ತಾಳಗುಪ್ಪ (ಶಿವಮೊಗ್ಗ): ಶರಾವತಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯದೆ ಬಿರುಬಿಸಲಿನ ತಾಪದಲ್ಲಿ ಲಿಂಗನಮಕ್ಕಿ ಜಲಾಶಯ ಸೊರಗುತ್ತಿದೆ. ಜಲಾಶಯದ ಸಂಗ್ರಹಣಾ ಸಾಮರ್ಥ್ಯಕ್ಕೆ ಹೋಲಿಸಿದರೆ ಶೇ.19.87ರಷ್ಟು ಮಾತ್ರ ನೀರು ಉಳಿದಿದ್ದು, ವಿದ್ಯುತ್‌ ಬೇಡಿಕೆ ಹೆಚ್ಚಾದರೆ ಜಲಾಶಯ ಬರಿದಾಗುವ ಸಾಧ್ಯತೆ ಹೆಚ್ಚಿದೆ.
ಶರಾವತಿ ಕಣಿವೆಯ ಜಲವಿದ್ಯುತ್‌ ಯೋಜನೆಗೆ ಲಿಂಗನಮಕ್ಕಿ ಜಲಾಶಯವೇ ಮೂಲಾಧಾರ. ಈ ಜಲಾಶಯವನ್ನು ಅವಲಂಬಿಸಿ 1035 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಶರಾವತಿ ಜಲ ವಿದ್ಯುದಾಗರ, 139 ಮೆಗಾವಾಟ್‌ ಉತ್ಪಾಧನಾ ಸಾಮರ್ಥ್ಯದ ಮಹಾತ್ಮಾಗಾಂಧಿ ವಿದ್ಯುದಾಗರ, 55 ಮೆಗಾವಾಟ್‌ ಉತ್ಪಾದನಾ ಸಾಮರ್ಥ್ಯದ ಲಿಂಗನಮಕ್ಕಿ ವಿದ್ಯುದಾಗರ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದ ವಿದ್ಯುತ್‌ ಬಳಕೆಯ ಶೇ.30 ರಷ್ಟು ಶರಾವತಿ ಕಣಿವೆಯ ಜಲ ವಿದ್ಯುದೋಜನೆಯಿಂದಲೇ ಲಭ್ಯವಾಗುತ್ತದೆ.

Karnataka Elections 2023: ಮಲೆನಾಡು ಭಾಗದ ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರ ದೊಡ್ಡ ಸವಾಲು!

ಜಲಾಶಯದ ನೀರಿನ ಮಟ್ಟ ಗರಿಷ್ಠ 1819 ಅಡಿಗಳಾಗಿದ್ದು, ಈ ವರ್ಷ 1816.35 ರಷ್ಟು ಭರ್ತಿಯಾಗಿತ್ತು. ಮೇ 3 ರಂದು ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1762.25 ಅಡಿಗಳಿದ್ದು ಕಳೆದ ವರ್ಷ ಇದೇ ದಿನ 1769.75 ಅಡಿಗಳಿತ್ತು.

ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯ 156 ಟಿಎಂಸಿ( 4291.75 ಎಂಸಿಎಂ) ಯಾಗಿದ್ದು ಈ ವರ್ಷದ ಮೇ 3 ರಂದು 30.130 (ಶೇ 19.87) ನೀರು ಸಂಗ್ರಹವಿದೆ. ಕಳೆದ ವರ್ಷದ ಈ ದಿನ 39.25 ಟಿಎಂಸಿ ನೀರು ಸಂಗ್ರಹವಿದ್ದು (198ಶೇ 25.87 ಟಿಎಂಸಿ) ಈ ವರ್ಷ 9 ಟಿಎಂಸಿ ನೀರು ಕಡಿಮೆಯಾಗಿದೆ.

ಶರಾವತಿ ಕಣಿವೆ ಜಲವಿದ್ಯುತ್‌ ಯೋಜನೆಯ ನಾಲ್ಕು ವಿದ್ಯುದಾಗರಗಳಲ್ಲಿ ಕಳೆದ 24 ಗಂಟೆಯಲ್ಲಿ 17.493 ಮಿಲಿಯನ್‌ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಿದೆ. ಈ ಅವಧಿಯಲ್ಲಿ 232.610 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಬಳಕೆಯಾಗಿದ್ದು , ಹೆಚ್ಚಿನ ಕೊಡುಗೆ ಉಷ್ಣ ವಿದ್ಯುತ್‌ ಸ್ಥಾವರದ್ದಾಗಿದೆ.

ಹಿಂದೂಪರ ಕಾರ್ಯಕರ್ತ ಹರ್ಷನ ಬಲಿದಾನ ವ್ಯರ್ಥವಾಗೊಲ್ಲ: ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚೆನ್ನಬಸಪ್ಪ
ಮಳೆಯನ್ನೇ ಅವಲಂಬಿಸಿದ ಲಿಂಗನಮಕ್ಕಿ ಜಲಾಶಯದಲ್ಲಿ ನೀರು ಕಡಿಮೆಯಾಗಿ ವಿದ್ಯುತ್‌ ಅಭಾವ ಕಾಣಿಸಿಕೊಳ್ಳುವುದು ಪ್ರತಿ ವರ್ಷದ ಸಮಸ್ಯೆಯಾದರೂ ಈ ವರ್ಷ ಜಲಾಶಯದಲ್ಲಿ ನೀರು ಸಂಗ್ರಹ ತೃಪ್ತಿಕರವಾಗಿದೆ. ಮಿತವ್ಯಯ ಸಾಧಿಸಿದರೆ ಮಳೆಗಾಲ ಪ್ರಾರಂಭದವರೆಗೂ ತೊಂದರೆಯಾಗುವುದಿಲ್ಲ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಕಳೆದ 24 ಗಂಟೆಯಲ್ಲಿ ಲಿಂಗನಮಕ್ಕಿ ಪವರ್‌ ಹೌಸ್‌ನಲ್ಲಿ 0.468 ಮಿಲಿಯನ್‌ ಯುನಿಟ್‌, ಶರಾವತಿ ವಿದ್ಯುದಾಗರದಲ್ಲಿ9.040 ಮಿಲಿಯನ್‌ ಯುನಿಟ್‌, ಮಹಾತ್ಮಾಗಾಂಧಿ ವಿದ್ಯುದಾಗರದಲ್ಲಿ1.633 ಮಿಲಿಯನ್‌ ಯುನಿಟ್‌ ವಿದ್ಯುತ್‌ ಉತ್ಪಾದಿಸಲಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 49.88 ಮಿಲಿಯನ್‌ ಯುನಿಟ್‌ ವಿದ್ಯುತ್‌ ಬಳಕೆಯಾಗಿದ್ದು ಅದರಲ್ಲಿ11.141 ಮಿಲಿಯನ್‌ ಯುನಿಟ್‌ ಶರಾವತಿ ಕಣಿವೆಯ ಜಲವಿದ್ಯುತ್‌ ಯೋಜನೆಯಿಂದ ಉತ್ಪಾದನೆಯಾಗಿದೆ.
ಸೌಮ್ಯಶ್ರೀ ಮಾರ್ನಾಡ್
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ